ರಾಯಚೂರು: ಲಿಂಗಾಯತ ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಕುರಿತು ಡಿಸಿ ಮೂಲಕ ಸಿಎಂಗೆ ಬುಧವಾರ ಮನವಿ ಸಲ್ಲಿಸಿದರು. ಬೇಡ ಜಂಗಮರು ಹಾಗೂ ಲಿಂಗಾಯತ ಬೇಡ ಜಂಗಮರಿಗೆ ಸಾಕಷ್ಟು ವ್ಯಾತ್ಯಾಸಗಳಿವೆ. ಇದನ್ನರಿಯದೆ ಪರಿಶಿಷ್ಟ ಜಾತಿ ಪ್ರಮಾಣ ನೀಡಬೇಕು ಎನ್ನುವುದು ಸರಿಯಲ್ಲ.
ಲಿಂಗಾಯತ ಬೇಡ ಜಂಗಮರು ಮನೆಗಳಿಗೆ ಭಿಕ್ಷೆ ಬೇಡಲು ಹೋದಾಗ ಕಾಲುಗಳಿಗೆ ನಮಸ್ಕರಿಸಿ ದಾನ ನೀಡಿ ಗೌರವಿಸುತ್ತಾರೆ. ಆದರೆ, ಬೇಡ ಜಂಗಮರು ಮನೆಗಳಿಗೆ ಭಿಕ್ಷಕ್ಕೆ ಹೋದರೆ ಹಳಸಿದ ಅನ್ನ ನೀಡುತ್ತಾರೆ. ಇವರು ರಸ್ತೆಯಲ್ಲಿ ಸಣ್ಣ ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಾರೆ. ಈ ರೀತಿ ಅನೇಕ ವ್ಯಾತ್ಯಾಸಗಳಿವೆ. ಆದರೆ, ಲಿಂಗಾಯತ ಬೇಡ ಜಂಗಮ ಸಮುದಾಯಕ್ಕೆಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ನಿಡುಮಾಮಿಡಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೆನೀಡಬಾರದು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಮತೆ ತೆರವು; ಬುಲ್ಡೋಜರ್ ಆರ್ಭಟ
ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಸದನದಲ್ಲಿ ಲಿಂಗಾಯತ ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 12 ಷರತ್ತು ಒಳಗೊಂಡು ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಬೇಕು. ಲಿಂಗಾಯತ ಬೇಡ ಜಂಗಮರಿಗೆ ಯಾವುದೇ ಕಾರಣಕ್ಕೂ ಎಸ್‌ಸಿ ಪ್ರಮಾಣ ಪತ್ರ ನೀಡಬಾರದು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಸಂಘಟನಾ ಸಂಚಾಲಕ ಶರಣಪ್ಪ ದಿನ್ನಿ, ಸದಸ್ಯರಾದ ಚನ್ನಬಸವ ಯಕ್ಲಾಸಪುರ, ಜೆ.ಪ್ರಕಾಶ ಸಿರವಾರ, ಈರಣ್ಣ ಕರೆಬೂದೂರು ಇದ್ದರು.