Advertisement

ಗ್ರಾಮೀಣ ಭಾಗದ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಆದ್ಯತೆ

09:58 AM Sep 24, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ| ಆರ್‌. ಸೆಲ್ವಮಣಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಸ್ವಲ್ಪವೇ ಹೊತ್ತಿನಲ್ಲಿ ಜಿ.ಪಂ. ಸಾಮಾನ್ಯ ಸಭೆಯಲ್ಲೂ ಭಾಗವಹಿಸಿ ಗಮನ ಸೆಳೆದಿದ್ದರು. ಮೊದಲ ಸಭೆಯಾಗಿದ್ದರೂ ಸಿಇಒ ಆಗಿ ಅವರ ಕಾರ್ಯ ನಿರ್ವಹಣೆಗೆ ಸದಸ್ಯರು ಹಾಗೂ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. 

Advertisement

ಮೂಲತಃ ತಮಿಳುನಾಡಿನ ನಾಮಕ್ಕಲ್‌ ಜಿಲ್ಲೆಯವರಾದ ಡಾ| ಸೆಲ್ವಮಣಿ ಅವರು ಕೃಷಿ ವಿಜ್ಞಾನದಲ್ಲಿ ಸ್ನಾತ ಕೋತ್ತರ ಪದವೀಧರರು. ಡಾಕ್ಟರೇಟ್‌ ಪಡೆದ ಬಳಿಕ ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಯುವ ಅಧಿ ಕಾರಿಯಾಗಿರುವ ಡಾ| ಸೆಲ್ವಮಣಿ ಬೀದರ್‌ನಲ್ಲಿ 22 ತಿಂಗಳು ಜಿ.ಪಂ. ಸಿಇಒ ಆಗಿ ಕಾರ್ಯನಿರ್ವಹಿಸಿದ ಅನು ಭವ ಹೊಂದಿದ್ದಾರೆ. ಈ ಹಿಂದೆ ರಾಯಚೂರಿನಲ್ಲಿ ಡಾ| ಶಶಿಕಾಂತ ಸೆಂಥಿಲ್‌ ಜಿಲ್ಲಾಧಿಕಾರಿಯಾಗಿದ್ದಾಗ ಡಾ| ಸೆಲ್ವಮಣಿ ಕೂಡ ಅದೇ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿದ್ದರು. ಈಗ ಮತ್ತೆ ಈ ಇಬ್ಬರು ಅಧಿಕಾರಿಗಳಿಗೆ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಲಭಿಸಿದೆ. ನೂತನ ಸಿಇಒ ಡಾ| ಸೆಲ್ವಮಣಿ ಅವರ ಜತೆ “ಉದಯವಾಣಿ’ ನಡೆಸಿದ ಮಾತುಕತೆಯ ಸಾರ ಇಲ್ಲಿದೆ. 

ಮೊದಲ ಅನುಭವ
ದ.ಕ. ಜಿ.ಪಂ. ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಸ್ವಲ್ಪವೇ ಹೊತ್ತಿನಲ್ಲಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದೆ. ಅನುಭವ ಉತ್ತಮವಾಗಿತ್ತು. ಪ್ರಬುದ್ಧ ಚರ್ಚೆ ಗಳಾಗಿವೆ. ಜಿಲ್ಲೆಯ ಹಲವು ಪ್ರಮುಖ ವಿಷಯಗಳು ಪ್ರಸ್ತಾ ವಿಸಲ್ಪಟ್ಟಿವೆ. 

ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ
ಗ್ರಾಮಾಂತರ ಪ್ರದೇಶದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಸಭೆಯಲ್ಲೂ ಇದು ಪ್ರಸ್ತಾವನೆಯಾಗಿದೆ. ಬೀದರ್‌ ಜಿಲ್ಲಾ ಪಂಚಾಯತ್‌ ಸಿಇಒ ಆಗಿದ್ದ ವೇಳೆ ಸ್ವತ್ಛ ಭಾರತ ಮಿಷನ್‌ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಯಶಸ್ಸು ಕಂಡಿದ್ದೇನೆ. ನಾನು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅಲ್ಲಿ ಶೌಚಾಲಯಗಳ ನಿರ್ಮಾಣ ಗುರಿ ಸಾಧನೆ ಕನಿಷ್ಠ ಮಟ್ಟದಲ್ಲಿತ್ತು. ಇದನ್ನು ಗರಿಷ್ಠ ಮಟ್ಟಕ್ಕೇರಿಸುವುದಕ್ಕೆ ನಾನು ತೆಗೆದು ಕೊಂಡ ಕ್ರಮಗಳು ಫಲ ನೀಡಿದವು. ಇದರ ಫಲವಾಗಿ ಸಿಇಒ ಸ್ಥಾನದಿಂದ ನಿರ್ಗಮಿಸುವ ಸಂದರ್ಭ ಗುರಿ ಸಾಧನೆ ಶೇ.90ಕ್ಕೆ ಮುಟ್ಟಿತ್ತು. ದ.ಕನ್ನಡ ಈಗಾಗಲೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆ ಯಾಗಿದೆ. ಇಲ್ಲಿಂದ ಇನ್ನೊಂದು ಉನ್ನತ ಹಂತ ದೆಡೆಗೆ ಸಾಗಬೇಕು. ಇಲ್ಲಿ ಗ್ರಾ.ಪಂ. ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆ ಇದೆ ಎಂಬುದು ಅರಿವಿಗೆ ಬಂದಿದೆ. ಕೆಲವು ದಿನಗಳವರೆಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಜನ ಪ್ರತಿನಿಧಿಗಳು, ಅಧಿಕಾರಿಗಳ ಜತೆ ಚರ್ಚಿಸಿ ಪೂರಕ ಕಾರ್ಯಕ್ರಮಗಳನ್ನು ಹಾಕಿ ಕೊಳ್ಳಲು ಪ್ರಯತ್ನಿಸಲಿದ್ದೇನೆ.

ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ
ಈಗಷ್ಟೆ ಅಧಿಕಾರ ವಹಿಸಿ ಕೊಂಡಿದ್ದೇನೆ. ಜಿಲ್ಲೆಯ ಸಮಸ್ಯೆಗಳು, ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆಯುವ ಕಾರ್ಯ ಮೊದಲು ಮಾಡುತ್ತೇನೆ. ಮುಖ್ಯವಾಗಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದುಕೊಂಡಿದ್ದೇನೆ. ಈ ಬಾರಿ ಅತಿಯಾದ ಮಳೆ, ಪ್ರಾಕೃತಿಕ ವಿಕೋಪದಿಂದಲೂ ಹಾನಿಗಳಾಗಿವೆ. 

Advertisement

ಪ್ರಾಮಾಣಿಕ ಸ್ಪಂದನೆ
ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಸಮಸ್ಯೆಗಳಿಗೆ ಪರಿಹಾರ ಬಯಸುತ್ತಾರೆ. ಅವುಗಳನ್ನು ಸಭೆಯಲ್ಲಿ ಪ್ರಸ್ತಾವಿಸುತ್ತಾರೆ. ಸದನದ ಗಮನಕ್ಕೆ ತರುತ್ತಾರೆ. ಪ್ರಾಮಾಣಿಕ ವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದು ನಮ್ಮ ಕರ್ತವ್ಯ. ಜಿ.ಪಂ. ಮಟ್ಟದಲ್ಲೇ ಪರಿಹರಿಸಲು ಸಾಧ್ಯವಿದ್ದರೆ ಇಲ್ಲೇ ಕ್ರಮಗಳನ್ನು ಕೈಗೊಳ್ಳಬಹುದು. ಅಲ್ಲದಿದ್ದರೆ ಸಂಬಂಧಪಟ್ಟವರಿಗೆ ಕಳುಹಿಸಿ ಕೊಡಬಹುದು.

ತಂಡ ಪ್ರಯತ್ನದಿಂದ ಯಶಸ್ಸು
ನಾನು ಟೀಮ್‌ವರ್ಕ್‌ನಲ್ಲಿ ನಂಬಿಕೆ ಹೊಂದಿದವನು. ಯಾವುದೇ ಕೆಲಸ ಒಬ್ಬನೇ ಮಾಡಿ ದರೆ ಪೂರ್ತಿಗೊಳಿಸಲು 10 ದಿನ ಬೇಕಾಗಬಹುದು. ತಂಡವಾಗಿ ಕಾರ್ಯ ನಿರ್ವಹಿಸಿದರೆ ಒಂದೇ ದಿನದಲ್ಲಿ ಸಾಧಿಸಬಹುದು. ಬೀದರ್‌ನಲ್ಲೂ ಈ ಮಾದರಿಯಲ್ಲಿ ಕಾರ್ಯ ನಿರ್ವಹಿಸಿ ಯಶಸ್ಸು ಕಂಡಿದ್ದೇನೆ. ಒಳ್ಳೆಯದು, ಕೆಟ್ಟದು ಎಲ್ಲ ಕಡೆ ಇರುತ್ತದೆ.

ಹಿಂದಿನ ಬಾಸ್‌ ಜತೆ ಕೆಲಸ
ಬೀದರ್‌ ಜಿಲ್ಲೆಯಲ್ಲಿ 22 ತಿಂಗಳು ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಸಮಸ್ಯೆಗಳಲ್ಲಿ ಅಲ್ಲಿಗೂ ಇಲ್ಲಿಗೂ ಭಿನ್ನತೆ ಇರ ಬಹುದು. ರಾಯಚೂರಿನಲ್ಲಿ ನನ್ನ ಬಾಸ್‌ ಆಗಿದ್ದ ಡಾ| ಶಶಿಕಾಂತ ಸೆಂಥಿಲ್‌ ಇಲ್ಲೂ ಡಿಸಿ ಆಗಿದ್ದಾರೆ. ಆಗ ನಾನು ಸಹಾಯಕ ಆಯುಕ್ತನಾಗಿದ್ದೆ. ಈಗ ಅವರ ಜತೆ ಇಲ್ಲಿ ಕೆಲಸ ಮಾಡುವ ಅವಕಾಶ ಖುಷಿ ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next