Advertisement

MUDA Case: ಸಿಎಂ ಯಾವ ತಪ್ಪು ಮಾಡಿಲ್ಲ… ಹೆದರಿಕೆ ಅನ್ನೋದು ಅವರ ರಕ್ತದಲ್ಲೇ ಇಲ್ಲ: ಡಿಕೆಶಿ

01:19 PM Aug 20, 2024 | |

ಕಲಬುರಗಿ: ಸಿದ್ದರಾಮಯ್ಯ ಅವರ ರಕ್ತದಲ್ಲೇ ಹೆದರಿಕೆ ಅನ್ನೋದಿಲ್ಲ, 40 ವರ್ಷ ಇಂತಹ ಎಷ್ಟೋ ರಾಜಕಾರಣ ನೋಡಿದ್ದಾರೆ. ಹೆದರಿಕೆ ಅನ್ನೋದು ಅವರ ರಕ್ತದಲ್ಲೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದರಿಕೆ ಅನ್ನೋದು ಸಿದ್ದರಾಮಯ್ಯ ಅವರ ರಕ್ತದಲ್ಲೇ ಇಲ್ಲ. ಸತ್ಯಕ್ಕೆ ಯಾವತ್ತಿಗೂ ಜಯ ಸಿಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ದಲಿತ ರಾಜ್ಯಪಾಲ ಎನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಗೆಹ್ಲೋಟ್ ಅವರನ್ನ ಆ ಹುದ್ದೆಯಲ್ಲಿ ಕೂರಿಸಿದ್ದು ಸಂವಿಧಾನ, ಜಾತಿಯಲ್ಲ. ಬಿಜೆಪಿಗರದ್ದು ಅನಗತ್ಯ ವಿವಾದ. ಸಿಎಂ ಸಿದ್ದರಾಮಯ್ಯರಿಗೆ ಖರ್ಗೆಯವರಿಂದ ಹಿಡಿದು, ಸಚಿವರು, ಶಾಸಕರು ಎಲ್ಲರ ಬೆಂಬಲ ಇದೆ. ರಾಜ್ಯದಲ್ಲಿ ಹತ್ತು ವರ್ಷ ನಮ್ಮದೆ ಸರ್ಕಾರ ಇರುತ್ತೆ ಅದರಲ್ಲಿ ಅನುಮಾನ ಬೇಡ ಎಂದು ಹೇಳಿದರು.

ಇನ್ನು ಸಿ.ಟಿ.ರವಿ ವಿರುದ್ಧ ಗುಡುಗಿದ ಅವರು ಕಲಬುರಗಿಯಲ್ಲಿ ಹೊಸ ಆಸ್ಪತ್ರೆ ಆರಂಭವಾಗಿದೆ ಸಿಟಿ ರವಿ ಅವರನ್ನು ಅಲ್ಲಿಗೆ ಸೇರಿಸಲಿ ಅವರ ವಿವೇಚನೆ ಕಳೇದು ಹೋಗಿದೆ. ದೇಶದ ಅನೇಕ ಕಡೆ ರಾಜ್ಯಪಾಲರ ಹಸ್ತಕ್ಷೇಪ ನಡೆಯುತ್ತಿದೆ. ಮಾಧ್ಯಮದವರೇ ದೇಶದ ಯಾವ ರಾಜ್ಯದಲ್ಲಿ ಏನು ನಡೆಯುತ್ತಿದೆಯೋ ಅದೆಲ್ಲವನ್ನೂ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಸಿಎಂ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಹೋಗಬೇಕಲ್ಲಾ, ಹೈಕಮಾಂಡ್ ಗೆ ಎಲ್ಲಾ ಮಾಹಿತಿ ನೀಡಬೇಕು. ಅದಕ್ಕಾಗಿ ದಿಢೀರನೆ ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಿದರು.

Advertisement

ಇದನ್ನೂ ಓದಿ: Vijayapura: ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಚಪ್ಪಲಿ ಹಾರ… ಬಿಗುವಿನ ವಾತಾವರಣ

Advertisement

Udayavani is now on Telegram. Click here to join our channel and stay updated with the latest news.

Next