Advertisement
ನಾವು ಸದಾ ಗುರು, ಹಿರಿಯರ ಬಗ್ಗೆ ಗೌರವ ಬೆಳೆಸಲು ಅವರಲ್ಲಿ ಭಯ, ಭಕ್ತಿ ಇರಬೇಕು ಎಂದು ಮಕ್ಕಳಲ್ಲಿ ಹೇಳುತ್ತಿದ್ದೇವೆ. ಇದರಿಂದ ಬೆಳೆಯುತ್ತಿರುವ ಗೌರವ, ಭಕ್ತಿ ಶಾಶ್ವತವಾಗಿ ಉಳಿಯುತ್ತಿಲ್ಲ ಎಂದರು. ಇಂದು ವಯಸ್ಸಾದವರ ಬಗ್ಗೆ ಕಿರಿಯರಲ್ಲಿ ಅಗೌರವ ಬೆಳೆಯುತ್ತಿದೆ. ಇದರಬದಲಿಗೆ ಹಿರಿಯರ ಬಗ್ಗೆ ಶ್ರದ್ಧೆ, ಪ್ರೀತಿ, ಕೃತಜ್ಞತೆ ಬೆಳೆಸಿಕೊಳ್ಳಲು ಸಣ್ಣ ವಯಸ್ಸಿನಿಂದ ತಿಳಿಹೇಳಬೇಕು.
Related Articles
Advertisement
ಆದರೆ, ನಿಮ್ಮ ನಿವೃತ್ತಿ ವೇಳೆಗೆ ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಮೊಮ್ಮಕ್ಕಳು ಶಾಲೆಗೆ ಹೋಗುತ್ತಾರೆ. ಹಾಗಾಗಿ ನೀವು ಮತ್ತೆ ಒಂಟಿಯಾಗಿ ಕಾಲ ಕಳೆಯುವ ಸ್ಥಿತಿ ಬರುತ್ತದೆ. ಇದನ್ನು ನಿಭಾಯಿಸಲು ಹಳೆ ನೆನಪುಗಳ ಮೆಲುಕು ಹಾಕಲು ಮನೋರಂಜನಾ ಕೇಂದ್ರ ಬೇಕು. ಬದುಕಿಗೆ ಸ್ಫೂರ್ತಿ ತುಂಬಲು ಹಳೆಯ ನೆನಪು ಮೆಲುಕುಹಾಕುವುದು, ಗೆಳೆಯರ ಜೊತೆ ಕಾಲ ಕಳೆಯುವುದು ಅನಿವಾರ್ಯ, ಅತೀ ಅವಶ್ಯಕ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್. ಗುರುಮೂರ್ತಿ ಮಾತನಾಡಿ, ಸಂಘದಿಂದ ಇನ್ನೊಂದು ದೊಡ್ಡ ಸಮುದಾಯ ಭವನ, ವೃದ್ಧಾಶ್ರಮ ನಿರ್ಮಾಣ ಮಾಡಬೇಕಿದೆ. ಹಾಲಿ ಇರುವ ಭನವದ ಮೇಲ್ಚಾವಣಿಗೆ ಸೋಲಾರ್ ಅಳವಡಿಸುವ ಉದ್ದೇಶ ಇದೆ. ಇದಕ್ಕೆ ಬೇಕಾದ ಅಗತ್ಯ ನಿವೇಶನ, ಹಣಕಾಸು ಒದಗಿಸಿಕೊಡಲು ದಾನಿಗಳು ಮುಂದೆ ಬರಬೇಕು ಎಂದು ಮನವಿಮಾಡಿದ ಅವರು, ದಾವಣಗೆರೆ ನಗರದಲ್ಲಿ 2 ವೈದ್ಯಕೀಯ ಕಾಲೇಜು ಇವೆ.
ಬಾಪೂಜಿ ವಿದ್ಯಾಸಂಸ್ಥೆಯ ಆಸ್ಪತ್ರೆಗಳಲ್ಲಿ ಹಿರಿಯರು ಚಿಕಿತ್ಸೆ ಪಡೆದರೆ ಶೇ.50ರಷ್ಟು ರಿಯಾಯಿತಿ ಕೊಡಿಸುವುದಾಗಿ ಶಾಮನೂರು ಶಿವಶಂಕರಪ್ಪ ಹೇಳಿದ್ದರು. ಅದನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಸ್ವಾಮೀಜಿಗಳು ಶಾಸಕರ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು.
ಸಂಘದ ರಾಜ್ಯ ಅಧ್ಯಕ್ಷ ಡಿ.ಎನ್. ಸಂಪತ್, ಜಂಟಿ ಕಾರ್ಯದರ್ಶಿ ಎನ್.ಜಿ. ಬಸವರಾಜು, ನಿರ್ದೇಶಕರಾದ ಕೆ.ಎಂ. ಜಯದೇವಯ್ಯ, ಬಿ.ಆರ್. ಶಂಕ್ರಪ್ಪ, ಎಂ.ಎನ್. ಪಂಚಾಕ್ಷರಯ್ಯ, ಕೆ.ಯು. ಸುರೇಂದ್ರಪ್ಪ, ಬಿ.ಆರ್. ಶಂಕರಪ್ಪ ಇತರರು ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರನ್ನು, ಸಂಘಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.