Advertisement

ಮಾತೃಭಾಷೆಯಲ್ಲಿ  ಸಂವಹನಕ್ಕೆ ಕೀಳರಿಮೆ ಬೇಡ

06:00 AM Nov 25, 2018 | Team Udayavani |

ಮಂಗಳೂರು: ಮಾತೃಭಾಷೆಯಲ್ಲಿ ಮಾತನಾಡಲು ಯಾವುದೇ ಕೀಳರಿಮೆ ಇರಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷಾ ವ್ಯಾಮೋಹಕ್ಕೆ ಸಿಲುಕಿ ಮಾತೃ ಭಾಷೆಗೆ ಮನ್ನಣೆ ಕಡಿಮೆಯಾಗುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು.

Advertisement

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬ್ಯಾರಿ ಕಲಾರಂಗ ಮಂಗಳೂರು ಸಹಯೋಗದಲ್ಲಿ ನಗರದ ಪುರಭವನದಲ್ಲಿ ಶನಿವಾರ ನಡೆದ ಬ್ಯಾರಿ ಭಾಷಾ ಕಲಾವಿದರ ಸಮಾವೇಶ “ಬ್ಯಾರಿ ಒಪ್ಪನೆ-ಕೋಲ್‌ಕಲಿ ಪಂತ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಾತೃಭಾಷೆ ಮಾತನಾಡಲು ಹಿಂಜರಿದರೆ ಸಮಾಜದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟಂತೆ. ಬ್ಯಾರಿ ಭಾಷೆಯನ್ನು ಕರಾವಳಿ ಮಾತ್ರವಲ್ಲದೆ ಮಲೆನಾಡು, ಚಿಕ್ಕಮಗಳೂರು ಸೇರಿದಂತೆ ಬೆಂಗಳೂರಿನ ಕೆಲ ಪ್ರದೇಶಗಳಲ್ಲೂ ಮಾತನಾಡುತ್ತಾರೆ. ಬ್ಯಾರಿ ಭಾಷೆಯ ಕಲೆ, ಸಂಸ್ಕೃತಿ ಉಳಿಯಬೇಕಿದೆ. ಬ್ಯಾರಿ ಸಾಹಿತ್ಯಕ್ಕೆ ಮತ್ತಷ್ಟು ಮನ್ನಣೆ ಸಿಗಬೇಕಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್‌ ಮೊಹಮ್ಮದ್‌ ಕುಂಜತ್ತಬೈಲ್‌ ಮಾತನಾಡಿ, ಬ್ಯಾರಿ ಭಾಷೆ ಉಳಿಸುವ ನಿಟ್ಟಿನಲ್ಲಿ ಸಾಧನೆಗಳ ದಾಖಲೀಕರಣ ಅಗತ್ಯ ಎಂದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್‌ ಮಹಮದ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌, ವಾರ್ತಾಧಿಕಾರಿ ಬಿ.ಎ. ಖಾದರ್‌ ಷಾ, ಕಾರ್ಪೊರೇಟರ್‌ ಅಬ್ದುಲ್‌ ರವೂಫ್‌, ಅಬ್ದುಲ್‌ ಅಜೀಜ್‌ ಬೈಕಂಪಾಡಿ, ಹುಸೈನ್‌ ಕಾಟಿಪಳ್ಳ, ಯು.ಎಚ್‌. ಖಾಲಿದ್‌ ಉಜಿರೆ, ಅಬ್ದುಲ್‌ ರೆಹಮಾನ್‌, ಹಸನಬ್ಬ ಮೂಡಬಿದಿರೆ, ಬಶೀರ್‌ ಅಹ್ಮದ್‌, ಬಶೀರ್‌ ಬೈಕಂಪಾಡಿ ಸೇರಿದಂತೆ ಮತ್ತಿತರರು ಇದ್ದರು.

ಬ್ಯಾರಿ ಭವನ ನಿರ್ಮಾಣಕ್ಕೆ ಮನವಿ
ಮಂಗಳೂರಿನಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್‌ ಮಹಮದ್‌ ಅವರು ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್‌, ಬ್ಯಾರಿ ಭವನ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಚರ್ಚಿಸಿ, ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಗಮನಸೆಳೆಯುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next