Advertisement

ನಾವ್ಯಾರನ್ನೂ ಟಾರ್ಗೆಟ್‌ ಮಾಡಿಲ್ಲ: ಡಿಕೆ ಸುರೇಶ್‌

02:17 PM Jan 30, 2022 | Team Udayavani |

ರಾಮನಗರ: ನಾವ್ಯಾರನ್ನು ಟಾರ್ಗೆಟ್‌ ಮಾಡ್ತಿಲ್ಲ.ಯಾರ ಬಗ್ಗೆಯೂ ಮಾತನಾಡುತ್ತಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ. ಪಕ್ಷದ ವಿಚಾರ ಬಂದಾಗ ಪಕ್ಷ ಸಂಘಟನೆ ನಮ್ಮ ಗುರಿ. ಜನಪ್ರತಿನಿಧಿಯಾಗಿ ಜಿಲ್ಲೆಯಅಭಿವೃದ್ಧಿ ಮಾಡುವ ಗುರಿ ಇದೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು.

Advertisement

ತಾಲೂಕಿನ ಬಸವನಪುರದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮನ್ನು ಟಾರ್ಗೆಟ್‌ ಮಾಡ್ತಿದ್ದಾರೆ ಎಂದು ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗಹೀಗೆ ಪ್ರತಿಕ್ರಿಯಿಸಿದರು. ರಾಮನಗರದಿಂದ ಓಡಿಸೋಕೆ ಪ್ರಯತ್ನ ಮಾಡ್ತಿದ್ದಾರೆ. ಇನ್ನು ಹತ್ತು ಜನ್ಮ ತಾಳಿ ಬಂದರು ರಾಮನಗರದಿಂದ ಓಡಿಸೋಕೆ ಆಗಲ್ಲ ಎಂದು ಎಚ್‌. ಡಿ.ಕುಮಾರಸ್ವಾಮಿ ಪ್ರತಿ ಸವಾಲು ಹಾಕಿರುವ ಬಗ್ಗೆಗಮನ ಸೆಳೆದಾಗ, ನಾನೇಕೆ ಅವರನ್ನು ಓಡಿಸಲಿ. ಇದೊಳ್ಳೆ ಚೆನ್ನಾಗಾಯ್ತಲ್ಲ. ನಾನೇನು ಅವರ ಬಗ್ಗೆ ಮಾತನಾಡುತ್ತಲೇ ಇಲ್ಲ. ಅವರು ದೊಡ್ಡವರು. ಯಾರನ್ನು ಟಾರ್ಗೆಟ್‌ ಮಾಡೋದಾಗಲಿ, ಯಾರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರು ದೊಡ್ಡವರು ಮಾತನಾಡಲಿ ಎಂದರು.

ಮೇಕೆದಾಟು ಪಾದಯಾತ್ರೆ ರಾಮನಗರದ ಮೂಲಕ ಹಾದು ಹೋಗುವ ವಿಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಟಾರ್ಗೆಟ್‌ ಮಾಡಲಾಗತ್ತಿದೆ ಎಂದು ದೂರಿರುವ ಬಗ್ಗೆ ಮಾತನಾಡಿದ ಡಿ.ಕೆ.ಸುರೇಶ್‌,ಅವರ ಅನಿಸಿಕೆ ಹಾಗಿದ್ದರೆ ನಾನೇನು ಮಾಡಲಿಕ್ಕೆ ಆಗಲ್ಲ. ಅವರ ಅನಿಸಿಕೆಗಳನ್ನು ನಾನು ಬದಲಾವಣೆ ಮಾಡೋಕೆ ಆಗಲ್ಲ. ನಮ್ಮ ಗುರಿ ಮೇಕೆದಾಟು ಯೋಜನೆ ಆಗಬೇಕು. ಆ ಮೂಲಕ ರಾಮನಗರ ಜಿಲ್ಲೆ, ರಾಜ್ಯಕ್ಕೆ ಒಳ್ಳೆಯದಾಗಬೇಕು. ಬೇರೆಯವರ ಗುರಿ ನನಗೆ ಗೊತ್ತಿಲ್ಲ ಎಂದರು.

ಕೊರೊನಾ ನಿಯಮ ಬದಲಾವಣೆ ಬಳಿಕ ಪಾದಯಾತ್ರೆ: ಕೋವಿಡ್‌ ಕಡಿಮೆಯಾದ ನಂತರ ಮೇಕೆದಾಟು ಪಾದಯಾತ್ರೆ ಪುನಃ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಕೋವಿಡ್‌ ಕಡಿಮೆಯಾಗ್ತಿದೆ ಅಂತ ಸರ್ಕಾರ ಹೇಳ್ತಿದೆ. ಜ.30ರವರೆಗೆ ಕೋವಿಡ್‌ ನಿಯಮಜಾರಿಯಲ್ಲಿದೆ. ತದ ನಂತರ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಕಾದು ನೋಡ್ತೀವಿ. ನಿಯಮಗಳುಬದಲಾದ ನಂತರ ಶೀಘ್ರದಲ್ಲೇ ಎಲ್ಲರು ಕುಳಿತು ಚರ್ಚಿಸಿ ಪಾದಯಾತ್ರೆ ಪ್ರಾರಂಭ ಮಾಡ್ತೀವಿ ಎಂದರು.

ಹೋಗೋರು, ಬರೋರು ಇರ್ತಾರೆ: ಮಂಡ್ಯ ಜಿಲ್ಲೆಯಲ್ಲಿ ಕೆಲವು ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಸೇರುವ ಬಗ್ಗೆ ಮಾತು ಕೇಳಿ ಬರುತ್ತಿದೆ. ಕೆಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂಬ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಯಾರು ಏನು ಅಂತಗೊತ್ತಿಲ್ಲ. ರಾಜಕೀಯ ಪಕ್ಷ ಅಂದ ಮೇಲೆ ಬರುವವರು, ಹೋಗುವವರು ಇರ್ತಾರೆ. ಪಕ್ಷದ ತತ್ವ ಸಿದ್ಧಾಂತ ನಂಬಿ,ನಾಯಕರ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಇಟ್ಟು,ಷರತ್ತುಗಳಿಲ್ಲದೆ ಪಕ್ಷಕ್ಕೆ ಬರೋರಿಗೆ ಸ್ವಾಗತ ಎಂದರು.ವಲಸಿಗ ಸಚಿವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವವಿಚಾರದಲ್ಲಿ ತಮಗೆ ಆ ಬಗ್ಗೆ ಮಾಹಿತಿ ಇಲ್ಲ. ಸ್ಥಾನಮಾನಗಳನ್ನು ಕೊಡುವ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು. ಸಿ.ಎಂ.ಇಬ್ರಾಹಿಂರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ವಿಚಾರದಲ್ಲಿ ಡಿಕೆಶಿ, ಸಿದ್ದು ಚರ್ಚಿಸಲಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next