ಜೈ ಹಿಂದ್ ಗೆಳೆಯರೇ. ಜೈಶ್ ಎ-ಮೊಹಮ್ಮದ್‌ನ ಮೂರು ಉಗ್ರ ನೆಲೆಗಳನ್ನು ನೆಲಸಮ ಮಾಡಿದ ನಮ್ಮ ಭಾರತೀಯ ವಾಯುಸೇನೆಯ ಧೀರ ಯೋಧರಿಗೆ ಇಂದು ನಾನು ಇಡೀ ದೇಶದ ಜೊತೆಗೂಡಿ ಅಭಿನಂದನೆ ಸಲ್ಲಿಸುತ್ತೇನೆ. ಭಾರತವೇಕೆ ಈ ದಾಳಿ ಏಕೆ ನಡೆಸಿತು ಎನ್ನುವ ಪ್ರಶ್ನೆಗೆ ಉತ್ತರಿಸುತ್ತೇನೆ-ಒಂದು ವೇಳೆ ನಿಮ್ಮ ಮನೆಗೆ ಯಾರಾದರೂ ನುಗ್ಗಿ ನಿಮ್ಮ ತಂದೆ, ತಾಯಿ, ಮಕ್ಕಳು ಅಥವಾ ಪತ್ನಿಯನ್ನು ಕೊಂದು ವಾಪಸ್ ಓಡಿಹೋದರೆ ನೀವು ಏನು ಮಾಡುತ್ತೀರಿ? ಅನಿವಾರ್ಯವಾಗಿ ನೀವು ಆ ಕೊಲೆಗಡುಕನ ಮನೆಗೆ ನುಗ್ಗಿ ಅವನನ್ನು ಕೊಂದು ಹಾಕುವುದಿಲ್ಲವೇ?
ಇನ್ನು ಭಾರತೀಯ ಗೆಳೆಯರಿಗೆಲ್ಲ ಒಂದು ವಿನಂತಿ. ಈ ದಾಳಿಯ ನಂತರ ಪಾಕಿಸ್ತಾನ ಭಾರತದಲ್ಲಿನ ತನ್ನ ಎಲ್ಲಾ ಸ್ಲಿಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿರಬಹುದು. ಹೀಗಾಗಿ, ಒಂದು ವೇಳೆ ನಿಮಗೆ ನಿಮ್ಮ ಸುತ್ತಮುತ್ತಲು ಎಲ್ಲಾದರೂ ಅಸಹಜ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಅಥವಾ ಭದ್ರತಾ ಸಂಸ್ಥೆಗಳಿಗೆ ಈ ಬಗ್ಗೆ ಎಚ್ಚರಿಸಿ.
ಇನ್ನು, ದಯವಿಟ್ಟೂ ವಾಟ್ಸ್‌ಆ್ಯಪ್, ಟ್ವಿಟರ್ ಅಥವಾ ಫೇಸ್‌ಬುಕ್‌ಗಳಲ್ಲಿ ದೇಶದ ಕುರಿತ ಯಾವುದೇ ಸೂಕ್ಷ್ಮ ಮತ್ತು ರಹಸ್ಯ ವಿಷಯಗಳನ್ನು ಶೇರ್ ಮಾಡಬೇಡಿ. ಏಕೆಂದರೆ ಇದು ರಾಷ್ಟ್ರದ ಸುರಕ್ಷತೆಗೆ ಸಂಬಂಧಿಸಿದ ವಿಷಯ. ರಾಷ್ಟ್ರದ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ. ಇದರ ಜೊತೆಗೆ ನಾನು ಪಾಕಿಸ್ತಾನದ ನಾಗರಿಕರಿಗೂ ಒಂದು ಸಂದೇಶ ತಲುಪಿಸಲು ಬಯಸುತ್ತೇನೆ. ಪಾಕಿಸ್ತಾನಿಯರೇ, ನಮಗೆ ನಿಮ್ಮ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಆದರೆ ನಿಮ್ಮ ಸೇನೆ, ಉಗ್ರಸಂಘಟನೆಗಳು ನಮ್ಮ ದೇಶದೊಳಕ್ಕೆ ಆತಂಕವಾದ ಹರಡುತ್ತಿವೆಯಲ್ಲ ಅದನ್ನು ಮಾತ್ರ ನಾವು ಸಹಿಸಿಕೊಳ್ಳುವುದಿಲ್ಲ. ತೊಂದರೆ ಒಡ್ಡಿದರೆ ಪಾಕಿಸ್ತಾನದಲ್ಲಿ ಇನ್ನಷ್ಟು ಒಳಗೆ ನುಗ್ಗಿ ದಾಳಿ ಮಾಡುತ್ತೇವೆ. ನಿಮ್ಮ ಸೇನೆ, ಸರ್ಕಾರವನ್ನು ಕೇಳಿ… ಏಕೆ ಅವರು ಇದೆಲ್ಲ ಮಾಡುತ್ತಿದ್ದಾರೆ, ಭಾರತದ ವಿರುದ್ಧದ ಕೃತ್ಯಗಳಿಂದ ಅವರಿಗೇನು ಲಾಭವಾಗುತ್ತದೆ ಎಂದು? ನಿಮ್ಮ ಸೇನೆ, ಸರ್ಕಾರ ಸೇರಿ ಪಾಕಿಸ್ತಾನವನ್ನು ಭಿಕ್ಷುಕ ದೇಶ ಮಾಡಿಟ್ಟಿದ್ದಾರೆ.
“ಒಂದೆಡೆ ಹಿಂದೂಸ್ತಾನದ ಮಕ್ಕಳು ಓದು ಬರಹದಲ್ಲಿ ತೊಡಗಿ ಮಹತ್ವಾಕಾಂಕ್ಷೆಯಿಂದ ಮುನ್ನುಗ್ಗುತ್ತಿರುವಾಗ ಪಾಕಿಸ್ತಾನದ ಮಕ್ಕಳನ್ನೇಕೆ ಆತ್ಮಹತ್ಯಾದಾಳಿಕೋರರನ್ನಾಗಿ ಬದಲಾಯಿಸುತ್ತಿದ್ದೀರಿ?’ ಎಂದು ನೀವು ನಿಮ್ಮ ಸರ್ಕಾರ ಮತ್ತು ಸೇನೆಯನ್ನು ಪ್ರಶ್ನಿಸಿ.
ಮತ್ತೂಮ್ಮೆ ಸ್ಪಷ್ಟಪಡಿಸುತ್ತೇನೆ…ನೀವೇನಾದರೂ ನಮ್ಮ ದೇಶ ಅಥವಾ ಜನರ ಮೇಲೆ ದಾಳಿ ಮಾಡುವ ಭಂಡ ಧೈರ್ಯ ತೋರಿದರೆ ನಾವು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮನ್ನು ಹೊಡೆದುರುಳಿಸಲು ತಡ ಮಾಡುವುದಿಲ್ಲ!
(ಪುನಿಯಾ, ನಿವೃತ್ತ ಸೇನಾಧಿಕಾರಿ,
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು)