Advertisement

ನೀರನ್ನು ಕಲುಷಿತಗೊಳಿಸಬೇಡಿ

12:14 PM Jun 28, 2017 | Team Udayavani |

ಪಿರಿಯಾಪಟ್ಟಣ: ಮನುಷ್ಯ ಇಂದು ಅನ್ಯ ಗ್ರಹಗಳಿಗೆ ಹೋಗಿ ಅಲ್ಲಿ ನೀರಿದೆಯಾ ಎಂಬ ಅನ್ವೇಷಣೆಯಲ್ಲಿ ತೊಡಗಿದ್ದಾನೆ, ಆದರೆ ಭೂಮಿಯ ಮೇಲಿರುವ ನೀರನ್ನು ಕುಲುಷಿತಗೊಳಿಸುತ್ತಿದ್ದಾನೆ ಎಂದು ಪರಿಸರತಜ್ಞ ಡಾ.ಯಲ್ಲಪ್ಪ ರೆಡ್ಡಿ ಹೇಳಿದರು.

Advertisement

ತಾಲೂಕಿನ ಬೈಲುಕುಪ್ಪೆ ಕಗ್ಯೂನಳಂದ ಧರ್ಮಶಾಲೆಯಲ್ಲಿ ಬೋಧಿಸತ್ವಸ್‌ ಟ್ರಸ್ಟ್‌ವತಿಯಿಂದ 17ನೇ ಗ್ಯಾಲ್ವಂಗ್‌ ಕರ್ಮಪ ಗುರುಜೀಯ 32ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಕೇಂದ್ರ ಸರಕಾರ ಗಂಗಾನದಿ ಸ್ವತ್ಛತೆಗೆ ಆದ್ಯತೆ ನೀಡಿದ್ದು ಇದರಂತೆ ದಕ್ಷಿಣ ಭಾರತದ ಪ್ರಮುಖ ನದಿಯಾದ ಕಾವೇರಿ ನದಿಗೂ ಅಷ್ಟೇ ಆದ್ಯತೆ ನೀಡಬೇಕು. ಇಂದು ನೀರು ಕಲುಷಿತಗೊಂಡು ಮನುಷ್ಯನ ವಂಶವಾಹಿನಿಗಳ ಮೇಲೆ ಪ್ರಭಾವ ಬೀರುತ್ತಿದೆ. ಆರ್ಯುವೇದ ಔಷಧಿಗುಣ ಉಳ್ಳ ನೀರು ಇಂದು ಕಲುಷಿತವಾಗಿ ವಿಷವಾಗಿ ಪರಿಣಮಿಸಿದೆ, ನೀರನ್ನು ಕಲುಷಿತ ಗೊಳಿಸಬಾರದು ಎಂದರು.

ಪ್ರಾಣಿಗಳಿಗೆ ಇರುವ ಪರಿಸರ ಕಾಳಜಿ ಮನುಷ್ಯರಿಗೆ ಇಲ್ಲವಾಗಿದ್ದು, ಇಂದು 34 ಸಾವಿರ ಹೆಕ್ಟೇರ್‌ನಷ್ಟು ಕಾಡನ್ನು ನಾಶಮಾಡಲಾಗಿದೆ. ವಿಶ್ವ ಸುಂದರ ವಾಗಿದ್ದು ಅದನ್ನು ಅನುಭವಿಸದ ಮನುಷ್ಯ ತನ್ನ ಸ್ವಾರ್ಥತೆ, ಕ್ರೂರತೆಯಿಂದ ವಿನಾಶದ ಅಂಚನ್ನು ತಲುಪುತ್ತಿದ್ದಾನೆ ಎಂದು ತಿಳಿಸಿದರು.

