Advertisement

ಡಿಕೆಶಿ ಅನುಪಸ್ಥಿತಿ: ಕೈನಲ್ಲಿ ಲಾಭನಷ್ಟದ ಲೆಕ್ಕಾಚಾರ

10:39 PM Sep 25, 2019 | Lakshmi GovindaRaju |

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಿದ್ದು, ಈ ಸಂದರ್ಭದಲ್ಲೇ “ಉಪ ಚುನಾವಣೆ ಸ್ಪೆಷಲಿಸ್ಟ್‌ ‘ ಡಿ.ಕೆ. ಶಿವಕುಮಾರ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದು, ಅವರ ಅನುಪಸ್ಥಿತಿ ಬಗ್ಗೆ ಕಾಂಗ್ರೆಸ್‌ನಲ್ಲಿ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ.

Advertisement

ಬಂಡಾಯ ಶಾಸಕರನ್ನು ವಾಪಸ್‌ ಕರೆತಂದು ಮೈತ್ರಿ ಸರ್ಕಾರ ರಕ್ಷಿಸಲು ಶತಪ್ರಯತ್ನ ಮಾಡಿದ್ದ ಡಿ.ಕೆ.ಶಿವಕುಮಾರ್‌ ಬಂಡಾಯಗಾರರ ಮನವೊಲಿಕೆಗೆ ಮುಂಬೈ ಬೀದಿಯಲ್ಲಿ ಮಳೆಯಲ್ಲೇ ಇಡೀ ದಿನ ಕಳೆದಿದ್ದರು. ಆದರೂ ಬಂಡಾಯ ಶಾಸಕರು ಸ್ಪಂದಿಸದಿದ್ದಾಗ ವಾಪಸ್‌ ಬಂದಿದ್ದ ಅವರು, ಬಂಡಾಯ ಶಾಸಕರನ್ನು ರಣರಂಗದಲ್ಲಿ ಎದುರಿಸುವುದಾಗಿ ವಿಧಾನಸಭೆಯಲ್ಲಿ ಸವಾಲು ಹಾಕಿದ್ದರು.

ಆದರೆ, ಡಿಕೆಶಿ ಜೈಲು ಸೇರಿರುವುದರಿಂದ ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ. ಹೊಸಪೇಟೆ, ಹುಣಸೂರು, ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌, ಹೊಸಕೋಟೆ, ಹಿರೇಕೆರೂರು ಕ್ಷೇತ್ರಗಳಲ್ಲಿ ಶಿವಕುಮಾರ್‌ ಪ್ರಭಾವ ಹೆಚ್ಚಿದೆ ಎನ್ನಲಾಗುತ್ತಿದ್ದು, ಈ ಕ್ಷೇತ್ರಗಳಲ್ಲಿ ಅವರ ಅನುಪಸ್ಥಿತಿ ಕಾಂಗ್ರೆಸ್‌ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಕಾರ್ಯತಂತ್ರ ಕರಗತ: ಡಿ.ಕೆ.ಶಿವಕುಮಾರ್‌ ಯಾವುದೇ ಕ್ಷೇತ್ರದ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲು ಆ ಕ್ಷೇತ್ರದಲ್ಲಿ ತಮ್ಮದೇ ಆದ ಖಾಸಗಿ ಸಮೀಕ್ಷೆ ನಡೆಸಿ, ಪಕ್ಷದ ನಾಯಕರು, ಕಾರ್ಯಕರ್ತರ ಶಕ್ತಿ ಸಾಮರ್ಥ್ಯ ತಿಳಿಯುವುದರ ಜೊತೆಗೆ ವಿರೋಧಿಗಳ ಶಕ್ತಿ ಹಾಗೂ ದೌರ್ಬಲ್ಯವನ್ನು ತಿಳಿಯುವ ಪ್ರಯತ್ನ ಮಾಡುತ್ತಾರೆ. ಆ ನಂತರ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ಯುವಕರ ತಂಡ ರಚಿಸಿ ಜವಾಬ್ದಾರಿಗಳ ಹಂಚಿಕೆ ಮಾಡುತ್ತಾರೆ.

ಆ ತಂಡವನ್ನೇ ಇಡೀ ಚುನಾವಣಾ ಕಾರ್ಯತಂತ್ರದ ಶಕ್ತಿಯಾಗಿ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಯಾರನ್ನೂ ನಿರ್ಲಕ್ಷ್ಯ ಮಾಡದೇ ಮುನಿಸಿ ಕೊಂಡವರು, ಬಂಡಾಯಗಾರರನ್ನು ಕರೆದು ಸಂಧಾನ ಮಾಡುವ ಕೆಲಸ ಕರಗತ ಮಾಡಿಕೊಂ ಡಿರುವುದು ಉಪ ಚುನಾವಣೆಗಳಲ್ಲಿ ಪಕ್ಷಕ್ಕೆ ಆಗುವ ಹಾನಿಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವ ಅಭಿಪ್ರಾಯವಿದೆ.

Advertisement

ಅಲ್ಲದೇ ವಿರೋಧಿ ಪಾಳಯದಲ್ಲಿರುವವರ ದೌರ್ಬಲ್ಯಗಳನ್ನು ಗುರುತಿಸಿ ಅವರನ್ನು ಪರೋಕ್ಷ ಅಥವಾ ನೇರವಾಗಿಯೇ ಪಕ್ಷದ ಅಭ್ಯರ್ಥಿಗೆ ಬೆಂಬಲ ಪಡೆಯುವಂತೆ ಮಾಡಿಸುವಲ್ಲೂ ಶಿವಕುಮಾರ್‌ ಚಾಣಾಕ್ಷರು ಎನ್ನಲಾಗುತ್ತದೆ. ಇದೀಗ ಅವರೇ ಜೈಲಿನಲ್ಲಿರುವುದರಿಂದ ಅವರ ಆಪ್ತರು ಉಪ ಚುನಾವಣೆಯ ಚುಟುವಟಿಕೆ ಗಳಿಂದ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ತಮ್ಮ ನಾಯಕ ಇಲ್ಲದೇ ಚುನಾವಣೆ ಕಣಕ್ಕೆ ಹೋಗಿ ಪ್ರಯೋಜನವಿಲ್ಲ ಎನ್ನುವ ಮನಸ್ಥಿತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಗಂಭೀರವಾಗಿ ಪರಿಗಣಿಸದ ನಾಯಕರು: ಶಿವಕುಮಾರ್‌ ಇಲ್ಲದೆಯೂ ಉಪ ಚುನಾವಣೆಗಳನ್ನು ಗೆಲ್ಲುವ ಸಾಮರ್ಥ್ಯ ಪಕ್ಷ ಹಾಗೂ ಇತರ ನಾಯಕರಿಗೆ ಇದೆ ಎನ್ನುವ ಭಾವನೆ ಪಕ್ಷದ ಘಟಾನುಘಟಿ ನಾಯಕರಿಗೆ ಇರುವುದರಿಂದ ಡಿಕೆಶಿ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ, ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವುದೂ ಕೂಡ ಉಳಿದ ನಾಯಕರ ನಾಯಕತ್ವಕ್ಕೆ ಸವಾಲು ಎಂಬ ಮಾತುಗಳು ಡಿಕೆಶಿ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next