Advertisement

ಸಿರಿಯನ್ನು ನೆಚ್ಚಿ ಕೆಡಬೇಡ: ಸಿದ್ದೇಶ್ವರ ಸ್ವಾಮೀಜಿ

09:02 PM May 08, 2019 | Lakshmi GovindaRaj |

ಮೈಸೂರು: ಬಸವಣ್ಣನವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇಯಾದರೆ ಬಸವ ಜಯಂತಿ ಆಚರಣೆ ಸಾರ್ಥಕವಾದಂತೆ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಅಖೀಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿರುವ ಬಸವ ಜಯಂತಿಯಲ್ಲಿ ಅವರು ಪ್ರವಚನ ನೀಡಿದರು.

Advertisement

ಇದ ನೆಚ್ಚಿ ಕೆಡಬೇಡ, ಸಿರಿಯಂಬುದ, ಪೂಜಿಸು ಕೂಡಲ ಸಂಗಮದೇವನ ಎಂಬ ವಚನದ ಮೂಲಕ ಬಸವಣ್ಣ ಕೊಟ್ಟ ಅದ್ಭುತವಾದ ಸಂದೇಶವಿದು. ಅರಮನೆಯೊಳಗಿದ್ದರೂ ಸಿರಿ, ಸಂಪತ್ತು, ಅಧಿಕಾರ, ಸಾಮ್ರಾಜ್ಯವನ್ನು ನೆಚ್ಚಿಕೊಂಡಿರಬೇಡ. ನೂರು ವರ್ಷ ಸಂತೋಷದಿಂದ ಬದುಕು. ಯಾವುದನ್ನೂ ನೆಚ್ಚಿಕೊಳ್ಳಬೇಡ ಎಂಬುದೇ ಈ ವಚನದ ಆಶಯ ಎಂದರು.

ಪರಮತೃಪ್ತಿ ಹೊಂದುವವರು ಶರಣರು, ಅನುಪಮೇಯರು. ಇವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಬಾಹ್ಯ ಸಂಪತ್ತಿನಿಂದ ಇವರನ್ನು ವರ್ಣಿಸಲು ಆಗುವುದಿಲ್ಲ. ಶರಣನೆನ್ನಿಸಿಕೊಳ್ಳಬೇಕಾದರೆ ಅಂತರಂಗದಲ್ಲಿ ನಾವೇ ಪ್ರವೇಶ ಮಾಡಬೇಕು. ಅದಕ್ಕೆ ಅನುಭಾವ ಮತ್ತು ಪ್ರಶಾಂತಿ ಎಂಬ ಎರಡು ಸಂಪತ್ತುಗಳು ಬೇಕು ಎಂದು ವಿಶ್ಲೇಷಿಸಿದರು.

ಅಲ್ಲಮ ಪ್ರಭು ಬಸವಣ್ಣರ ಕುರಿತು, ಬಸವಣ್ಣ ಹಬ್ಬಿದ ಮೂರು ಬೆಟ್ಟಗಳಂತೆ ಅಧಿಕಾರ, ಅಂತಸ್ತು, ಸಿರಿತನ ಎಲ್ಲವಿದ್ದರೂ ಅದಕ್ಕೆ ಮನಸ್ಸು ಹಾಕದವರು. ಅಕ್ಕ ನಾಗಮ್ಮ ಹೇಳುವಂತೆ ಬಸವಣ್ಣ ಮಹಾ ದಾಸೋಹಿ. ಶಿವಪಥವನ್ನು ಅರುಹಿದವರು. ಮಹಾದಾಸೋಹಿ ಎಂದರೆ ಯಾವುದು ನನ್ನದಲ್ಲ, ಎಲ್ಲವೂ ದೇವನದು ಎಂಬ ಕಲ್ಪನೆ ಎಂದು ವಿವರಿಸಿದರು.

ಯಾವ ವಸ್ತು ನಮ್ಮಿ¾ಂದಾಗಿದೆ. ಎಲ್ಲವೂ ನಾವು ಬರುವುದಕ್ಕಿಂತ ಮುಂಚೆಯೇ ತುಂಬಿ ನಿಂತಿದೆ. ಈ ನಿಸರ್ಗ, ಜಲ, ಭೂ ಮಂಡಲ ಮತ್ತು ಪ್ರಕಾಶ ಮಂಡಲವನ್ನು ಕಾಣಲು ಬಂದ ಜೀವಕಣ ಈ ಮಾನವ. ಇದನ್ನು ನೋಡಿ ಸಂತೋಷ ಪಡಲು ನಾವು ಬಂದವರು. ದೇವನ ಆತಿಥಿಗಳಾದ ನಾವೆಲ್ಲರೂ ಏನನ್ನಾದರೂ ಗಳಿಸಿ ಮಾಲೀಕರಾರಲು ಬಂದಿಲ್ಲ. ಇಲ್ಲಿರುವುದನ್ನು ಅನುಭವಿಸಿ ಸಂತೋಷ ಪಡಲು ಬಂದವರು. ಆ ಸಂತೋಷವನ್ನು ಅಂತರಂಗಕ್ಕೆ ತುಂಬಿಕೊಳ್ಳಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next