Advertisement

ಮದುವೆಯಿಂದ ಆರ್ಥಿಕ ಹೊರೆ ಬೇಡ

02:16 PM May 20, 2019 | Team Udayavani |

ಲಕ್ಷ್ಮೇಶ್ವರ: ಪಟ್ಟಣದ ಮ್ಯಾಗೇರಿ ಓಣಿಯ ಬೀರೇಶ್ವರ, ಸಿಂಧೋಗೇಶ್ವರ, ದುರ್ಗಾದೇವಿ, ಭರಮದೇವರು ಮತ್ತು ನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಸ್ಥಾನಗಳ ಲೋಕಾರ್ಪಣೆ ಅಂಗವಾಗಿ ಭಾನುವಾರ ಬೀರೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನೆರವೇರಿತು.

Advertisement

ವಿವಾಹ ಮಹೋತ್ಸವ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಎಲ್.ಸಿ. ಲಿಂಬಯ್ಯಸ್ವಾಮಿವ್ಮಠ ಮತ್ತು ಪಲ್ಲಣ್ಣ ಕುಲಕರ್ಣಿ, ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಹೊರೆ ತಪ್ಪಿಸುವ ಕಲ್ಯಾಣ ಕಾರ್ಯವಾಗಿದೆ. ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಡ ವರ್ಗದ ಜನರ ಕಲ್ಯಾಣ ಕಾರ್ಯ ಮಾಡುವ ಸಂಪ್ರದಾಯ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಸಮಾಜದ, ಸಂಘಟನೆಗಳ ಮತ್ತು ಯುವ ಜನತೆಯ ಪಾತ್ರ ಮುಖ್ಯವಾಗಿದೆ. ವಿವಾಹ ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತದೆ ಆದರೂ ಸಂಪ್ರದಾಯ ಬದ್ಧವಾಗಿ ದಾಂಪತ್ಯ ಜೀವನಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಕೈ ಜೋಡಿಸಿ ಸಮಾಜದ ಗೌರವ ತರುವ ಕಾರ್ಯವನ್ನು ನವ ದಂಪತಿಗಳು ಮಾಡಬೇಕು ಎಂದರು. ಐದು ಜೋಡಿಗಳು ಸಪ್ತಪದಿ ತುಳಿದವು.

ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಹೋಮ-ಹವನ, ವಾಸ್ತುಶಾಂತಿ, ನವಗ್ರಹಗಳ ಪೂಜಾ ವಿಧಾನ ಕಾರ್ಯಕ್ರಮ ಜರುಗಿದವು. ಶನಿವಾರ ಬೆಳಗ್ಗೆ ಬೆಳಗಾವಿಯ ಪಂ| ಸಂಜೀವಚಾರ್ಯ ವಾಳ್ಳೇಕರ, ಜಯಚಂದ್ರತೀರ್ಥಚಾರ್ಯ, ಲಕ್ಷಿ ್ಮೕಕಾಂತಚಾರ್ಯ ನೇತೃತವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನಾರಾಯಣ ದೇವರ ಮಹಾಮಸ್ತಾಭಿಷೇಕ ಕಾರ್ಯಕ್ರಮ ಜರುಗಿತು.

ಮ್ಯಾಗೇರಿ, ಬಸಾಪುರ, ಪ್ಯಾಟಿಕೇರಿ ಓಣಿ ಗುರು-ಹಿರಿಯರು ಹಾಗೂ ಸಮಸ್ತ ಹಾಲುಮತ ಬಾಂಧವರು, ಸರ್ವ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಸಾಮೂಹಿಕ ಮದುವೆ ಕಾರ್ಯಕ್ರಮಕ್ಕಾಗಿ ಪ್ರಸಾದ ವ್ಯವಸ್ಥೆಗೆ ಸಮಾಜದ ಎಲ್ಲ ಬಾಂಧವರು ಕೈ ಜೋಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next