ಚೆನ್ನೈ: ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್ ಅವರ “ಸನಾತನ ಧರ್ಮ’ ವಿವಾದದ ಬೆನ್ನಲ್ಲೇ ಡಿಎಂಕೆ ಸಂಸದ ಎ.ರಾಜಾ ಅವರ ಹೇಳಿಕೆ ಯೊಂದು ವಿವಾದದ ಕಿಡಿ ಹೊತ್ತಿಸಿದೆ. ಇತ್ತೀಚೆಗೆ ಎ.ರಾಜಾ ಅವರು ಜಾತಿ ವ್ಯವ ಸ್ಥೆಯ ಬಗ್ಗೆ ಪ್ರಸ್ತಾ ವಿಸುತ್ತಾ “ಹಿಂದೂ ಧರ್ಮವು ಅತೀ ದೊಡ್ಡ ಪಿಡುಗು’ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಡಿಎಂಕೆ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಮಂಗಳವಾರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾ ಮಲೈ, “ರಾಜ್ಯದಲ್ಲಿ ಜನರ ನಡುವೆ ಜಾತಿ ಹೆಸರಲ್ಲಿ ವಿಭಜನೆ ಸೃಷ್ಟಿ ಯಾಗಲು ಡಿಎಂಕೆಯೇ ಪ್ರಮುಖ ಕಾರಣ. ಡಿಎಂಕೆ ಮಾಡಿದ ತಪ್ಪಿಗಾಗಿ ಸನಾತನ ಧರ್ಮ ವನ್ನು ದೂಷಿಸುತ್ತಿ ದ್ದೀರಾ’ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಚರ್ಚಾ ಕಾರ್ಯ ಕ್ರಮವೊಂದ ರಲ್ಲಿ ಮಾತನಾಡಿದ್ದ ಎ.ರಾಜಾ, “ಜಾತಿ ವ್ಯವ ಸ್ಥೆಯು ಇನ್ನೂ ಅಸ್ತಿತ್ವದಲ್ಲಿರುವಂಥ ಭಾರತವೇ ಜಾಗತಿಕವಾಗಿ ಜಾತಿಯ ರೋಗ ಹರಡಲು ಕಾರಣ. ವಿದೇಶಗಳಲ್ಲಿರುವ ಭಾರತೀಯರು ಕೂಡ ಹಿಂದೂ ಧರ್ಮದ ಹೆಸರಲ್ಲಿ ಜಾತಿ ತಾರತಮ್ಯ ಮಾಡುತ್ತಾರೆ. ಹೀಗಾಗಿ ಹಿಂದೂ ಧರ್ಮವು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಒಂದು ಪಿಡುಗು ಇದ್ದಂತೆ’ ಎಂದು ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಗರಂ: ಇನ್ನೊಂದೆಡೆ ಸನಾತನ ಧರ್ಮ ವಿವಾದದ ಕುರಿತು ಮೌನಕ್ಕೆ ಶರಣಾಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. “ವಿಪಕ್ಷಗಳ ಒಕ್ಕೂಟವು ತನ್ನ ಓಟ್‌ಬ್ಯಾಂಕ್ ರಾಜಕೀಯ ಕ್ಕಾಗಿ ಸನಾತನ ಧರ್ಮವನ್ನು ಟಾರ್ಗೆಟ್ ಮಾಡುವ ಅಜೆಂಡಾ ಹಾಕಿಕೊಂಡಿದೆ. ಪ್ರಾಚೀನ ಧರ್ಮದ ಮೇಲೆ ದಾಳಿ ನಡೆಸುವುದು ಸೋನಿಯಾ ಹಾಗೂ ರಾಹುಲ್‌ಗಾಂಧಿ ಅವರ ಕಾರ್ಯತಂತ್ರದ ಭಾಗವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ. ಇದೇ ವೇಳೆ, ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಮಾತ ನಾಡಿ, “ದೇಶದ ಸಂಸ್ಕೃತಿ ಮತ್ತು ಪರಂಪರೆ ಯನ್ನು ಪ್ರತಿನಿತ್ಯ ಅವಮಾನಿಸಲಾಗುತ್ತಿದೆ. ಆದರೂ ಸೋನಿಯಾ ಗಾಂಧಿಯಂಥ ಹಿರಿಯ ನಾಯಕರು ಮೌನ ತಾಳಿ ರುವುದೇಕೆ’ ಎಂದು ಪ್ರಶ್ನಿಸಿದ್ದಾರೆ. “ಐಎನ್‌ಡಿಐಎ ಮೈತ್ರಿಕೂಟವನ್ನು ರಚಿಸಿರುವುದೇ ಸನಾತನ ಸಿದ್ಧಾಂತವನ್ನು ವಿರೋಧಿಸುವ ಉದ್ದೇಶದಿಂದ’ ಎಂದು ಡಿಎಂಕೆ ನಾಯಕ ಕೆ.ಪೊಣ್ಮುಡಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.