Advertisement
ನಗರದ ಪುರಭವನದಲ್ಲಿ ರವಿವಾರ ಜರಗಿದ ದ.ಕ. ಮತ್ತು ಉಡುಪಿ ಜಿಲ್ಲಾ ಅಂಗವಿಕಲರ ಸಂಘದ 26ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸರಕಾರದಿಂದ ಅಂಗವಿಕಲರಿಗೆ ಇರುವ ಸವಲತ್ತುಗಳು ಸಮರ್ಪಕವಾಗಿ ವಿತರಣೆಯಾಗುವುದು ಅವಶ್ಯ. ಪ್ರಸ್ತುತ ನೀಡುವ ಮಾಸಾಶನವನ್ನು ದುಪ್ಪಟ್ಟುಗೊಳಿಸಬೇಕು ಎಂದು ತಿಳಿಸಿದರು.
Related Articles
ಬಹುತೇಕ ಅಂಧತ್ವವಿದ್ದರೂ ಅದನ್ನು ಮೀರಿ ನಿಂತು ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾದ ಕಾಟಿಪಳ್ಳದ ತ್ರಿವಳಿ ಸಾಧಕರಾದ ಜೀವನ್, ಜಯೇಶ್ ಹಾಗೂ ಜಿತೇಶ್ ಅವರನ್ನು ಸಮ್ಮಾನಿಸಲಾಯಿತು. 40 ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ಹಾಗೂ 20 ಮಂದಿಗೆ ವೈದ್ಯಕೀಯ ನೆರವು ನೀಡಲಾಯಿತು.
Advertisement
ರ‍್ಯಾಂಪ್ ಇಲ್ಲನಗರದ ಪುರಭವನದಲ್ಲಿ ಅಂಗವಿಕಲರಿಗೆ ವೇದಿಕೆಗೆ ಹೋಗಲು ರ‍್ಯಾಂಪ್ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪಗಳು ಕೇಳಿಬಂತು. ಪುರಭವನದಲ್ಲಿ ರ‍್ಯಾಂಪ್ ನಿರ್ಮಿಸದಿರುವುದರಿಂದ ಅಂಗವಿಕಲರು ವೇದಿಕೆಗೆ ಹೋಗಲು ಪ್ರಯಾಸ
ಪಡಬೇಕಾಗಿದೆ ಎಂದು ಅತಿಥಿಯಾಗಿದ್ದ ಹರೀಶ್ ಆಚಾರ್ ತಿಳಿಸಿದರು. ರ‍್ಯಾಂಪ್ ವ್ಯವಸ್ಥೆ ಮಾಡದಿರುವ ಬಗ್ಗೆ ಸಂಘದ ಅಧ್ಯಕ್ಷ ಮುರಲೀಧರ ನಾೖಕ್ ಕೂಡ ಅಸಮಾಧಾನ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಟಿ. ಕೊರಗಪ್ಪ ಗೌಡ, ಕೋಶಾಧ್ಯಕ್ಷ ಪ್ರೊ| ಎಂ. ವಿಶ್ವನಾಥ್, ಸಂಚಾಲಕ ಹರೀಶ್ ಶೆಟ್ಟಿ, ಸಹಸಂಚಾಲಕ ಪ್ರವೀಣ್ ನಾಯಕ್, ನಾಗೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾಸಾಶನ ಹೆಚಿಸಲು ಆಗ್ರಹ
ಬೇಡಿಕೆಯನ್ನು ಮಂಡಿಸಿದ ಸಂಘದ ಅಧ್ಯಕ್ಷ ಮುರಲೀಧರ ನಾೖಕ್, ಅಂಗವಿಕಲರಿಗೆ ಪ್ರಸ್ತುತ ನೀಡುವ 500 ರೂ. ಮಾಸಾಶನವನ್ನು 2,500 ರೂ. ಗೆ ಏರಿಸಬೇಕು, ಮಾಸಾಶನ ಪಡೆಯಲು ಇರುವ ಆದಾಯ ಮಿತಿ ರದ್ದುಪಡಿಸಬೇಕು, ಸೌಲಭ್ಯ ನೀಡುವಾಗ ತಾರತಮ್ಯ ಮಾಡಬಾರದು ಮತ್ತು ಶೇ.40 ಕ್ಕಿಂತ ಹೆಚ್ಚಿಗೆ ಅಂಗವಿಕಲತೆ ಇರುವ ಎಲ್ಲರಿಗೂ ಸಮಾನ ಸೌಲಭ್ಯ ನೀಡಬೇಕು, ಅಂಗವಿಕಲರಿಗೆ ತಾಲೂಕಿಗೊಂದರಂತೆ ಹಾಸ್ಟೆಲ್, ಗೃಹಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಮರು ಪ್ರಾರಂಭಿಸಬೇಕು ಸಹಿತ 12 ಬೇಡಿಕೆಗಳನ್ನು ಈಡೇರಿಸ ಬೇಕೆಂದು ದ.ಕ.,ಉಡುಪಿ ಜಿಲ್ಲಾ ಅಂಗವಿಕಲರ ಸಂಘದ ವತಿಯಿಂದ ಸರಕಾರವನ್ನು ಆಗ್ರಹಿಸಿದರು.