Advertisement
ನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿದರು. ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ, ಬುಡಕಟ್ಟು ನೃತ್ಯ ಪ್ರದರ್ಶಿಸಿದರು.
Related Articles
Advertisement
2006 ರ ಅರಣ್ಯಹಕ್ಕು ಕಾಯಿದೆಯಡಿ ಸೋಲಿಗರ 533 ಕುಟುಂಬಗಳಿಗೆ 1143 ಎಕರೆ ಭೂಮಿಯನ್ನು ಒಡೆತನಕ್ಕೆ ಲಭ್ಯವಿದೆ. 25 ಅರಣ್ಯ ಹಕ್ಕು ಸಮಿತಿಗಳು ಸಮುದಾಯ ಅರಣ್ಯ ಹಕ್ಕುಪತ್ರ ಪಡೆದಿವೆ. ಈಗಾಗಲೇ ಅರಣ್ಯ ಸಂರಕ್ಷಣೆ, ನಿರ್ವಹಣೆ, ಕಿರುಅರಣ್ಯ ಉತ್ಪನ್ನ ಸಂಗ್ರಹ ಮಾಡುವ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದರೆ ನಮ್ಮ ಕಿರು ಅರಣ್ಯ ಉತ್ಪನ್ನ ಸಂಗ್ರಹಕ್ಕೆ ಅವಕಾಶ ಇರುವುದಿಲ್ಲ. ನಮ್ಮನ್ನು ಈಗಿರುವ ಜಾಗದಿಂದ ಸ್ಥಳಾಂತರಿಸುವ ಕೆಲಸವೂ ನಡೆಯಲಿದೆ. ಆದ್ದರಿಂದ ಮದದೇಶ್ವರಬೆಟ್ಟ ವನ್ಯಧಾಮವನ್ನು ಹುಲಿ ಯೋಜನೆಗೆ ಸೇರಿಸಬಾರದು ಎಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲಾ ಪ್ರತಿಭಟನಾನಿರತರು ಬಾಯಿ, ತಲೆಗೆ ಹಸಿರು ಬಣ್ಣದ ಪಟ್ಟಿ ಕಟ್ಟಿಕೊಂಡಿದ್ದರು. ಗಿರಿಜನರ ತಂಡವೊಂದು ತಲೆಗೆ ಹಸಿರು ಎಲೆಯ ಕಿರೀಟ, ಮೈಗೆ ವಿಭೂತಿ ಬಳಿದುಕೊಂಡು ನಗಾರಿ, ತಮಟೆ ನೃತ್ಯ ಮಾಡಿ ಗಮನ ಸೆಳೆಯಿತು. ಪ್ರತಿಭಟನೆಯಲ್ಲಿ ಬುಡಕಟ್ಟು ಸಂಘದ ಮುಖಂಡರಾದ ಸಿ.ಮಾದಪ್ಪ, ಮುತ್ತಯ್ಯ, ರಾಜೇಗೌಡ, ಕೋಣೂರೇಗೌಡ, ಎಂ.ಜಡೇಸ್ವಾಮಿ, ಮಹದೇವ, ವಿಠಲ. ದೊಡ್ಡಯ್ಯ, ರಂಗೂಗೌಡ, ಸೋಮಶೇಖರ್, ವಿಜಯಕುಮಾರ್, ಕುನ್ನಮರಿಗೌಡ ಇತರರಿದ್ದರು.