Advertisement

ಭಾರತ-ಚೀನಾ ಸಂಬಂಧ ಕೆಡಿಸುವಿಕೆ ಬೇಡ

01:21 PM Jun 08, 2019 | Team Udayavani |

ಮುಧೋಳ: ಭಾರತ-ಚೀನಾ ದೇಶಗಳ ನಡುವೆ 1962ರಲ್ಲಿ ನಡೆದ ಯುದ್ಧ ದುರದೃಷ್ಟದ ಸಂಗತಿ. ಅದು ನಡೆಯಬಾರ‌ದಿತ್ತು. ಚೀನಾ-ಭಾರತದ ಜನರ ನಡುವೆ ಪ್ರೀತಿ ಇದೆ. ರಾಜಕೀಯ ಕಾರಣಕ್ಕಾಗಿ ಈ ಸಂಬಂಧವನ್ನು ಕೆಲವರು ಕೆಡಿಸುತ್ತಿದ್ದಾರೆ ಎಂದು ಚೀನಾ ದೇಶದ ಯುವ ಉದ್ಯಮಿ ಲಿಮಿಂಗ್‌ ಜಿಯಾನ್‌ ಹೇಳಿದರು.

Advertisement

ಮುಧೋಳದ ನಿರಾಣಿ ಉದ್ಯಮ ಸಮೂಹಕ್ಕೆ ವ್ಯಾಪಾರ ವಹಿವಾಟು ಅಭಿವೃದ್ಧಿ ಉದ್ದೇಶದಿಂದ ಭೇಟಿ ನೀಡಿದ ಅವರು ಕಾರ್ಖಾನೆಯ ಪರವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಭಾರತ-ಚೀನಾ ನಡುವೆ ವ್ಯಾಪಾರ ವಹಿವಾಟು ಹೆಚ್ಚುತ್ತಿದೆ. ಕೈಗಾರಿಕೆಗಳಿಗೆ ಸಂಬಂಧಿಸಿದ ವ್ಯವಹಾರ-ಉದ್ಯೋಗಗಳು ಬೆಳೆಯುತ್ತಿವೆ. ಇದೊಂದು ಉತ್ತಮ ಬೆಳವಣಿಗೆ ಎಂದರು.

ಭಾರತ-ಚೀನಾ ದೇಶಗಳ ಸಂಸ್ಕೃತಿ ಬಹಳಷ್ಟು ಸಾಮ್ಯ ಹೊಂದಿದೆ. ಚೀನಾ ದೇಶದಲ್ಲಿ ಆಚರಣೆಯಲ್ಲಿರುವ ಬೌದ್ಧ ಧರ್ಮ ಭಾರತದ ಕೊಡುಗೆಯಾಗಿದೆ. ಭಾರತದ ದೀಪಾವಳಿ ಹಾಗೂ ಚೀನಾ ದೇಶ ವಾರ್ಷಿಕ ಹಬ್ಬ ಒಂದೇ ರೀತಿಯಾಗಿದೆ. ಎರಡೂ ದೇಶಗಳ ಕೌಟುಂಬಿಕ ವಿಧಾನಗಳು ಕೂಡಾ ಒಂದೇ ಬಗೆಯಾಗಿವೆ. ಭಾರತದ ನೋಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ ಬಗ್ಗೆ ಚೀನಿ ದೇಶದ ಜನತೆ ಬಹಳ ಅಭಿಮಾನ ಹೊಂದಿದ್ದಾರೆ. ಅಲ್ಲಿಯ ಪಠ್ಯಪುಸ್ತಕ ಗಳಲ್ಲಿ ಟ್ಯಾಗೋರ ಅವರ ಬಹಳಷ್ಟು ಕವಿತೆಗಳನ್ನು ಸೇರಿಸಲಾಗಿದೆ. ಅಲ್ಲಿಯ ಶಾಲೆ-ಕಾಲೇಜುಗಳಲ್ಲಿ ರವೀಂದ್ರನಾಥ ಟ್ಯಾಗೋರ ಅವರ ಫೋಟೋ ಹಾಕಲಾಗಿದೆ. ಭಾರತ-ಚೀನಾ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಸಮರ್ಥವಾಗಿ ನಡೆಯುತ್ತಿವೆ. ಚೀನಿ ದೇಶದ ಕಲಾವಿದರು ಅನೇಕ ಭಾರಿ ಬೆಂಗಳೂರು, ಮೈಸೂರು ಭಾಗಕ್ಕೆ ಬಂದು ಕಲಾ ಪ್ರದರ್ಶನ ನೀಡಿದ್ದಾರೆ. ಭಾರತದ ಹಿಂದಿ ಚಲನಚಿತ್ರಗಳ ಬಗ್ಗೆ ಹಾಗೂ ಗಾಯಕರ ಬಗ್ಗೆ ಇಡೀ ಚೀನಿ ಜನತೆ ಬಹಳ ಪ್ರೀತಿ ಹೊಂದಿದೆ. ಅಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಹಿಂದಿ ಚಲನಚಿತ್ರಗಳನ್ನು ಜನ ಮುಗಿಬಿದ್ದು ನೋಡುತ್ತಾರೆ ಎಂದು ಅವರು ಹೇಳಿದರು. ನಿರ್ದೇಶಕ ವಿಜಯ ಮುರುಗೇಶ ನಿರಾಣಿ ಲಿಮಿಂಗ್‌ ಜಿಯಾನ್‌ ಅವರನ್ನು ಕಾರ್ಖಾನೆ ಪರವಾಗಿ ಸನ್ಮಾನಿಸಿದರು.

ಮಲ್ಲಿಕಾರ್ಜುನ ಹೆಗ್ಗಳಗಿ, ಬಸವರಾಜ ಶೆಲ್ಲಿಕೇರಿ, ರಾಮನಗೌಡ ನಾಡಗೌಡ, ಸಂದೇಶ, ನಾಗರಾಜ ನಾಡಕರ್ಣಿ, ಅಶೋಕ ದೇವರಡ್ಡಿ, ಶಿಂಧೆ, ಸುರೇಶ ಅಕ್ಕಿಮರಡಿ, ಕುಮಾರ ಡುಮ್ಮಾಳಿ, ನಿಂಗಪ್ಪ ಗೂಗಿಹಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next