ಎಂದೂ ಕೇಂದ್ರ ಸರಕಾರ ಸೂಚಿಸಿದೆ. ಹೀಗೆ ಮಾಡಿದಲ್ಲಿ ಕಠಿನ ಕ್ರಮ ಎಚ್ಚರಿಕೆಯನ್ನೂ ಕೇಂದ್ರ ನೀಡಿದೆ.
Advertisement
ಪಡಿತರ ಚೀಟಿಗೆ ಅರ್ಹತೆ ಹೊಂದಿಲ್ಲ ಎಂಬುದು ಖಚಿತವಾದ ಅನಂತರ ಮಾತ್ರವೇ ಪಡಿತರ ಫಲಾನುಭವಿಗಳ ಪಟ್ಟಿಯಿಂದ ವ್ಯಕ್ತಿಯ ಹೆಸರನ್ನು ಅಳಿಸಬೇಕು. ಫಲಾನುಭವಿ ಅರ್ಹವಾಗಿದ್ದಲ್ಲಿ ಯಾವುದೇ ಕಾರಣಕ್ಕೂ ಪಡಿತರ ನಿರಾಕರಿಸಬಾರದು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ. ಪಡಿತರ ಚೀಟಿಯೊಂದಿಗೆ ಆಧಾರ್ ಜೋಡಿಸಲು ಡಿಸೆಂಬರ್‌ವರೆಗೆ ಅವಕಾಶ ನೀಡಲಾಗಿದ್ದು, ಆಧಾರ್ ಹೊಂದಿಲ್ಲದವರಿಗಾಗಿ ಈ ಗಡುವನ್ನು ಮುಂದಿನ ಮಾ. 31ರವರೆಗೆ ವಿಸ್ತರಿಸಲಾಗಿದೆ. ಈವರೆಗೆ ಶೇ.82ರಷ್ಟು ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದೆ.