Advertisement

ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳೇ… ದಿನಪತ್ರಿಕೆ ಓದಲು ಮರೆಯಬೇಡಿ!

03:50 AM Mar 28, 2017 | |

ಕೇಂದ್ರ/ಕರ್ನಾಟಕ ಲೋಕಸೇವಾ ಆಯೋಗಗಳು ನಡೆಸುವ ನಾಗರೀಕ ಸೇವಾ ಪರೀಕ್ಷೆ ಹಾಗು ಗ್ರೂಪ್‌-ಬಿ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳು, ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಕಂಬೈನ್‌ ಗ್ರ್ಯಾಜುಯೇಟ್‌ ಲವೆಲ್‌ ಪರೀಕ್ಷೆ, ಬ್ಯಾಂಕಿಂಗ್‌ ಪರೀಕ್ಷೆ ಇತ್ಯಾದಿಗಳಲ್ಲಿ ಸಾಮಾನ್ಯ ಜಾnನದ ಪತ್ರಿಕೆಗಳು ಕಡ್ಡಾಯವಾಗಿರುತ್ತದೆ. ಇದರಲ್ಲಿ ಕೇಳಲಾಗುವ ಪ್ರಚಲಿತ ವಿದ್ಯಮಾನಗಳ ಬಗೆಗಿನ ಮಾಹಿತಿಯು ಕೇವಲ ದಿನಪತ್ರಿಕೆಗಳಲ್ಲಿ ಮಾತ್ರ ಲಭ್ಯವಾಗುವುದರಿಂದ ಅಭ್ಯರ್ಥಿಗಳು ತಮ್ಮ ದೈನಂದಿನ ಓದಿನಲ್ಲಿ ದಿನಪತ್ರಿಕೆಗಳನ್ನು ಬಹಳ ಗಮನವಿಟ್ಟು ಅಭ್ಯಾಸ ಮಾಡಬೇಕು. 

Advertisement

ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಪ್ರಮುಖ ಅಥವಾ ಆಶ್ಚರ್ಯಕರ ಘಟನೆಗಳು ಘಟಿಸುತ್ತಲೇ ಇರುತ್ತವೆ. ಇದರಲ್ಲಿ ಎಲ್ಲರಿಗೂ ಎಲ್ಲ ಘಟನೆಗಳು ಅಷ್ಟೊಂದು ಪ್ರಮುಖವಾಗಿರುವುದಿಲ್ಲ. ಕೆಲವರಿಗೆ ರಾಜಕೀಯ ಆಗುಹೋಗುಗಳ ಬಗೆಗೆ ಹೆಚ್ಚಿನ ಆಸಕ್ತಿಯಿದ್ದರೆ ಇನ್ನು ಕೆಲವರಿಗೆ ಆರ್ಥಿಕ ಬೆಳವಣಿಗೆಗಳ ಬಗೆಗೆ ಹೆಚ್ಚಿನ ಕುತೂಹಲವಿರುತ್ತದೆ. ವಯಸ್ಸಿನ ಅನುಗುಣವಾಗಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಅಭಿರುಚಿ ಹಾಗು ತಾನು ಮಾಡುವ ಕೆಲಸಕ್ಕೆ ಅನುಗುಣವಾಗಿ ಮಾಹಿತಿಯ ಪ್ರಾಮುಖ್ಯತೆ ಬದಲಾಗುತ್ತಾ ಹೋಗುತ್ತದೆ. ಮಾಹಿತಿಯು ನಮಗೆ ನಾನಾ ಮೂಲಗಳಿಂದ ಹರಿದು ಬರುತ್ತದೆ. ಅದರಲ್ಲಿ ದಿನಪತ್ರಿಕೆ ಹಾಗು ನಿಯತಕಾಲಿಕೆಗಳು ಪ್ರಮುಖವಾದವು. ಡಿಜಿಟಲ್‌ ಯುಗದಲ್ಲಿ ಜಗತ್ತಿನ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಕಲೆಹಾಕಬಹುದು. ಪ್ರತಿಕ್ಷಣದ ಆಗುಹೋಗುಗಳನ್ನು ತ್ವರಿತವಾಗಿ ಹಾಗು ಸುಲಭವಾಗಿ ಆನ್‌ಲೈನ್‌ನಲ್ಲಿ ಲಭ್ಯವಿರುವ ನೂರಾರು ಇ-ಪತ್ರಿಕೆಗಳ ಮುಖಾಂತರ ಪಡೆಯಬಹುದು. 

