Advertisement

ಹೊಸ ವರ್ಷದ ಮೊದಲ ಕನ್ನಡ ಚಿತ್ರ ಡಿಎನ್‌ಎ

04:10 PM Dec 31, 2021 | Team Udayavani |

“ಡಿಎನ್‌ಎ’- ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ಸೆಟ್ಟೇರಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಜ.7ರಂದು ತೆರೆಕಾಣುತ್ತಿದೆ. ಈ ಮೂಲಕ 2022ರ ಮೊದಲ ಕನ್ನಡ ಚಿತ್ರವಾಗಿ “ಡಿಎನ್‌ಎ’ ಗಮನ ಸೆಳೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು, ಅದರಲ್ಲೂ ಪ್ರಮೋಶನಲ್‌ ಸಾಂಗ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರವನ್ನು ಪ್ರಕಾಶ್‌ ರಾಜ್‌ ಮೆಹು ನಿರ್ದೇಶಿಸಿದ್ದಾರೆ. ಮಾತೃಶ್ರೀ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ ಮೈಲಾರಿ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಪ್ರಕಾಶ್‌ ರಾಜ್‌ ಮೆಹು, ನಾನು ಕಳೆದ 25 ವರ್ಷ ಗಳಿಂದ ಸಿನಿಮಾರಂಗ ದಲ್ಲಿದ್ದೇನೆ. ಆದರೆ ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಕಲಾತ್ಮಕವೂ ಆಗದೇ, ಪೂರ್ಣ ಕಮರ್ಷಿ ಯಲ್‌ ಚಿತ್ರವೂ ಆಗದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್‌ಎ ಮಾಡಿದ್ದೇನೆ. ಇದೊಂದು ಗುರುತಿನ ಕಣದ ಸಿನಿಮಾ. ಈ ಕಾಲಘಟ್ಟದಲ್ಲಿ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವಿನ ಗೋಡೆಗಳು ಭದ್ರಗೊಳ್ಳುತ್ತಿರುವ ಈ ಸಮಯದಲ್ಲಿ ನಿಜವಾದ ಸಂಬಂಧ ಯಾವುದು? ರಕ್ತ ಸಂಬಂಧವೇ ಅಥವಾ ಭಾವನಾತ್ಮಕ ಸಂಬಂಧವೇ ಅನ್ನೋದನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ. ಈಗಾಗಲೇ ಸಿನಿಮಾ ನೋಡಿರುವ ಕೆಲವು ನಟರು ಹಾಗೂ ತಾಂತ್ರಿಕ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಮುಜುಗರವಿಲ್ಲದೇ ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ ಎಂಬ ಹೊಗಳಿಕೆ ಬಂದಿದೆ’ ಎನ್ನುತ್ತಾರೆ.

ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು’ ಪ್ರಮಾಣ ಪತ ನೀಡಿದೆ. ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.

ನಾಯಕಿ ಕೂಡಾ ಒಳ್ಳೆಯ ಕಥೆ, ಸಿನಿಮಾದಲ್ಲಿ ನಟಿಸಿದ ಖುಷಿ ಹಂಚಿಕೊಂಡರು. ಉಳಿದಂತೆ ನಟಿಸಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡಬಹುದು ಎನ್ನುವುದು ನಿರ್ಮಾಪಕ ಮೈಲಾರಿ ಮಾತು.

ಚಿತ್ರಕ್ಕೆ ಚೇತನ್‌ ಅವರ ಸಂಗೀತವಿದೆ. ಎಸ್ತರ್‌ ನರೋನ್ಹಾ, ರೋಜರ್‌ ನಾರಾಯಣ್‌, ಮಾಸ್ಟರ್‌ ಆನಂದ್‌ ಪುತ್ರ ಮಾಸ್ಟರ್‌ ಕೃಷ್ಣ ಚೈತನ್ಯ, ಮಾಸ್ಟರ್‌ ಧೃವ ಮೇಹು, ನೀನಾಸಂ ಶ್ವೇತಾ ಸೇರಿದಂತೆ ಅನೇಕ ನಟಿಸಿದ್ದಾರೆ. ಚಿತ್ರಕ್ಕೆ ಶಿವರಾಜ್‌ ಮೇಹು ಸಂಕಲನ, ರವಿಕುಮಾರ್‌ ಸಾನಾ ಛಾಯಾಗ್ರಹಣ, ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ, ಪ್ರಕಾಶ್‌ ರಾಜ್‌ ಮೇಹು ಸಾಹಿತ್ಯವಿದೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next