ಯಾಕೆಂದರೆ ಅಸಲಿ ನೋಟಿನ ಮುಖ ಹೊತ್ತ ನಕಲಿ ನೋಟು ನಿಮ್ಮನ್ನು ವಂಚಿಸಬಹುದು. ಜಿಲ್ಲೆಯ ಕೆಲವೆಡೆ ನಕಲಿ ನೋಟು ಕಾಣ ಸಿಕ್ಕಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ನೋಟು ನಿಷೇಧದ ಅನಂತರ ಹೊಸದಾಗಿ ಮುದ್ರಣಗೊಂಡ ಐನೂರು, ಎರಡು ಸಾವಿರ ಮುಖ ಬೆಲೆ ನೋಟನ್ನು ಹೋಲುವ ಕಳ್ಳನೋಟು ರಾಜ್ಯದ ಬೇರೆ-ಬೇರೆ ಭಾಗಗಳಲ್ಲಿ ಪತ್ತೆ ಆದ ಪ್ರಕರಣ ವರದಿಯಾಗಿತ್ತು.
ಅಸಲಿಯನ್ನೇ ಹೋಲುವ ನಕಲಿ ನೋಟು ಹಾವಳಿ ಈಗದ.ಕ. ಜಿಲ್ಲೆಗೂ ಕಾಲಿಟ್ಟಿರುವ ಅನುಮಾನ ಮೂಡಿದೆ. ಇತ್ತೀಚೆಗೆ ಪುತ್ತೂರಿನ ನಗರದಲ್ಲಿ ಗ್ರಾಹಕರೊಬ್ಬರಿಗೆ ಐನೂರು ರೂ. ಮುಖ ಬೆಲೆಯ ಸಂಶಯಾಸ್ಪದ ನೋಟು ದೊರೆತಿರುವುದು, ಈ ಅನುಮಾನಕ್ಕೆ ಪುಷ್ಟಿ ನೀಡಿದೆ.
Advertisement
ಹೊರ ರಾಜ್ಯದ ಕೈವಾಡ!ದಶಕದ ಹಿಂದೆ ಕಳ್ಳನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು, ಸುಳ್ಯ ಸುದ್ದಿಯಾಗಿತ್ತು. ನೋಟು ನಿಷೇಧದ ಅನಂತರ ಜಿಲ್ಲೆಯಲ್ಲಿ 2 ಸಾವಿರ ಮುಖ ಬೆಲೆಯ ಲಕ್ಷಾಂತರ ರೂ. ಹಣವನ್ನು ಅಕ್ರಮವಾಗಿ ಸಾಗಿಸಿ ಸಿಕ್ಕಿ ಬಿದ್ದ ಪ್ರಕರಣ ವರದಿಯಾಗಿತ್ತು. ಈಗ ಹೊಸ ನೋಟನ್ನು ಹೋಲುವ ನಕಲಿ ಐನೂರು ರೂ. ಮುಖ ಬೆಲೆಯ ನೋಟು ಪತ್ತೆ ಆಗಿರುವ ಹಿಂದೆ ಹೊರ ರಾಜ್ಯದ ಕೈವಾಡದ ಬಗ್ಗೆ ಅನುಮಾನ ಮೂಡಿಸಿದೆ. ಕೇರಳ-ಕರ್ನಾಟಕದ ಗಡಿ ಭಾಗ ಇಂತಹ ಅಕ್ರಮ ಚಟುವಟಿಕೆಗಳಿಗೆ ರಾಜ ಮಾರ್ಗದಂತಿದ್ದು, ಆ ಪ್ರದೇಶಗಳನ್ನು ಕೇಂದ್ರಿಕರಿಸಿ ಕಳ್ಳನೋಟು ಹರಿಯ ಬಿಡುತ್ತಿರುವ ಸಾಧ್ಯತೆಯೂಇಲ್ಲದಿಲ್ಲ.