ದಿನಪತ್ರಿಕೆಯನ್ನು ಪ್ರತಿಯೊಬ್ಬರೂ ಬೇರೆ ಬೇರೆ ಕಾರಣಗಳಿಗೆ ಓದುತ್ತಾರೆ. ಪ್ರತಿಯೊಬ್ಬರ ಅಭಿರುಚಿಯೂ ಬೇರೆಬೇರೆ ತೆರನಾಗಿರುತ್ತದೆ. ಕೆಲವರು ರಾಜಕೀಯ ಸುದ್ದಿಗಳನ್ನು ತಿಳಿದುಕೊಳ್ಳಲು ಓದಿದರೆ ಇನ್ನು ಕೆಲವರು ಮನರಂಜನಾ ಮಾಹಿತಿಯನ್ನು ತಿಳಿಯಲು ಓದುತ್ತಾರೆ. ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ದೃಷ್ಟಿಕೋನ ಕೇವಲ ಪರೀûಾ ತಯಾರಿಗೆ ಮಾತ್ರ ಸೀಮಿತವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಸಫ‌ಲತೆಯಲ್ಲಿ ದಿನಪತ್ರಿಕೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇತ್ತೀಚಿನ ಬಹುತೇಕ ಎಲ್ಲ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಉದಾಹರಣೆಗೆ, ಕೇಂದ್ರ/ಕರ್ನಾಟಕ ಲೋಕಸೇವಾ ಆಯೋಗಗಳು ನಡೆಸುವ ನಾಗರೀಕ ಸೇವಾ ಪರೀಕ್ಷೆ ಹಾಗು ಗ್ರೂಪ್‌-ಬಿ ತಾಂತ್ರಿಕ/ತಾಂತ್ರಿಕೇತರ ಹುದ್ದೆಗಳಿಗೆ ನಡೆಸುವ ಪರೀಕ್ಷೆಗಳು, ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ ಕಂಬೈನ್‌x ಗ್ರ್ಯಾಜುಯೇಟ್‌ ಲವೆಲ್‌ ಪರೀಕ್ಷೆ, ಬ್ಯಾಂಕಿಂಗ್‌ ಪರೀಕ್ಷೆ ಇತ್ಯಾದಿಗಳಲ್ಲಿ ಸಾಮಾನ್ಯ ಜಾnನದ ಪತ್ರಿಕೆಗಳು ಕಡ್ಡಾಯವಾಗಿರುತ್ತದೆ. ಇದರಲ್ಲಿ ಕೇಳಲಾಗುವ ಪ್ರಚಲಿತ ವಿದ್ಯಮಾನಗಳ ಬಗೆಗಿನ ಮಾಹಿತಿಯು ಕೇವಲ ದಿನಪತ್ರಿಕೆಗಳಲ್ಲಿ ಮಾತ್ರ ಲಭ್ಯವಾಗುವುದರಿಂದ ಅಭ್ಯರ್ಥಿಗಳು ತಮ್ಮ ದೈನಂದಿನ ಓದಿನಲ್ಲಿ ದಿನಪತ್ರಿಕೆಗಳನ್ನು ಬಹಳ ಗಮನವಿಟ್ಟು ಅಭ್ಯಾಸ ಮಾಡಬೇಕು. 

ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಪ್ರತಿಯೊಂದು ಮಾಹಿತಿಯೂ ಪರೀಕ್ಷೆಗಳಿಗೆ ಉಪಯುಕ್ತವಾಗಿರುವುದಿಲ್ಲ. ಪರೀಕ್ಷಾ ತಯಾರಿಗೆ ಸಮಯ ಬಹಳ ಕಡಿಮೆಯಿರುತ್ತದೆ. ಹಾಗಾಗಿ ಪರೀಕ್ಷಾರ್ಥಿಗಳು ದಿನಪತ್ರಿಕೆಗಳಿಂದ ಮಾಹಿತಿಯನ್ನು ಕಲೆ ಹಾಕುವ ಸಮಯದಲ್ಲಿ, ಯಾವುದನ್ನು ಓದಬೇಕು ಎಂಬುದಕ್ಕಿಂತ ಮುಖ್ಯವಾಗಿ ಯಾವುದನ್ನು ಓದಬಾರದು ಎಂಬುದರ ಬಗ್ಗೆ ಗಮನವಹಿಸಬೇಕು. 

