Advertisement

ಮಕ್ಕಳಿಗೆ ಮೊಬೈಲ್‌ ಕೊಡಬೇಡಿ

12:09 PM Nov 16, 2018 | |

ಮೈಸೂರು: ಆಧುನಿಕ ಯುಗದಲ್ಲಿ ಮೊಬೈಲ್‌, ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಮಕ್ಕಳಲ್ಲಿ ಅಸಹಜ ಭಾವನೆ ಬಿತ್ತುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಮತ ಕಳವಳ ವ್ಯಕ್ತಪಡಿಸಿದರು.

Advertisement

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಘಟಕ, ಒಡನಾಡಿ ಮತ್ತು ಯೂನಿಸೆಫ್ ಸಹಯೋಗದಲ್ಲಿ ಹೂಟಗಳ್ಳಿಯ ಒಡನಾಡಿ ಮಡಿಲು ಸಂಸ್ಥೆಯಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಮೊಬೈಲ್‌, ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಮಕ್ಕಳಲ್ಲಿ ಅಸಹಜ ಭಾವನೆ ಬಿತ್ತುತಿರುವುದು ಆಘಾತಕಾರಿ ಬೆಳೆವಣಿಗೆಯಾಗಿದೆ.

ಇದರ ಜತೆಗೆ ಮಕ್ಕಳಲ್ಲಿ ಕಥೆ ಹೇಳುವುದು ಸೇರಿದಂತೆ ಇನ್ನಿತರ ಹವ್ಯಾಸಗಳು ಕಾಣೆಯಾಗಿದೆ. ಇದರಿಂದ ಮಕ್ಕಳಲ್ಲಿ ಕಲ್ಪನಾ ಶಕ್ತಿ ಕುಗುತ್ತಿದೆ. ತಾವು ಶಾಲೆಯಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪಠ್ಯದಲ್ಲಿ ಲಿಂಗ ಅಸಮಾನತೆ ಜತೆಗೆ ಮನೆಯಲ್ಲಿ ಭಯದಿಂದ ಬದಕುಬೇಕಾದ ಪರಿಸ್ಥಿತಿ ಇತ್ತು.

ಆದರೆ ಇಂದಿನ ಶಿಕ್ಷಣ ಪದ್ಧತಿ ಹಾಗೂ ಪಠ್ಯದಲ್ಲಿ ಸಮಾನತೆ, ತಂತ್ರಜ್ಞಾನವಿದ್ದು, ಮಕ್ಕಳು ಮುಕ್ತ ಮನಸ್ಸಿನಿಂದ ಮಾತನಾಡುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ. ಆ ಮೂಲಕ ತಮ್ಮ ರಕ್ಷಣೆ ಮತ್ತು ಹಕ್ಕುಗಳನ್ನು ಕೇಳುವಂತಾಗಬೇಕು ಎಂದರು. 

ದೌರ್ಜನ್ಯ ಖಂಡಿಸಿ: ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದ ಜಿಲ್ಲಾ ಸಂರಕ್ಷಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಮಕ್ಕಳು ಎಲ್ಲಿ ಸಮಸ್ಯೆ ಎದುರಿಸಿದರೂ ನಮ್ಮನ್ನು ಸಂಪರ್ಕಿಸಬೇಕು. ನಿಮ್ಮ ಸುತ್ತಮುತ್ತ ಆಗುವ ದೌರ್ಜನ್ಯಗಳನ್ನು ಬೆಳಕಿಗೆ ತರಬೇಕು. ನಿಮಗೆ ಯಾವುದೇ ಸಮಸ್ಯೆ ಕಾಡಿದರು 1098ಕ್ಕೆ ಕರೆ ಮಾಡಿ ನಿಮ್ಮ ಆತಂಕ, ಸಮಸ್ಯೆಗಳನ್ನು ಹೇಳಿಕೊಳ್ಳಬಹದು.

Advertisement

ನಾವು ಖುದ್ದಾಗಿ ಹಾಜರಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಮಕ್ಕಳ ಸಂರಕ್ಷಣಾ ಘಟಕದ ಕಾರ್ಯವೈಖರಿ ಬಗ್ಗೆ ತಿಳಿಸಿಕೊಟ್ಟರು. ಇದೇ ವೇಳೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಧನಂಜಯ ಅವರು ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ, ವಕೀಲ ಶ್ರೀನಾಥರಾಜೇ ಅರಸ್‌, ಒಡನಾಡಿ ಮೇಲ್ವಿಚಾರಕಿ ಎಸ್‌.ಪ್ರಭಾಮಣಿ ಇನ್ನಿತರರಿದ್ದರು. 

ಸಮಾನ ಶಿಕ್ಷಣ, ಸೌಲಭ್ಯ ನೀಡಿ…: ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ಜತೆಗೆ ಸಮಾನ ಸೌಲಭ್ಯಗಳನ್ನು ನೀಡಬೇಕೆಂದು ಮಕ್ಕಳು ಒತ್ತಾಯಿಸಿದರು. ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಮಾತನಾಡಿದ ವಿವಿಧ ಶಾಲೆಗಳ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೈಕಲ್‌ ವಿತರಣೆ ವಿಳಂಬ, ಅಸಮರ್ಪಕವಾಗಿ ಹಾಲು ವಿತರಣೆ ಮಾಡುವುದು, ಬಾಲ್ಯವಿಹಾವ, ಬಾಲ ಕಾರ್ಮಿಕ ಪದ್ಧತಿಗಳ ಬಗ್ಗೆ ಪ್ರಸ್ತಾಪಿಸಿದರು.

ಜತೆಗೆ ಶೈಕ್ಷಣಿಕ ಸಮಾನತೆ, ಖಾಸಗಿ ಶಾಲೆಯಲ್ಲಿ ಇರುವ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲೂ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಈ ಸಂಸತ್‌ನಿಂದ ಆಯ್ಕೆಯಾಗುವ ಇಬ್ಬರು ಮಕ್ಕಳು ಸೇರಿದಂತೆ ರಾಜ್ಯದ ಬೇರೆ ಜಿಲ್ಲೆಗಳಿಂದ ಆಯ್ಕೆಯಾಗುವ 60 ಮಕ್ಕಳು ವಿಧಾನಸೌಧದಲ್ಲಿ ಹಕ್ಕು ಮಂಡನೆ ಮಾಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next