ಪುತ್ತೂರಿನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಳ್ಯದ ನಿವಾಸಿಯೋರ್ವ ಸಂಬಂಧಿಕರೊಬ್ಬರ ಚಿಕಿತ್ಸೆಯ ವೆಚ್ಚದ ಮೊತ್ತ ಪಾವತಿಸುವ ಸಂದರ್ಭ, ಐನೂರು ರೂ. ಒಂದು ನೋಟು ಅಸಲಿ ಅಲ್ಲ ಅನ್ನುವುದು ಗಮನಕ್ಕೆ ಬಂದಿತ್ತು. ಹಣ ಪಾವತಿಗೆ ಮುನ್ನ ಎಪಿಎಂಸಿ ರಸ್ತೆಯ ಎಟಿಎಂವೊಂದರಲ್ಲಿ ನಾಲ್ಕು ಸಾವಿರ ರೂ. ನಗದು ಡ್ರಾ ಮಾಡಿದ್ದರು. ಅದರಲ್ಲಿ ಬಂದಿರುವ ನೋಟು ಇದಾಗಿರಬಹುದೆಂದೂ ಭಾವಿಸಿ, ಬ್ಯಾಂಕ್‌ನಲ್ಲಿ ಹೋಗಿ ವಿಚಾರಿಸಿದ್ದಾರೆ.ಆದರೆ, ನೋಟು ಪರಿಶೀಲನೆ ಅನಂತರವೇ ಎಟಿಎಂ ನಲ್ಲಿ ನೋಟು ಇಡಲಾಗುತ್ತದೆ. ಹಾಗಾಗಿ ಎಟಿಎಂನಿಂದ ಬರಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. ಹಾಗಾಗಿ ಬೇರೆ ಕಡೆ ವ್ಯವಹಾರ ಸಂದರ್ಭ ಈ ನೋಟು ಬಂದಿರುವ ಸಾಧ್ಯತೆಯು ಇದೆ. ಒಟ್ಟಿನಲ್ಲಿ ಈ ನೋಟು ಅಸಲಿ ಅಲ್ಲ ಅನ್ನುವುದನ್ನು ಆಸ್ಪತ್ರೆ, ಬ್ಯಾಂಕ್ ಸಿಬಂದಿ ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗೆ ಹಣ ಪಾವತಿಸುವ ಸಂದರ್ಭ ಅಲ್ಲಿನ ಸಿಬಂದಿ ನೋಟು ಅನುಮಾನ ಮೂಡಿಸುತ್ತಿದೆ ಎಂದು ಹೇಳಿದ್ದರು. ತತ್‌ಕ್ಷಣ ಎಟಿಂಎಂ ಹಣ ಡ್ರಾ ಮಾಡಿದ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದೆ. ಅಲ್ಲೂ ಸಂಶಯಾಸ್ಪದವಾದ ನೋಟು ಎಂಬ ಮಾಹಿತಿ ನೀಡಿದ್ದರು. ನೋಟು ಎಲ್ಲಿಂದ ಬಂತು ಅನ್ನುವುದು ಗೊತ್ತಾಗುತ್ತಿಲ್ಲ.
Related Articles
Advertisement
ನೋಟು ಬಳಸುವಾಗ ಎಚ್ಚರನೋಟು ನಕಲಿಯು, ಅಸಲಿಯು ಅನ್ನುವ ಬಗ್ಗೆ ಗ್ರಾಹಕರು ತತ್‌ಕ್ಷಣ ಗುರುತಿಸುವುದು ಕಷ್ಟ. ಬ್ಯಾಂಕ್‌ಗೆ ತೆರಳಿಯೇ ಇದನ್ನು ಖಚಿತಪಡಿಸಕೊಳ್ಳಬೇಕಷ್ಟೆ. ಅಸಲಿ ನೋಟಿನ ಗುಣಲಕ್ಷಣಗಳ ಕುರಿತು ಪ್ರಾಥ ಮಿಕ ಮಾಹಿತಿ ಹೊಂದಿದ್ದರೂ, ಯಾವುದೂ ನಕಲಿ, ಅಸಲಿ ಅನ್ನುವುದು ಗ್ರಾಹಕರು ಊಹಿಸಿ ಕೊಳ್ಳುವುದು ಸುಲಭವಲ್ಲ. ಹಾಗಾಗಿ ಅಲ್ಲಲ್ಲಿ ಕಳ್ಳನೋಟು ನುಸುಳಿ ದರೆ, ಸುಲಭವಾಗಿ ಚಲಾವಣೆ ಯಾಗುತ್ತದೆ. ನೋಟು ಅಸಲಿ ಅಲ್ಲ ಎಂದು ಖಾತರಿ ಆದರೂ, ತನ್ನ ಕೈಗೆ ಸೇರಿದ ನಕಲಿ ನೋಟಿನ ಮೂಲ ಹುಡುಕುವುದು ಕಷ್ಟ. ಇದು ಹೊಸತಲ್ಲ
ನಕಲಿ ನೋಟು ಗ್ರಾಹಕರಿಗೆ ಕೈ ಸೇರಿರುವುದು ಇದೇ ಮೊದಲಲ್ಲ. ನೋಟು ಎಲ್ಲಿಂದ ಬಂತು ಅನ್ನುವ ಬಗ್ಗೆ ಮಾಹಿತಿ ಸಿಗುವುದಿಲ್ಲ. ಗ್ರಾಹಕ ಅದನ್ನು ಕಸದ ಬುಟ್ಟಿಗೆ ಎಸೆದು ಸುಮ್ಮನಾಗಬೇಕಷ್ಟೆ. ಪೊಲೀಸ್ ದೂರು ಕೊಟ್ಟರೂ ಲಾಭ ಇಲ್ಲ. ಕಾರಣ ನೋಟು ಮಾರುಕಟ್ಟೆಗೆ ಎಲ್ಲಿಂದ ಬಂತೆಂಬ ಕುರಿತು ಪತ್ತೆ ಹಚ್ಚು ವುದು ಸುಲಭ ಅಲ್ಲ. ನೂರಾರು ಕಡೆ ವ್ಯವಹಾರ ಮಾಡುವ ಮಂದಿಗೆ ಈ ಒಂದು ನೋಟು ಎಲ್ಲಿ ಸಿಕ್ಕಿತ್ತು ಅನ್ನುವುದನ್ನು ನೆನೆಪಿಡಲು ಸಾಧ್ಯವಿಲ್ಲ. ನಕಲಿ ನೋಟು ಮುದ್ರಣ ಜಾಲ ಪತ್ತೆಯೇ ಪರಿಹಾರ ಅನುತ್ತಾರೆ ಜನ. – ಕಿರಣ್ ಪ್ರಸಾದ್ ಕುಂಡಡ್ಕ