Advertisement
ಕುದೂರು ಹೋಬಳಿಯ ನಾರಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಮಹಿಳಾ ಮತ್ತು ಮಕ್ಕಳ ಇಲಾಖೆ ಸಮುದಾಯ ಬಂಡಾವಳ ವಿಧಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ 2 ವರ್ಷಗಳಿಂದ 112 ಕೋಟಿ ರೂ. ರೈತರ ಸಾಲ ಮನ್ನಾವಾಗಿದೆ. ಇಷ್ಟು ಆಗಿದ್ದರೂ ಮತ್ತೆ ಯಾವಾಗ ಸಾಲ ಕೊಡುತ್ತಿರಾ ರಾಹುಲ್ ಗಾಂಧಿ ಸರ್ಕಾರ ಬರುತ್ತಾ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ, ಯಾರು ಸಾಲ ಮನ್ನಾಮಾಡುತ್ತಾರೆ. ಇದನ್ನೇ ಕೇಳುತ್ತಾರೆ ವಿನಃ ಕೃತಜ್ಞತೆಯನ್ನು ತೋರಿಸುವುದೇ ಇಲ್ಲ. ಆದರೆ, ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿದ ಸಾಲವನ್ನು ಪಾವತಿ ಮಾಡುತ್ತಾರೆ. ಸರ್ಕಾರ ಇಂತಹವರಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಹೇಳಿದರು.
ಸಾಲ ಮನ್ನಾ ಹಾಗಲ್ಲ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ರವಿ ಮಾತನಾಡಿ, 15 ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಕೊಡುತ್ತಿದ್ದೇವೆ. ಬೇರೆ ಸಂಸ್ಥೆಗಳಲ್ಲಿ ವಾರ್ಷಿಕ 14 ರಿಂದ 15 ರೂ. ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದಾರೆ. ನಮ್ಮ ಬಳಿಯೇ ಸ್ತ್ರೀ ಶಕ್ತಿ ಸಂಘಗಳು ಸಾಲ ಪಡೆಯಬೇಕು. ಯಾವುದೇ ಕಾರಣಕ್ಕೂ ಸಾಲ ಮನ್ನಾವಾಗು ವುದಿಲ್ಲ. ತಿಪ್ಪಸಂದ್ರ ಹೋಬಳಿಯಲ್ಲಿ ಬಿಡಿಸಿಸಿ ಬ್ಯಾಂಕ್ ಶಾಖೆ ತೆರೆಯುವುದು ಅವಶ್ಯಕತದೆ ಎಂದು ಹೇಳಿದರು.ಜಿಪಂ ಸದಸ್ಯ ಎಚ್.ಎನ್.ಅಶೋಕ್‌ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಗಡಿ ತಾಲೂಕಿನಲ್ಲಿ 2 ವರ್ಷದ ಅವಧಿಯಲ್ಲಿ 112 ಕೋಟಿ ರೂ.ಸಾಲ ಮನ್ನಾವಾಗಿದ್ದು, ಈ ವರ್ಷ 72 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. 2 ಸರ್ಕಾರಗಳು ರೈತರ ಮೇಲೆ ಇಟ್ಟಿರುವ ಕಾಳಜಿಯನ್ನು ತಿಳಿಯಬಹುದು ಎಂದು ತಿಳಿಸಿದರು.
Related Articles
Advertisement
ಸೌಲಭ್ಯ ವಿತರಣೆ: ಮಾಗಡಿ ತಾಲೂಕಿನ ಸಂಕೀಘಟ್ಟ, ಸಾತನೂರು, ನೇತೇನಹಳಿÉ, ಸೀಗೆಕುಪ್ಪೆ, ಗ್ರಾಪಂನ ಸ್ತ್ರೀ ಶಕ್ತಿ ಸಂಘಗಳಿಗೆ ಸಂಜೀವಿನಿ ಯೋಜನೆಯಡಿ ಸಮುದಾಯ ಬಂಡಾವಳ ನಿಧಿಯ 10 ಕೋಟಿ ರೂ. ಸಾಲದ ಚೆಕ್‌ನ್ನು ವಿತರಿಸಲಾಯಿತು.
ಮಾದಿ ಗೊಂಡನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ ಕುದೂರು ಹೋಬಳಿ ವ್ಯಾಪ್ತಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಯಡಿ ಬಾಂಡ್ ವಿತರಿಸಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರವೀಶಯ್ಯ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿಪಂ ಸದಸ್ಯ ಅಣ್ಣೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯನಾಯ್ಕ, ತಾಪಂ ಅಧ್ಯಕ್ಷ ಶಿವರಾಜು, ನಾರಸಂದ್ರ ಗ್ರಾಪಂ ಅಧ್ಯಕ್ಷೆ ರಂಗಮ್ಮ ಇತರರು ಇದ್ದರು