ಅರಣ್ಯ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಮಾತನಾಡಿ, ಮನಸ್ಸು ಶುದ್ಧಿಯಾಗಲು ಮನುಷ್ಯ ಧರ್ಮದ ಮೊರೆಹೋಗಬೇಕು. ಧರ್ಮದ ಆಚರಣೆಯಿಂದ ಸಮಾಜದಲ್ಲಿ ಜಾತಿ ಧರ್ಮಗಳ ನಡುವಿನ ಮಾನವೀಯ ಸಂಬಂಧಗಳ ಮೌಲ್ಯ ವೃದ್ಧಿಯಾಗುತ್ತದೆ. ಇಂದಿನ ದಿನಗಳಲ್ಲಿ ಪರಿಸರ ಅತ್ಯಂತ ಕಲುಷಿತವಾಗುತ್ತಿದ್ದು ಇದನ್ನು ನಿರ್ಮಲಿಕರಣ ಮಾಡುವುದು ಸವಾಲಿನ ಪ್ರಶ್ನೆಯಾಗಿದೆ. ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ಹೊಂದಿದಾಗ ಮಾತ್ರ ಪರಿಸರದ ಉಳಿವು ಸಾಧ್ಯ ಎಂದರು.

Advertisement

ಇಂಡೋ ಟಿಬೇಟಿಯನ್‌ ಅಧ್ಯಕ್ಷ ಬಿ.ವಿ.ಜವರೇಗೌಡ ಮಾತನಾಡಿ, ಟಿಬೇಟಿಯನ್ನರು ಪರಿಸರ ಕಾಳಜಿಗೆ ಅತ್ಯಂತ ಹೆಚ್ಚು ಮಹತ್ವ ನೀಡಿದ್ದು. ಕಗ್ಯು ನಳಂದ ಧರ್ಮಗುರುಗಳಾದ ಕರ್ಮರಿಂ ಪೋಚೆ ಅವರು ಸಾವಿರಾರು ಮರಗಳನ್ನು ಬೆಳೆಸುವ ಮೂಲಕ ಸತ್ಯಂ ಶಿವಂ ಸುದರಂ ಕಲ್ಪನೆಯಲ್ಲಿ ಔಷಧಿ ಸಸ್ಯಗಳು, ಹಣ್ಣಿನ ಮರಗಳು, ಮತ್ತು ಹೂವಿನ ಮರಗಿಡಗಳನ್ನು ಬೆಳೆಸುವ ಮೂಲಕ ಸುಂದರ ವನ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಸಂಸದ ಪುಟ್ಟರಾಜು, ಆದಿಚುಂಚನಗಿರಿ ಸೋಮನಾಥೇಶ್ವರಸ್ವಾಮಿ, ಕಗ್ಯುನಳಂದದ ಧರ್ಮಗುರು ಕರ್ಮರಿಂಪೂಜೆ, ರೆವೆರಡ್‌ ಫಾದರ್‌ ಜೀವನ್‌, ಟಿಬೇಟಿಯನ್‌ ಸಂಸದೆ ಸಮ್ಟೆನ್‌, ಟಿಬೇಟಿಯನ್‌ ಮುಖ್ಯಸ್ಥ ಗೆಲಕ್‌ ಮಾತನಾಡಿದರು.

ಟಿಬೇಟಿಯನ್‌ ಸಾಂಪ್ರದಾಯಿಕ ಕಲೆಗಳ ಪ್ರದರ್ಶ ಮಾಡಲಾಯಿತು. ಜಿಪಂ ಸದಸ್ಯ ವಿ.ರಾಜೇಂದ್ರ, ತಾಪಂ ಸದಸ್ಯ ಜಯಂತಿಸೋಮಶೇಖರ್‌, ಕೊಪ್ಪ ಗ್ರಾಪಂ ಅಧ್ಯಕ್ಷೆ ಸಾವಿತ್ರಿರಾಮಣ್ಣ, ಜೆಡಿಎಸ್‌ ತಾ. ಅಧ್ಯಕ್ಷ ಕೆ.ಮಹದೇವ್‌, ಪರಿಸರಹೋರಾಟಗಾರ ಕೆ.ಎನ್‌.ಸೋಮಶೇಖರ್‌, ಮುಖಂಡರಾದ ಮಿಟ್ಟುಚಂಗಪ್ಪ, ಬೋಪ್ಪಣ್ಣ, ಡಾ.ಮೃತ್ಯೂಂಜಯಪ್ಪ, ಜೆ.ಎನ್‌.ಲಕ್ಷ್ಮಣ್‌, ಸುಮಾರಾಜ್‌ಕುಮಾರ್‌ ಲಾಕ್‌ಪಾ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next