Advertisement

ಕುಲ ಕುಲವೆಂದು ಹೊಡೆದಾಡದಿರಿ…

04:44 PM Nov 07, 2017 | |

ಯಾದಗಿರಿ: ನಿಷ್ಠೆ ಭಕ್ತಿಯೊಂದಿಗೆ ಕೃಷ್ಣನ ದರ್ಶನ ಪಡೆದ ಕನಕದಾಸರು ಮಹಾನ್‌ ದೈವ ಭಕ್ತರಾಗಿದ್ದರು ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಗುರುಮಠಕಲ್‌ ಶಾಸಕ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ನಗರಸಭೆ ಹಾಗೂ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ
ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ದಾರ್ಶನಿಕರಲ್ಲಿ ಭಕ್ತ ಕನಕದಾಸರೂ ಒಬ್ಬರಾಗಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆಗೆ ಕಾರಣೀಕರ್ತರಾಗಿದ್ದಾರೆ ಎಂದರು. ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆ ಏನಾದರೂ ಬಲ್ಲಿರಾ? ಎಂಬ ತತ್ವ ಸಂದೇಶ ನೀಡಿ ಸಮಾಜ ಏಕತೆಗೆ ಶ್ರಮಿಸಿದ ಮಹಾನ್‌ ಸಂತರಾಗಿದ್ದಾರೆ ಎಂದು ತಿಳಿಸಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ದೇವಿಂದ್ರಪ್ಪ ಹಳ್ಳಿಮನಿ ಉಪನ್ಯಾಸ ನೀಡಿ, ಬೀದಿ ಬೀದಿಗಳಲ್ಲಿ ಕೀರ್ತನೆಗಳ ಹಾಡುತ್ತಾ ಜನರನ್ನು ಜಾಗೃತಿಗೊಳಿಸಿದ ಕನಕದಾಸರು ಶ್ರೇಷ್ಠ ಭಕ್ತರು. ಅವರ ತತ್ವಗಳಲ್ಲಿ ನೀತಿಯುತ ಪದಗಳು ಅಡಗಿವೆ. ಅವುಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ಪೂಜಾ (ಪ್ರಥಮ), ರವಿಚಂದ್ರ (ದ್ವಿತೀಯ) ಹಾಗೂ ಜೋತಿ (ತೃತೀಯ) ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.

Advertisement

ಇದಕ್ಕೂ ಮುಂಚೆ ನಗರದ ಕನಕ ವೃತ್ತದಿಂದ ಕಕ್ಕೇರಾ ಗವೀರಂಗ ಕ್ಯಾಂಪ್‌ ನ ಜಟ್ಟೆಪ್ಪ ಯಲಗಟ್ಟಿ ಡೊಳ್ಳಿ ಕಲಾ
ತಂಡದಿಂದ ಡೊಳ್ಳು ಪ್ರದರ್ಶನದೊಂದಿಗೆ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ನಗರಸಭೆ ಅಧ್ಯಕ್ಷೆ ಲಲಿತ ಅನಪುರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪೂರ,
ಕುರುಬ ಸಮಾಜ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಚಂದ್ರಶೇಖರ ವಾರದ, ಬುಚ್ಚಣ್ಣ ಜೈಗ್ರಾಂ, ಮಲಣ್ಣ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಅಪರ ಜಿಲ್ಲಾಧಿಕಾರಿ ಜಗದೀಶ ನಾಯ್ಕ ಸೇರಿದಂತೆ ಇತರರಿದ್ದರು. ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ಯುವ ಸಾಹಿತಿ ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next