ಯಾವ ಬಗೆಯ ಮಾಹಿತಿ ಹೆಚ್ಚು ಉಪಯುಕ್ತ?  
ಪ್ರಚಲಿತ ವಿದ್ಯಮಾನಗಳಲ್ಲಿ ಮುಖ್ಯವಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಯೋಜನೆಗಳು, ಸಂವಿಧಾನದ ಬೆಳವಣಿಗೆಗಳು, ಭಾರತದ ಆರ್ಥಿಕ ಅಭಿವೃದ್ದಿ, ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿನ ಆಗುಹೋಗುಗಳು, ಪ್ರತಿಷ್ಠಿತ ವ್ಯಕ್ತಿಗಳು, ಪ್ರಶಸ್ತಿಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಮ್ಮೇಳನಗಳು ಇತ್ಯಾದಿ ವಿಷಯಗಳ ಬಗೆಗೆ ಗಮನ ಕೊಡಬೇಕು. ಸರ್ಕಾರದ ಯೋಜನೆಗಳು ಹಾಗು ನೀತಿಗಳ ಬಗೆಗೆ ಓದುವಾಗ ಅಂಕಿ- ಅಂಶಗಳಿಗೆ ಹೆಚ್ಚಿನ ಮಹತ್ವವನ್ನು ಕೊಡುವುದರ ¸ದಲಾಗಿ ಆ ಯೋಜನೆಗಳ ಮುಖ್ಯ ಉದ್ದೇಶದ ಬಗೆಗೆ ತಿಳಿದುಕೊಳ್ಳಬೇಕು. ರಾಜಕೀಯ ಪಕ್ಷಗಳ ಬಗ್ಗೆ ಅಥವಾ ರಾಜಕೀಯ ಮುಖಂಡರ ಹೇಳಿಕೆಗಳ ಬಗ್ಗೆ ಪ್ರಶ್ನೆಗಳು ಬಹಳ ವಿರಳವಾಗಿರುತ್ತದೆಯಾದ್ದರಿಂದ ಈ ವಿಷಯಗಳಲ್ಲಿ ಹೆಚ್ಚು ಸಮಯವನ್ನು ಕಳೆಯದಿರುವುದು ಒಳಿತು. ಭಾರತೀಯ ಸಂವಿಧಾನ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಉತ್ಛ ನ್ಯಾಯಾಲಯದ ತೀರ್ಪುಗಳು ಮತ್ತು ನಿರ್ದೇಶನಗಳನ್ನು ಇತ್ತೀಚಿನ ನಾಗರೀಕ ಸೇವಾ ಮುಖ್ಯ ಪರೀಕ್ಷೆಗಳಲ್ಲಿ ಕೇಳಲಾಗುತ್ತಿರುವುದರಿಂದ ಇಂತಹ ಮಾಹಿತಿಯ ಬಗೆಗೆ ವಿಶೇಷ ಗಮನ ವಹಿಸಬೇಕು. 

Advertisement

ತಂತ್ರಜಾnನ, ಸಂಶೋಧನೆಗಳ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಮತ್ತಿತರ ವಿಷಯಗಳು ಬಹಳ ಮುಖ್ಯ. ಹಾಗೆಯೇ ಪರಿಸರ ಮತ್ತು ಜೀವವೈವಿಧ್ಯದ ಬಗೆಗಿನ ಮಾಹಿತಿಯು ಬಹಳ ಉಪಯುಕ್ತ. ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯಗಳ ಮೇಲೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಕೂಡ ವಿಶೇಷ ಗಮನವನ್ನು ನೀಡಬೇಕು. 

ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ. ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಹಾಗಾಗಿ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿ ಭಾರತದ ವಿದೇಶಿ ನೀತಿ ಮತ್ತು ಅಂತಾರಾಷ್ಟ್ರೀಯ ಹಾಗು ದ್ವಿಪಕ್ಷೀಯ ಸಂಬಂಧಗಳ ಬಗೆಗೆ ವಿಶೇಷವಾಗಿ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. 

ಇತ್ತೀಚಿನ ಪರೀಕ್ಷೆಗಳಲ್ಲಿ ಹೆಚ್ಚಾಗಿ ವಿಮಶಾìತ್ಮಕ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಲು ದಿನಪತ್ರಿಕೆಗಳಲ್ಲಿನ ಸಂಪಾದಕೀಯ ಪುಟಗಳನ್ನು ಓದಬೇಕು. ಈ ಪುಟಗಳಲ್ಲಿ ಪ್ರಕಟವಾಗುವ ಅಂಕಣಗಳು ವಿಮರ್ಶೆಯಾಧಾರಿತ ಪ್ರಶ್ನೆಗಳನ್ನು ಉತ್ತರಿಸಲು ಸಹಾಯಕವಾಗುತ್ತದೆ. ಒಂದು ವಿಷಯವನ್ನು ನಾನಾ ದೃಷ್ಟಿಕೋನಗಳಿಂದ ತಿಳಿದುಕೊಳ್ಳಲು ಈ ಅಂಕಣಗಳು ಬಹಳ ಸೂಕ್ತ. 

ಇಂದಿನ ಮಾಹಿತಿ ತಂತ್ರಜಾnನ ಯುಗದಲ್ಲಿ ಎಲ್ಲಾ ರೀತಿಯ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳನ್ನು ಇ- ಪೇಪರ್‌ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಓದಬಹುದು ಕೇವಲ ಒಂದು ಲ್ಯಾಪ್‌ಟಾಪ್‌/ ಟ್ಯಾಬ್‌ಲೆಟ್‌ ಅಥವಾ ಸ್ಮಾರ್ಟ್‌ಫೋನ್‌ ಬಳಸಿಕೊಂಡು ಪರೀಕ್ಷೆಗೆ ಬೇಕಾದ ಎಲ್ಲ ರೀತಿಯ ಮಾಹಿತಿಯನ್ನು ಕಲೆಹಾಕಬಹುದು. 

ಪ್ರಶಾಂತ್‌. ಎಸ್‌. ಚಿನ್ನಪ್ಪನವರ್‌, ಚಿತ್ರದುರ್ಗ

Advertisement

Udayavani is now on Telegram. Click here to join our channel and stay updated with the latest news.

Next