Advertisement

ನದಿ ತೊರೆಗಳ ಬಳಿ ಮನೆ ನಿರ್ಮಿಸ ಬೇಡಿ : ಮಾರುತಿ

08:13 PM May 18, 2019 | Team Udayavani |

ಮಡಿಕೇರಿ:ಭೂ ಕುಸಿತವನ್ನು ತಪ್ಪಿಸಲು ತಡೆಗೋಡೆ, ಚರಂಡಿ ನಿರ್ಮಾಣ ಮತ್ತು ನದಿ, ತೊರೆ, ಹಳ್ಳಕೊಳ್ಳದ ಬಳಿ ಮನೆ ನಿರ್ಮಿಸದಿರುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ವಿಭಾಗದ ರಾಜ್ಯ ನಿರ್ದೇಶಕ ಕೆ.ವಿ.ಮಾರುತಿ ಅವರು ಸಲಹೆ ನೀಡಿದ್ದಾರೆ.

Advertisement

ಪ್ರಕೃತಿ ವಿಕೋಪದ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಮತ್ತು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ವತಿಯಿಂದ ಅಧಿಕಾರಿಗಳಿಗಾಗಿ ನಗರದ ಕೋಟೆ ಹಳೆ ವಿಧಾನಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ವರ್ಷ ಸಂಭವಿಸಿದ ಅತಿ ವೃಷ್ಟಿಯಿಂದ ಉಂಟಾದ ಭೂಕುಸಿತ ಪ್ರದೇಶಗಳಲ್ಲಿ ಮುಂದುವರಿದ ತಂತ್ರ ಜ್ಞಾನ ಬಳಸಿಕೊಂಡು ವರದಿಯನ್ನು ಸಿದ್ಧಪ ಡಿಸಲಾಗಿದ್ದು, ಪ್ರಾಥಮಿಕ ವರದಿಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಅಂತಿಮ ವರದಿ ನೀಡಬೇಕಿದೆ ಎಂದು ಮಾರುತಿ ಅವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ಹಿನ್ನೆಲೆ, ಪ್ರಸಕ್ತ ವರ್ಷದಲ್ಲಿ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯವರು ಸೂಕ್ಷ್ಮ ಪ್ರದೇಶಗಳನ್ನು ಅಧ್ಯಯನ ಮಾಡಿ ಗುರುತಿಸಿದ್ದಾರೆ. ಆ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಜಿಲ್ಲೆಯ ವಿವಿಧ ವಿಭಾಗಗಳಲ್ಲಿ ಮುಂಗಾರು ಅವಧಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

Advertisement

ಜಿ.ಪಂ.ಸಿಇಒ ಕೆ.ಲಕ್ಷಿ¾ಪ್ರಿಯಾ ಅವರು ಮಾತನಾಡಿ ಈಗಾಗಾಲೇ ಪ್ರಕೃತಿ ವಿಕೋಪ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಗುತ್ತಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಾಗೃತಿ ವಹಿಸಬೇಕಿದೆ ಹೊರತು. ವದಂತಿಗಳಿಗೆ ಕಿವಿಗೊಡಬಾರದು ಎಂದರು.ಭಾರತೀಯ ಭೂ ವೈಜ್ಞಾನಿಕ ಸರ್ವೇ ಕ್ಷಣಾ ವಿಭಾಗದ ಸುನಂದನ್‌ ಬಸು ಅವರು ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಉಪ ವಿಭಾ ಗಾಧಿಕಾರಿ ಟಿ.ಜವರೇಗೌಡ, ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಡಿವೈಎಸ್‌ಪಿ ಸುಂದರರಾಜ್‌, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್‌, ಸಹಾಯಕ ನಿರ್ದೇಶಕರಾದ ಷಂಶುದ್ದೀನ್‌, ಜಿಎಸ್‌ಐ ವಿಜ್ಞಾನಿಗಳಾದ ಅಮರ್‌ ಜ್ಯೋತಿ, ಯುನಿಸೆಫ್ನ ಸಮಾಲೋಚಕರಾದ ಪ್ರಭಾತ್‌ ಕಲ್ಕೂರ, ಮನೋಹರ್‌, ತಾ.ಪಂ ಇಒಗಳು, ತಹಶೀಲ್ದಾರರು, ಪಿಡಿಒಗಳು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಇತರರು ಉಪಸ್ಥಿತರಿದ್ದರು.

ತಡೆಗಟ್ಟಬಹುದು ಅತೀವೃಷ್ಟಿಯಿಂದ ಉಂಟಾದ ಹಾನಿ ಸಂಬಂಧ ನಡೆಸುತ್ತಿರುವ ಶಾಶ್ವತ ಕಾಮಗಾರಿಗಳಲ್ಲಿ ಹೆಚ್ಚಿನ ನಿಗಾವಹಿಸಿ ತಾಂತ್ರಿಕ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಇಳಿಜಾರು ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಲಾವಂಛ(ವೆಟ್ಟಿವರ್‌) ಹುಲ್ಲನ್ನು ಬೆಳೆಸಬೇಕು. ಇದನ್ನು ಬೆಳೆಸುವುದರಿಂದ ನೈಸರ್ಗಿಕವಾಗಿ ಬರೆಕುಸಿತ ಹಾಗೂ ಭೂ ಕುಸಿತವನ್ನು ತಗ್ಗಿಸಬಹುದು ಎಂದರು. ರಸ್ತೆ ಬದಿಯ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಪ್ಲಾಸ್ಟಿಕ್‌ ತ್ಯಾಜ್ಯ ಅಥವಾ ಇತರ ವಸ್ತುಗಳು ಚರಂಡಿಯಲ್ಲಿ ಇರಬಾರದು. ಬೆಂಚ್‌ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next