Advertisement
ಶಿಕ್ಷಣ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಹಲವು ಬದಲಾವಣೆಗಳನ್ನು ಕಾಣುತ್ತಿದೆ ಎಂಬುದೇನೋ ಸತ್ಯವೇ ಆದರೂ ಅವೆಲ್ಲವೂ ಸುಧಾರಣೆಗಳೇ ಹೌದೇ ಎಂದು ವಿಮರ್ಶಿಸಬೇಕಿದೆ. 10ನೇತರಗತಿಯವರೆಗೆ ಎಲ್ಲೂ ಮಕ್ಕಳನ್ನು ಅನು ತ್ತೀರ್ಣಗೊಳಿಸ ಬಾರದೆಂಬ ಭ್ರಮೆಯಲ್ಲಿ ಅಕ್ಷರ ಬಾರದ ಮಕ್ಕಳೂ ಪಿಯುಸಿ ಮೆಟ್ಟಿಲೇರುತ್ತಿದ್ದಾರೆ. ಈಗ ಹತ್ತನೆಯ ಮತ್ತು ಪಿಯುಸಿಯ ಮಕ್ಕಳಿಗೆ 3 ಬಾರಿ ಪರೀಕ್ಷೆ ಯೆಂಬ ಹೊಸ ಯೋಜನೆಯು ಸುದ್ದಿ ಮಾಡುತ್ತಿದೆ. ಮೊದಲ ಪರೀಕ್ಷೆ ಕಡ್ಡಾಯ, ಉಳಿದೆರಡು ಐಚ್ಛಿಕವೇ ಆದರೂ ಮಕ್ಕಳಿಗಿದು ಒತ್ತಡವನ್ನು ತಂದಿಟ್ಟಿದೆ. ಶೇ.95 ತೆಗೆದ ವಿದ್ಯಾರ್ಥಿಗೂ ಪದೇ ಪದೆ ಅದನ್ನೇ ಓದಿ ಬರೆ ಯುವುದೆಂದರೆ ಹಿಂಸೆಯಲ್ಲವೇ? ಶಾಲಾ ಕಾಲೇ ಜುಗಳಲ್ಲೂ ಪ್ರಸ್ತುತ ವಿದ್ಯಾರ್ಥಿಗಳು ಪೂರ್ವ ಸಿದ್ಧತಾ ಪರೀಕ್ಷೆಯನ್ನು ಬರೆದಿರುತ್ತಾರೆ. ಅತಿ ಯಾದರೆ ಅಮೃತವೂ ವಿಷವೇ ಅಲ್ಲವೇ? ಮೌಲ್ಯಮಾಪನ ಮಾಡುವ ಶಿಕ್ಷಕರ ಪಾಡೇನು? ಹೊಸ ಓದಿಗೆ ಅವಕಾಶವೇ ಇಲ್ಲದಂತೆ ಸಮಯ ವನ್ನು ಮೌಲ್ಯಮಾಪನದಕ್ಕೇ ಕಳೆದರೆ ಬೋಧನಾ ಗುಣಮಟ್ಟ ಕುಸಿಯುತ್ತದೆ ಎಂಬುದು ಸ್ಪಷ್ಟ.
Related Articles
Advertisement
ಮೊದಲಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪರೀಕ್ಷಾ ಪದ್ಧತಿ ಉಪಯುಕ್ತವಾದೀತು. ಪರೀಕ್ಷೆ ಎಂಬ ಭೂತ ಅವರನ್ನು ಬಹಳವಾಗಿ ಕಾಡುತ್ತಿತ್ತು. ಈಗ ಕೊಂಚ ನಿರಾಳವಾದೀತು. ಪರೀಕ್ಷೆ ಬಗ್ಗೆ ಭಯಪಡದೆ ಧೈರ್ಯದಿಂದ ಎದುರಿಸುವ ಅವಕಾಶ ಬಂದೀತು. ಫೇಲ್ ಆದ ಕಾರಣಕ್ಕೆ ಶಾಲಾ ಕಾಲೇಜುಗಳನ್ನು ತೊರೆಯುತ್ತಿದ್ದ ವಿದ್ಯಾರ್ಥಿಗಳು, ಈ ಹೊಸ ಪದ್ಧತಿಯ ಕಾರಣ ದಿಂದ ಪುನಃ ಶಾಲಾ ಕಾಲೇಜು ಗಳಿಗೆ ಮರಳುತ್ತಾರೆ. ಫಲಿತಾಂಶ ಬಂದ ಅನಂತರ ಆತ್ಮಹತ್ಯೆಗಳು ಈ ಮೂಲಕ ಕಮ್ಮಿ ಆಗಬಹು ದೇನೋ… “ಮರಳಿ ಯತ್ನವ ಮಾಡು’ ಎಂಬ ಮಾತಿನಂತೆ ವಿದ್ಯಾರ್ಥಿಗಳು ಹೊಸ ಹುರುಪಿನಿಂದ ಪ್ರಯತ್ನಿಸಬಹುದು. ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅದನ್ನು ತಿರಸ್ಕರಿಸಿ ಮತ್ತೂಮ್ಮೆ ಬರೆಯುವ ಅವಕಾಶವಿದೆ.
ಇನ್ನು ಬಾಧಕಗಳಿಲ್ಲದಿಲ್ಲ. ವರ್ಷಕ್ಕೆ 3 ಪರೀಕ್ಷೆ ಎಂದಾದರೆ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತು ಉಡಾಫೆ, ಉದಾಸೀನ, ಶೈಕ್ಷಣಿಕ ಪ್ರಗತಿ ಬಗ್ಗೆ ನಿರಾಸಕ್ತಿ ಉಂಟಾಗಬಹುದು. ಇಲಾಖೆ ದೃಷ್ಟಿ ಯಿಂದ ಖರ್ಚು ವೆಚ್ಚ ಹೆಚ್ಚಾಗುವವು. ಶಿಕ್ಷಕರ ಮೇಲೆ ಕಾರ್ಯದೊತ್ತಡವೂ ಉಂಟಾಗುತ್ತದೆ.
ಉಮೇಶ್ ಬಿ.ಆಚಾರ್, ಬೆಂಗಳೂರು