ನವದೆಹಲಿ: ಸಾರಿಗೆ ವಲಯದಲ್ಲಿ ಅತ್ಯಂತ ಮಹತ್ವದ ಹಾಗೂ ಬಹುಬೇಡಿಕೆಯ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ, ವಾಹನ ಚಾಲನಾ ಪರವಾನಗಿ ಪಡೆಯಲು 8ನೇ ತರಗತಿ ಪಾಸಾಗಿರಬೇಕು ಎಂಬ ನಿಯಮವನ್ನು ತೆಗೆದುಹಾಕಿದೆ. ರಸ್ತೆ ಸಾರಿಗೆ ಇಲಾಖೆಯು ಪ್ರಕಟಣೆ ಹೊರಡಿಸಿದ್ದು, ದೇಶದಲ್ಲಿ ಕುಶಲ ಚಾಲಕರ ಕೊರತೆ ನೀಗಿಸುವಲ್ಲಿ ಇದು ಮಹತ್ವದ ಕ್ರಮವಾಗಿದೆ.
ದೇಶದಲ್ಲಿ 22 ಲಕ್ಷ ಚಾಲಕರ ಕೊರತೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ, ಚಾಲನೆ ಕೌಶಲ ಪಡೆದಿರುತ್ತಾರೆ. ಇಂಥವರಿಗೆ ಈ ನಿಯಮ ಬದಲಾವಣೆಯಿಂದ ಉದ್ಯೋಗ ಪಡೆಯಲು ಸಹಾಯಕವಾಗಲಿದೆ. ಅಷ್ಟೇ ಅಲ್ಲ, ಇದು ದೇಶದ ನಿರುದ್ಯೋಗ ಸಮಸ್ಯೆಗೂ ಪರಿಹಾರ ನೀಡಲಿದೆ.
Advertisement
ಈ ಸಂಬಂಧ 1989ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ಜಾರಿಯಲ್ಲಿದೆ. ಶೀಘ್ರದಲ್ಲೇ ಇದರ ಕರಡು ಮಸೂದೆಯನ್ನು ಪ್ರಕಟಿಸ ಲಾಗುತ್ತದೆ ಎಂದು ರಸ್ತೆ ಸಾರಿಗೆ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ವಿವರಿಸಲಾ ಗಿದೆ. ಅನಕ್ಷರಸ್ಥರಿಗೆ ಹೆದ್ದಾರಿಯಲ್ಲಿನ ಸೂ ಚನಾ ಫಲಕಗಳನ್ನು ಓದಿ, ಅರ್ಥಮಾಡಿ ಕೊಳ್ಳಲು ಆಗದ ಕಾರಣವೇ ಅನೇಕ ಅವ ಘಡಗಳು ಸಂಭವಿಸುತ್ತವೆ. ಹೀಗಾಗಿ, ಅನಕ್ಷರ ಸ್ಥರಿಗೆ ನೀಡಲಾದ ಲೈಸೆನ್ಸ್ ವಾಪಸ್ ಪಡೆಯಬೇಕು ಎಂದು ಕಳೆದ ತಿಂಗಳಷ್ಟೇ ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿತ್ತು.