Advertisement

“ಇನ್ನೊಂದು ಸಮುದಾಯದೊಂದಿಗೆ ಸ್ಪರ್ಧೆ ಬೇಡ’

04:51 PM Feb 22, 2017 | Team Udayavani |

ಮರವಂತೆ: ಮರವಂತೆ ಗುರುನಾರಾಯಣ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ  ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನು ಸ. ಹಿ. ಪ್ರಾಥಮಿಕ ಶಾಲೆಯ ಸಾಧನಾ ಮಂಟಪದಲ್ಲಿ ನಡೆಯಿತು.

Advertisement

ಶಾಸಕ ಕೆ. ಗೋಪಾಲ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭ ಅವರು ಮಾತನಾಡಿ, ಸಮುದಾಯ ಸಂಘಟಿತವಾದರೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶಕ್ತಿ ದೊರೆಯುತ್ತದೆ. ಸಂಘಟನೆ ಎಲ್ಲಕ್ಕಿಂತ ಹೆಚ್ಚಾಗಿ ಯುವಜನರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. 

ಸಂಘಟನೆಯನ್ನು ಇನ್ನೊಂದು ಸಮುದಾಯದೊಂದಿಗೆ ಸ್ಪರ್ಧೆಗೆ ಬಳಸಿಕೊಳ್ಳದೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದರು.
ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ನಾರಾಯಣ ಗುರುಗಳು ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದರು. ಇದನ್ನು ಬಿಲ್ಲವ ಸಂಘಟನೆ ಅರ್ಥಮಾಡಿಕೊಳ್ಳಬೇಕು. ತಮ್ಮ ಸಮುದಾಯದ ಸದಸ್ಯರು ಸ್ವಾವಲಂಬಿಗಳಾಗಿ, ಗೌರವಯುತವಾಗಿ ಬದುಕಲು ಅಗತ್ಯ ಅವಕಾಶ ಸೃಷ್ಟಿಸಬೇಕು ಎಂದರು.

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್‌. ರಾಜು ಪೂಜಾರಿ, ತಾ. ಪಂ. ಸದಸ್ಯ ಜಗದೀಶ ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರಾದ ಆನಂದ ಪೂಜಾರಿ, ಸುಶೀಲಾ ಪೂಜಾರಿ, ಸಂಘದ ಗೌರವಾಧ್ಯಕ್ಷ ಪುಟ್ಟ ಬಿಲ್ಲವ, ಉಪಾಧ್ಯಕ್ಷ ಅಣ್ಣಯ್ಯ ಪೂಜಾರಿ, ಸಂಜೀವ ಪೂಜಾರಿ, ಜತೆ ಕಾರ್ಯದರ್ಶಿ ಶ್ಯಾಮಲಾ, ಸುಧಾ ಉಪಸ್ಥಿತರಿದ್ದರು.

ಯೋಗಪಟು ಕುಶ ಪೂಜಾರಿ, ದಾನಿಗಳಾದ ಸತೀಶ ಪೂಜಾರಿ, ಶ್ರೀಧರ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಮಕ್ಕಳಿಂದ ಯಕ್ಷಗಾನ, ಭರತ ನಾಟ್ಯ ಪ್ರದರ್ಶನ ನಡೆಯಿತು.ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿದರು. ಕೋಶಾಧಿಕಾರಿ ಸೋಮಯ್ಯ ಬಿಲ್ಲವ ವಂದಿಸಿದರು. ಕಾರ್ಯದರ್ಶಿ ಎಂ. ಶಂಕರ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next