Advertisement

DMK: ಕೇಂದ್ರದತ್ತ ಈಗ ಡಿಎಂಕೆ ಕಣ್ಣು

11:54 PM Sep 12, 2023 | Team Udayavani |

ನಾನೊಂದು ತೀರ, ನೀನೊಂದು ತೀರ ಎನ್ನುತ್ತಾ, ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಪಕ್ಷಗ ಳೆಲ್ಲ ಒಂದಾಗಿ, ವಿಪಕ್ಷಗಳ ಮೈತ್ರಿಕೂಟ ರಚಿಸಿಕೊಂಡಿವೆ. ಸದ್ಯಕ್ಕೆ 2024ರ ಚುನಾವಣೆಯೇ ಈ ಪಕ್ಷಗಳ ಟಾರ್ಗೆಟ್‌. ಐಎನ್‌ಡಿಐಎ ಮೈತ್ರಿಯ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಗೊತ್ತಾ ಗಿಲ್ಲ. ಇದರ ನಡುವೆಯೇ, ವಿಪಕ್ಷವೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿವೆ.

Advertisement

ಅದಕ್ಕೆ ಹೊಸ ಸೇರ್ಪ ಡೆಯೇ ಡಿಎಂಕೆ. ತಮಿಳುನಾಡು ಸಿಎಂ ಸ್ಟಾಲಿನ್‌ “2024ರ ಚುನಾವಣೆಯಲ್ಲಿ ಅಭೂತಪೂರ್ವ ಜಯಕ್ಕಾಗಿ ಶ್ರಮಿಸಿ’ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ. “ನಾವೇನಾದರೂ ಹೆಚ್ಚಿನ ಸೀಟು ಗೆದ್ದರೆ, ಕೇಂದ್ರ ಸರಕಾರ ರಚನೆಯಲ್ಲಿ ಡಿಎಂಕೆ ಬಹುದೊಡ್ಡ ಪಾತ್ರ ವಹಿಸಲಿದೆ’ ಎಂದೂ ಹೇಳಿ ದ್ದಾರೆ. ತ.ನಾಡಿನಲ್ಲಿ ಎಲ್ಲ 40 ಕ್ಷೇತ್ರಗಳಲ್ಲೂ ಗೆಲ್ಲ ಬೇಕು ಎಂಬ ಟಾರ್ಗೆಟ್‌ ನೀಡಿದ್ದಾರೆ. “ನಲ್ವತ್ತೂ ನಮ್ಮದೇ, ನಾಡೂ ನಮ್ಮದೇ’ ಎಂಬ ಸ್ಲೋಗನ್‌ ಕೂಡ ಕೊಟ್ಟಿದ್ದಾರೆ. ಅವರ ಈ ಮಾತುಗಳ ಹಿಂದಿನ ಮರ್ಮವೇನು ಎಂಬುದೇ ಯಕ್ಷಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next