Advertisement

ಹೊಸ ಇತಿಹಾಸ…ಕೇರಳದಲ್ಲಿ ಈ ಬಾರಿಯೂ ಎಲ್ ಡಿಎಫ್ ಗೆ ಅಧಿಕಾರದ ಗದ್ದುಗೆ

09:10 AM May 02, 2021 | Team Udayavani |

ತಿರುವನಂತಪುರಂ: ಪಂಚರಾಜ್ಯಗಳ ಚುನಾವಣೆಯ ಮತಎಣಿಕೆ ಕಾರ್ಯ ಬಿರುಸಿನಿಂದ ಮುಂದುವರಿದಿದ್ದು, ಏತನ್ಮಧ್ಯೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಈ ಬಾರಿ ಎಲ್ ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸುವತ್ತ ದಾಪುಗಾಲಿಟ್ಟಿದೆ.

Advertisement

ಇದನ್ನೂ ಓದಿ:Live Updates: ಕುತೂಹಲ ಕೆರಳಿಸಿದ ಪಂಚರಾಜ್ಯ ಮತಎಣಿಕೆ-ಕೇರಳದಲ್ಲಿ LDF ಮೇಲುಗೈ

140 ಸ್ಥಾನಗಳ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 71 ಸ್ಥಾನಗಳ ಅಗತ್ಯವಿದೆ. ಆರಂಭಿಕ ಟ್ರೆಂಡ್ ಪ್ರಕಾರ ಕೇರಳದಲ್ಲಿ ಎರಡನೇ ಬಾರಿಗೆ ಎಲ್ ಡಿಎಫ್ ಆಡಳಿತಕ್ಕೆ ಏರುವ ಮುನ್ಸೂಚನೆ ನೀಡಿದೆ. ಸದ್ಯದ ಮತಎಣಿಕೆಯಲ್ಲಿ ಎಲ್ ಡಿಎಫ್ 76 ಸ್ಥಾನಗಳಲ್ಲಿ, ಯುಡಿಎಫ್ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕೊನೆಯ ಸುತ್ತಿನವರೆಗೂ ಎಲ್ ಡಿಎಫ್ ಮೈತ್ರಿಕೂಟ ಇದೇ ಮುನ್ನಡೆ ಕಾಯ್ದುಕೊಂಡರೆ ಮತ್ತೊಮ್ಮೆ ಪೂರ್ಣಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವುದು ನಿಶ್ಚಿತವಾಗಲಿದೆ. ಅಷ್ಟೇ ಅಲ್ಲ 1980ರ ದಶಕದಿಂದ ಕೇರಳ ರಾಜಕೀಯದಲ್ಲಿ ಒಮ್ಮೆ ಎಲ್ ಡಿಎಫ್, ಒಮ್ಮೆ ಯುಡಿಎಫ್ ಅಧಿಕಾರಕ್ಕೆ ಬರುತ್ತಿತ್ತು.

ಒಂದು ಬಾರಿ ಅಧಿಕಾರಕ್ಕೇರಿದವರು ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲವಾಗಿತ್ತು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಮತದಾರರ ಎಲ್ ಡಿಎಫ್ ಗೆ ಎರಡನೇ ಅವಧಿಗೆ ಕೈಹಿಡಿದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next