Advertisement

ಪ್ಲಾಸ್ಟಿಕ್‌ನಲ್ಲಿ ಡಿಎಲ್‌, ಆರ್‌ಸಿ

12:30 AM Mar 08, 2019 | |

ಹೊಸದಿಲ್ಲಿ: ವಾಹನ ನೋಂದಣಿ ಮತ್ತು ಚಾಲನಾ ಪರವಾನಗಿಗಳು ಇನ್ನು ಪ್ಲಾಸ್ಟಿಕ್‌ ಕಾರ್ಡ್‌ ಮಾದರಿಯಲ್ಲೇ ವಿತರಣೆ ಯಾಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದ್ದು, ಈ ಮೂಲಕ, ಕಾಗದ ಪತ್ರಗಳು ಅಥವಾ ಬುಕ್‌ಲೆಟ್‌ ಮಾದರಿಯಲ್ಲಿ ನೀಡಲಾಗುತ್ತಿದ್ದ ಚಾಲನಾ ಪರವಾನಗಿ ಮತ್ತು ವಾಹನ ದಾಖಲೆಗಳ ಸಂಪ್ರದಾಯಕ್ಕೆ ಪೂರ್ಣ ವಿರಾಮ ಹಾಕಲಾಗುತ್ತದೆ ಎಂದು ಹೇಳಿದೆ. 

Advertisement

ದೇಶಾದ್ಯಂತ ಒಂದೇ ಮಾದರಿಯ ಚಾಲನಾ ಪರವಾನಗಿ ಮತ್ತು ವಾಹನ ದಾಖಲೆಗಳು ಇರುವಂತೆ ಸಿದ್ಧ ಮಾದರಿಗಳನ್ನು ಎಲ್ಲಾ ರಾಜ್ಯಗಳಿಗೆ ರವಾನಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.   

2022ರ ಏಪ್ರಿಲ್‌ನ ನಂತರ ಉತ್ಪಾದನೆಯಾಗುವ 9 ಮತ್ತು ಅದಕ್ಕಿಂತ ಹೆಚ್ಚು ಆಸನಗಳಿರುವ ವಾಹನಗಳಲ್ಲಿ ಅಡ್ವಾನ್ಸ್‌$x ಬ್ರೇಕಿಂಗ್‌ ಸಿಸ್ಟಂ ಅಳವಡಿಕೆ ಕಡ್ಡಾಯಗೊಳಿಸಲು ಸಚಿವಾಲಯ ತೀರ್ಮಾನಿಸಿದೆ. ಈಗ ಸದ್ಯಕ್ಕೆ ಉಪಯೋಗದಲ್ಲಿರುವ ಈ ಮಾದರಿಯ ವಾಹನಗಳಿಗೆ ಈ ವ್ಯವಸ್ಥೆಯನ್ನು 2021ರ ಏಪ್ರಿಲ್‌ನೊಳಗೆ ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಲಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next