ಹೊಸದಿಲ್ಲಿ: ಸಚಿವ ಡಿ.ಕೆ.ಶಿವಕುಮಾರ್ ಅವರು ಕೋಟ್ಯಂತರ ರೂಪಾಯಿ ಹವಾಲಾ ಹಣವನ್ನು ಎಐಸಿಸಿಗೆ ಸಂಧಾನ ಮಾಡಿದ್ದಾರೆ ಎಂದು ಕೆಲ ದಾಖಲೆಗಳ ಸಮೇತ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರಾ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಪ್ರದರ್ಶಿಸಿದ ಸಂಬೀತ್ ಪಾತ್ರಾ ಈ ಗಂಭೀರ ಆರೋಪ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಡಿಕೆಶಿ ಕಾಂಗ್ರೆಸ್ ಪಾಲಿನ ಎಟಿಎಂ ಎಂದು ಆರೋಪಿಸಿದ ಅವರು ಕೆಜಿ ಅನ್ನುವ ಕೋಡ್‌ವರ್ಡ್ ಮೂಲಕ ಹಣ ಸಂದಾಯ ಮಾಡಿದ್ದಾರೆ. 65 ಕೆಜಿ ಹಣ ಸಂದಾಯ ಮಾಡಿರುವ ಬಗ್ಗೆ ಬರೆಯಲಾಗಿದೆ ಎಂದು ತಿಳಿಸಿದರು.
ಡೈರಿಯಲ್ಲಿ ಎಸ್‌ಜಿ ಮತ್ತು ಆರ್‌ಜಿ ಎನ್ನುವ ಕೋಡ್ ವರ್ಡ್‌ಗಳಿವೆ. ಎಸ್‌ಜಿ ಅಂದರೆ ಸೋನಿಯಾ ಗಾಂಧಿ , ಆರ್‌ಜಿ ಎಂದರೆ ರಾಹುಲ್ ಗಾಂಧಿ ಎಂದು ಪಾತ್ರಾ ಹೇಳಿದರು.
ವಿಚಾರಣೆ ನಡೆಸಿರುವ ಬಗ್ಗೆ ದಾಖಲೆಗಳ ಬಿಡುಗಡೆ ಮಾಡಿದ ಪಾತ್ರಾ ಡಿಕೆಶಿ ಆಪ್ತ ಆಂಜನೇಯ ಹನುಮಂತಯ್ಯ ಅವರ ತಪ್ಪೋಪ್ಪಿಗೆ ಹೇಳಿಕೆ ಬಗ್ಗೆ ವಿವರಿಸಿದರು.
Related Articles
ಜಗದೀಶ್ ಚಾಂದ್ ಮತ್ತು ರಾಜೇಂದ್ರ ಅವರೊಂದಿಗೆ ಚಾಂದಿನಿ ಚೌಕ್‌ನಿಂದ ಎಐಸಿಸಿ ಕಚೇರಿಗೆ ಹಣ ಸರಬರಾಜು ಮಾಡಲಾಗಿತ್ತು ಎಂದರು.
ನೋಟ್ ಬ್ಯಾನ್ ಆದ ಬಳಿಕ ಕಾಂಗ್ರೆಸ್ ಏಕೆ ಅಳುತ್ತಿತ್ತು ಎನ್ನುವುದು ಈಗ ತಿಳಿಯಿತು ಎಂದು ಪಾತ್ರಾ ಹೇಳಿದರು.
ಸುಮಾರು 600 ಕೋಟಿ ರೂಪಾಯಿಯಷ್ಟು ಹವಾಲಾ ಹಣ ಎಐಸಿಸಿಗೆ ಸಂದಾಯವಾಗಿದೆ ಎಂದ ಪಾತ್ರಾ ರಾಹುಲ್ ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಅಕ್ರಮ ಹಣ ಸಾಗಾಟ ಮತ್ತು ತೆರಿಗೆ ತಪ್ಪಿಸಿದ ಆರೋಪದ ಮೇಲೆ ಡಿ.ಕೆ. ಶಿವಕುಮಾರ್, ಮತ್ತವರ ನಾಲ್ವರು ಬೆಂಬಲಿಗರ ವಿರುದ್ಧ ಜಾರಿ ನಿರ್ದೇಶ ನಾಲಯ ಪ್ರಕರಣ ದಾಖಲಿಸಿದೆ. ಶೀಘ್ರದಲ್ಲೇ ಇವರೆಲ್ಲರಿಗೂ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಕರೆಯಲಿದ್ದು, ಬಂಧಿಸುವ ಸಾಧ್ಯತೆಯೂ ಇದೆ.