Advertisement

ವನಮಹೋತ್ಸವ ಆಚರಣೆಗೆ ಮಾತ್ರ ಸೀಮಿತವಾಗದಿರಲಿ

06:55 AM Jun 28, 2018 | Team Udayavani |

ಕಾಪು: ವರ್ಷಕ್ಕೊಮ್ಮೆ ನಡೆಸುವ ವನಮಹೋತ್ಸವ ಕಾರ್ಯ ಕ್ರಮವು ಕೇವಲ ಆಚರಣೆಗೆ ಮಾತ್ರಾ ಸೀಮಿತವಾಗಿರದೆ, ವರ್ಷದಿಂದ ವರ್ಷಕ್ಕೆ ಸಸ್ಯ ಸಂಪತ್ತಿನ ಬೆಳವಣಿಗೆಗೆ ಪೂರಕವಾ ಗಿರುವಂತಿರಬೇಕು. ವಿದ್ಯಾರ್ಥಿಗಳು ತಾವು ನೆಡುವ ಗಿಡಗಳನ್ನು ಪೋಷಿಸುವ  ಜವಾಬ್ದಾರಿಯನ್ನೂ  ಸ್ವತಃ ತಾವೇ ವಹಿಸಿಕೊಂಡು, ಅದನ್ನು ಮಾದರಿಯಾಗಿ ಬೆಳೆಸಬೇಕು. ಮುಂದೆ ಅದರ ಜವಾಬ್ದಾರಿ ಯನ್ನು  ಇತರ ವಿದ್ಯಾರ್ಥಿಗಳಿಗೆ ವಹಿಸಿ ಕೊಡುವಂತಾಗಬೇಕು ಎಂದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಅರಣ್ಯ ಇಲಾಖೆ ಉಡುಪಿ ವಲಯ ಮತ್ತು  ಪಡುಬಿದ್ರಿ ಘಟಕ, ಸರಕಾರಿ  ಪ.ಪೂ. ಕಾಲೇಜು ಪೊಲಿಪು ಹಾಗೂ ಜೇಸಿಐ ಕಾಪು ಇವರ  ಆಶ್ರಯದಲ್ಲಿ ಪೊಲಿಪು ಸ. ಪ. ಪೂ. ಕಾಲೇಜಿನಲ್ಲಿ  ಜೂ. 26ರಂದು ಜರಗಿದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅರಣ್ಯಾಧಿಕಾರಿ ನಾಗೇಶ್‌ ಬಿಲ್ಲವ ಮಾತನಾಡಿ, ಈ ವರ್ಷ ಕಾಪು ತಾಲೂಕಿನಾದ್ಯಂತ ವಿವಿಧ ಜಾತಿಯ ಸುಮಾರು 10 ಸಾವಿರ ಗಿಡಗಳನ್ನು ನೆಡುವ ನಿಟ್ಟಿನಲ್ಲಿ ಇಲಾಖೆ ಯೋಜನೆ ರೂಪಿಸಿದೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಕಾರ ಪಡೆಯಲಾಗುತ್ತಿದೆ. ಪ್ರಕೃತಿಯನ್ನು ಉಳಿಸುವುದೇ ಗಿಡ ನೆಡುವುದರ ಹಿಂದಿನ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು. 

ಜೇಸಿಐ ಇಂಡಿಯಾ ಫೌಂಡೇಶನ್‌ನ ನಿರ್ದೇಶಕ ವೈ. ಸುಕುಮಾರ್‌, ಜೇಸಿಐ ವಲಯಾಧ್ಯಕ್ಷರು, ಉಪ ವಲಯ ಅರಣ್ಯಾಧಿಕಾರಿ ಅಭಿಲಾಷ್‌, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಪ್ರಾಂಶುಪಾಲ ಪಂಡರೀನಾಥ್‌ ಎಸ್‌., ಕಾಪು ಪುರಸಭೆ ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸಿದ್ದಪ್ಪ, ಸಚಿನ್‌ ಕುಮಾರ್‌, ಅರಣ್ಯ ಇಲಾಖಾ ಸಿಬಂದಿ, ಕಾಪು ಜೇಸಿಐ ಸದಸ್ಯರು, ಉಪನ್ಯಾಸಕ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಕಾಪು ಜೇಸಿಐ ಅಧ್ಯಕ್ಷ ರಮೇಶ್‌ ನಾಯಕ್‌ ಸ್ವಾಗತಿಸಿದರು. ಹೈಸ್ಕೂಲ್‌ ವಿಭಾಗದ ಮುಖ್ಯಸ್ಥೆ  ರಮಣಿ ವೈ. ವಂದಿಸಿದರು. ಪೊಲಿಪು ಪ. ಪೂ. ಕಾಲೇಜಿನ ಉಪನ್ಯಾಸಕ ನಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು.

ಗಿಡಗಳ ಆರೈಕೆ ನಡೆಸಿ 
ಪಶ್ಚಿಮ ಕರಾವಳಿ ಮತ್ತು ಗುಡ್ಡ ಪ್ರದೇಶದ ವ್ಯಾಪ್ತಿ  ಹೊಂದಿರುವ ಕಾಪು ಕ್ಷೇತ್ರದಲ್ಲಿ ಅರಣ್ಯ ಇಲಾಖೆಯ ಮೂಲಕವಾಗಿ ಹಸಿರೀಕರಣ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಗಿಡ ನೆಡುವ ಸಂದರ್ಭದಲ್ಲಿ ತೋರಿಸಿದ ಉತ್ಸಾಹವನ್ನು ಗಿಡವನ್ನು ಬೆಳೆಸುವತ್ತವೂ ತೋರಿಸಿಕೊಡಬೇಕು. ಮತ್ತು ಹಿಂದೆ ನೆಟ್ಟ ಗಿಡಗಳ ಆರೈಕೆ ಸರಿಯಾಗಿ ನಡೆಯುತ್ತಿದೆಯೇ ಎನ್ನುವುದರ ಬಗ್ಗೆಯೂ ಇಲಾಖೆ ಮುತುವರ್ಜಿ ವಹಿಸಬೇಕು.
– ಲಾಲಾಜಿ ಆರ್‌. ಮೆಂಡನ್‌, ಶಾಸಕ 

Advertisement
Advertisement

Udayavani is now on Telegram. Click here to join our channel and stay updated with the latest news.

Next