Advertisement

ಒಬ್ಬನ ಅವಲಂಬನೆ ಬೇಡ: ಕಪಿಲ್ದೇವ್‌ ಕಿವಿಮಾತು

01:44 AM May 31, 2019 | Team Udayavani |

ಹೊಸದಿಲ್ಲಿ: ವಿಶ್ವಕಪ್‌ ಗೆಲ್ಲಬೇಕಿದ್ದರೆ ಒಬ್ಬನನ್ನೇ ಅವಲಂಬಿಸುವ ಪ್ರವೃತ್ತಿಯನ್ನು ಬಿಡಬೇಕೆಂದು ಭಾರತ ತಂಡಕ್ಕೆ 1983ರಲ್ಲಿ ಚೊಚ್ಚಲ ವಿಶ್ವಕಪ್‌ ತಂದುಕೊಟ್ಟ ತಂಡದ ನಾಯಕ ಕಪಿಲ್ ದೇವ್‌ ಕಿವಿಮಾತು ಹೇಳಿದ್ದಾರೆ.

Advertisement

ಆಟದಲ್ಲಿ ಪೂರ್ಣ ತಂಡ ಸಹಭಾಗಿಯಾಗುವಂತೆ ಮಾಡುವುದು ಮುಖ್ಯ. ತಂಡವಾಗಿ ಆಡಿದರೆ ಮಾತ್ರ ಗೆಲ್ಲಬಹುದು. ಒಬ್ಬನ ಅವಲಂಬನೆ ಅಪಾಯಕಾರಿ. ಪ್ರತಿ ಪಂದ್ಯಕ್ಕೂ ಪೂರ್ಣ ಸಾಮರ್ಥ್ಯದೊಂದಿಗೆ ಮೈದಾನಕ್ಕಿಳಿಯಬೇಕು. ಇದು ಕಪಿಲ್ ಹೇಳಿರುವ ಕೆಲವು ಹಿತವಚನಗಳು.

ಇದೇ ವೇಳೆ ಕಪಿಲ್ ಭಾರತದ ಬೌಲರ್‌ಗಳನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಬೌಲರ್‌ಗಳ ತಾಳಮೇಳ ಅದ್ಭುತವಾಗಿದೆ. ಎದುರಾಳಿಗಳೂ ನಮ್ಮ ಬೌಲಿಂಗ್‌ ಪಡೆಯನ್ನು ಗೌರವಿಸುತ್ತಿದ್ದಾರೆ. ಆಲ್ ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಆಟ ಭಾರತದ ಗೆಲುವಿನಲ್ಲಿ ನಿರ್ಣಾಯಕವಾಗಲಿದೆ. ಪಾಂಡ್ಯಗೆ 10 ಓವರ್‌ಗಳನ್ನು ನೀಡಬಹುದು. ಹಾಗೆಯೇ ಬಿಗ್‌ ಹಿಟ್ ಮೂಲಕ ರನ್‌ ದೇಣಿಗೆಯನ್ನೂ ನೀಡುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ ಕಪಿಲ್.

ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್ಗೆ ಇಂಗ್ಲಂಡ್‌ನ‌ ಪಿಚ್‌ನಲ್ಲಿ ಆಡಿದ ಅನುಭವ ಇಲ್ಲದಿರಬಹುದು. ಇಂಥ ಅನುಭವ ರಹಿತ ಬೌಲರ್‌ಗಳು ಪ್ರತಿ ತಂಡದಲ್ಲೂ ಇದ್ದಾರೆ. ಯಾದವ್‌ ಮತ್ತು ಚಾಹಲ್ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಅನುಭವ ಧಾರಾಳ ಸಾಕು ಎಂದು ಕಪಿಲ್ ವಿಶ್ಲೇಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next