Advertisement

ವೈದ್ಯರ ಶಿಫಾರಸ್ಸಿಲ್ಲದೇ ಔಷಧ ವಿತರಿಸಬೇಡಿ

09:12 PM Jun 19, 2019 | Team Udayavani |

ಹುಣಸೂರು: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಗರದ ಔಷಧ ವ್ಯಾಪಾರಿಗಳು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪಟ್ಟಣ ಠಾಣೆ ಪಿಎಸ್‌ಐ ಮಹೇಶ್‌ ಮನವಿ ಮಾಡಿದರು. ನಗರ ಠಾಣೆ ವತಿಯಿಂದ ತಾಲೂಕು ಔಷಧ ವ್ಯಾಪಾರಿಗಳಿಗಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹುಣಸೂರು ನಗರ ವ್ಯಾಪ್ತಿಯಲ್ಲಿ ನಗರದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿಲ್ಲ.

Advertisement

ಆದರೂ ಯುವಕರು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆಂಬ ಅನುಮಾನ ನಾಗರಿಕರಿಂದ ವ್ಯಕ್ತವಾಗಿದೆ. ಕೆಲವೊಂದು ಔಷಧ ವ್ಯಾಪಾರಿಗಳು ಮತ್ತು ಬರಿಸುವ, ಮಾನಸಿಕ ಸ್ಥಿತಿಯನ್ನು ಕದಡುವ ಕೆಲ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಬಗ್ಗೆ ವದಂತಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಔಷಧ ವ್ಯಾಪಾರಿಗಳ ಸಭೆ ಆಯೋಜಿಸಲಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಾರಾಟಗಾರರ ಪಾತ್ರವೂ ಬಹುಮುಖ್ಯವಾದುದು ಎಂದರು.

ಮಾದಕ ವ್ಯಸನಕ್ಕೆ ದಾಸನಾದ ವ್ಯಕ್ತಿ ತನ್ನ ಕುಟುಂಬ, ಸಂಬಂಧ ಮತ್ತು ಸಮಾಜ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಸಮಾಜಕ್ಕೆ ಶಾಪವಾಗುತ್ತಾನೆ. ಅವನ ಭವಿಷ್ಯವೂ ಹಾಳಾಗುತ್ತದೆ. ಗ್ರಾಹಕರು ನಿಮ್ಮನ್ನೂ ಒಂದು ರೀತಿಯಲ್ಲಿ ವೈದ್ಯರೆಂಬಂತೆ ಗೌರವಿಸುತ್ತಾರೆ.

ಹೀಗಾಗಿ ನೀವು ಕೇವಲ ವ್ಯಾಪಾರಿದೃಷ್ಟಿಯಲ್ಲಿ ವ್ಯವಹರಿಸದೇ ಸಾಮಾಜಿಕ ಆರೋಗ್ಯವನ್ನು ಕಾಪಾಡಲು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು. ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳು ವಿತರಿಸಬಾರದು ಹಾಗೂ ಮತ್ತು ಬರುವಂತಹ, ನಿದ್ರೆಔಷಧವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದೆಂದು ಸೂಚಿಸಿದರು.

ಸಂಘದ ಹಿರಿಯ ಸದಸ್ಯ ಮೂರ್ತಿ ಮಾತನಾಡಿ, ತಾಲೂಕಿನ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಸಂಘವೂ ಕೈಜೋಡಿಸಲಿದೆ. ಇಲಾಖೆಯ ಆಶಯದಂತೆ ನಾವು ಖಂಡಿತವಾಗಿ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Advertisement

ಸಭೆಯಲ್ಲಿ ಸಂಘದ ಕಾರ್ಯದರ್ಶಿ ನಾಗಭೂಷಣ್‌, ಸದಸ್ಯರಾದ ಭಾಗ್ಯಕುಮಾರ್‌, ಗುರು, ಮಾಧುರಾವ್‌, ಶಿವಕುಮಾರ್‌, ಪ್ರಸನ್ನ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next