Advertisement

ಟೆಂಪರರಿ ನಾಯಕರು ಬರ್ತಾರೆ, ಹೋಗ್ತಾರೆ; ಅನಿತಾ ಪರ ಡಿಕೆಶಿ ಬ್ಯಾಟಿಂಗ್

05:36 PM Nov 25, 2017 | Sharanya Alva |

ರಾಮನಗರ:ನಮಗೆ ಸಹಾಯ ಮಾಡಿದವರನ್ನು ಸ್ಮರಿಸಬೇಕು. ಆದರೆ ಕೆರೆ ತುಂಬಿಸಲು ಸಿಎಂ ಸಿದ್ದರಾಮಯ್ಯ 300 ಕೋಟಿ ರೂ. ನೀಡಿದ್ದರು, ಆದರೆ ಅವರನ್ನು ಒಮ್ಮೆಯೂ ಕ್ಷೇತ್ರಕ್ಕೆ ಕರೆದಿಲ್ಲ. ಟೆಂಪರರಿ ನಾಯಕರು ಬರ್ತಾರೆ, ಹೋಗ್ತಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಶಾಸಕ ಸಿಪಿ ಯೋಗೇಶ್ವರ್ ಗೆ ಟಾಂಗ್ ನೀಡಿದ್ದರೆ, ಮತ್ತೊಂದೆಡೆ ಅನಿತಾ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು.

Advertisement

ರಾಮನಗರ ಚನ್ನಪಟ್ಟಣದ ಕುರುಬರ ಸಂಘ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಅನಿತಾಕುಮಾರಸ್ವಾಮಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ನಿಮ್ಮನ್ನು ನಂಬಿಕೊಂಡು ಅನಿತಾ ಕುಮಾರಸ್ವಾಮಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನಿಮ್ಮ ಜತೆಯಲ್ಲಿ ಯಾರಿಲ್ಲದಿದ್ದರೂ ಶಾಶ್ವತವಾಗಿ ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಆಶ್ವಾಸನೆ ನೀಡಿದರು.

ನಾಲಿಗೆ ತಪ್ಪಬಾರದು ಆವಾಗ ಒಳ್ಳೇ ಮನುಷ್ಯ ಎಂದು ಹೇಳುತ್ತಾರೆ. ನಿಮ್ಮ ಹೆಣ, ಪಲ್ಲಕ್ಕಿಯನ್ನು ಹೊರುವವರು ನಾವೇ ಎಂದು ಮಾರ್ಮಿಕವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next