Advertisement

DK Suresh ನನ್ನ ಸೋಲಿಗೆ ಜಾತಿ ಪ್ರಬಲವಾಗಿ ಕೆಲಸ ಮಾಡಿದ್ದು ಕಾರಣ

11:42 PM Jun 10, 2024 | Team Udayavani |

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ನನಗೆ ಯಾರೂ ಹಿತಶತ್ರುಗಳಿಲ್ಲ. ನನಗೆ ನಾನೇ ಶತ್ರುವಾಗಿದ್ದೇನೆ. ಇಲ್ಲಿ ಗ್ಯಾರಂಟಿಗಿಂತ ಪ್ರಬಲವಾಗಿರುವುದು ಜಾತಿ, ಧರ್ಮ ದಂಥ ಭಾವನಾತ್ಮಕ ವಿಚಾರಗಳು. ಚುನಾವಣೆಯಲ್ಲಿ ಜಾತಿ ಇಷ್ಟೊಂದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ತಮ್ಮ ಸೋಲಿನ ಬಗ್ಗೆ ಹೇಳಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಅವರು, 10 ವರ್ಷ 8 ತಿಂಗಳು ನಾನು ಕ್ಷೇತ್ರದಲ್ಲಿ ಮಾಡಿದ ಕೆಲಸಗಳನ್ನು ಮುಂದಿಟ್ಟು ಮತಯಾಚಿಸಿದೆ. ನಾನು ಕೆಲಸ ಮಾಡಿದ್ದೇನೆ, ನನಗೆ ಕೂಲಿ ಕೊಡಿ ಎಂದು ಕೇಳಿಕೊಂಡೆ. ಆದರೆ ಕ್ಷೇತ್ರದ ಜನರು ನನಗೆ ವಿರಾಮ ನೀಡಿದ್ದಾರೆ. ಜನತೆಯ ಈ ತೀರ್ಪನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎಂದರು.

ಗ್ಯಾರಂಟಿ ಅಬಾಧಿತ
ರಾಜ್ಯ ಸರಕಾರ ಎಲ್ಲ ಗ್ಯಾರಂಟಿಗಳನ್ನು ಮುಂದುವರಿ ಸುತ್ತದೆ. ಈ ಬಗ್ಗೆ ಈಗ ಚರ್ಚೆ ಮಾಡುವುದು ಅನಾವಶ್ಯಕ. ಗ್ಯಾರಂಟಿಗಳು ಅಬಾಧಿತ ಎಂದು ಸುರೇಶ್‌ ಹೇಳಿದರು.

ಚನ್ನಪಟ್ಟಣದಿಂದ ಸ್ಪರ್ಧಿಸುವುದಿಲ್ಲ
ನಾನು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಈಗ ಚರ್ಚೆ ಬೇಡ, ಕಾದು ನೋಡಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next