ಕನಕಪುರ: ಹಲವು ದಿನಗಳ ನಂತರ ಇದೇಮೊದಲ ಬಾರಿಗೆ ಕ್ಷೇತ್ರಕ್ಕೆ ಭೇ ಟಿ ನೀಡಿದ ಶಾಸಕಡಿ.ಕೆ. ಶಿವಕುಮಾರ್ ಪಿಪಿಇ ಕಿಟ್ ಧರಿಸಿಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿಸೋಂಕಿತರ ಮೂಲಭೂತ ಸೌಲಭ್ಯಗಳ ಬಗ್ಗೆಪರಿಶೀಲನೆ ನಡೆಸಿದರು.
ತಾಲೂಕಿನಲ್ಲಿ ಕೊರೊನಾಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿನೀಡಿದ್ದ ಸಚಿವ ಡಿ.ಕೆ.ಶಿವಕುಮಾರ್ ನಗರದಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕೋವಿಡ್ ಕೇರ್‌ಸೆಂಟರ್‌ಗೆ ಪಿಪಿಇ ಕಿಟ್ ಧರಿಸಿ ಕೊರೊನಾಸೋಂಕಿತರ ಯೋಗಕ್ಷೇಮ ವಿಚಾರಿಸಿ ಮೂಲಸೌಲಭ್ಯ ಆಕ್ಸಿಜನ್ ಪೂರೈಕೆ ಮತ್ತು ಚಿಕಿತ್ಸೆ ಬಗ್ಗೆಪರಿಶೀಲನೆ ನಡೆಸಿದರು.
ಬಳಿಕ ಲಸಿಕಾಕೊಠಡಿಯಲ್ಲಿ ತಹಶೀಲ್ದಾರ್ ಪೊಲೀಸ್ ಇಲಾಖೆಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಹಾಗೂ ತಾಲೂಕುವೈದ್ಯಾಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿ.ಪಿಡಬ್ಲೂಡಿ ಜಿಪಂ ಸೇರಿದಂತೆ ವಿವಿಧಇಲಾಖೆಯ ಅಧಿಕಾರಿಗಳಿಗೆ ಕೊರೊನಾನಿಯಂತ್ರಣದ ಜವಾಬ್ದಾರಿಗಳನ್ನು ಕೊಟ್ಟುಸೋಂಕು ಹರಡದಂತೆ ಎಚ್ಚರಿಕೆವಹಿಸಿ ಪೊಲೀಸ್‌ಇಲಾಖೆ ತಮ್ಮ ಕೆಲಸವನ್ನು ಮಾಡುತ್ತಿದೆಸಾರ್ವಜನಿಕರಿಗೆ ಅನಾವಶ್ಯಕವಾಗಿ ತೊಂದರೆಕೊಡುವುದು ಬೇಡ ಮುಂದಿನ ಶನಿವಾರ ಮತ್ತುಭಾನುವಾರ ಕೆಡಿಪಿ ಸಭೆಯನ್ನು ಕರೆಯುವಂತೆತಹಶೀಲ್ದಾರ್ ವಿಶ್ವನಾಥ್‌ಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿ,ಕೋವಿಡ್ ನಿಯಂತ್ರಣ ಮತ್ತು ಅಗತ್ಯ ಸೌಲಭ್ಯಗಳಪೂರೈಕೆಯಲ್ಲಿ ಸರ್ಕಾರ ಸಂಪೂರ್ಣವಿಫಲವಾಗಿದೆ. ಆದರೆ, ತಾಲೂಕು ಮಟ್ಟದಲ್ಲಿಇರುವ ಸೌಲಭ್ಯವನ್ನು ಬಳಸಿಕೊಂಡು ಆರೋಗ್ಯಇಲಾಖೆಯ ಅಧಿಕಾರಿಗಳು ಶಕ್ತಿಮೀರಿ ಕೆಲಸಮಾಡುತ್ತಿದ್ದಾರೆ ನಾನು ಯಾರನ್ನು ದೂಷಣೆಮಾಡಲು ಹೋಗುವುದಿಲ್ಲ ತಾಲೂಕಿಗೆ ಈ ಆಸ್ಪತ್ರೆಸಾಲದು ಹಾಗಾಗಿ ತಾಲೂಕಿನಲ್ಲಿ ಒಂದುಸುಸಜ್ಜಿತವಾದ ಮೆಡಿಕಲ್ ಕಾಲೇಜು ಮತ್ತುಆಸ್ಪತ್ರೆ ತರಲು ಹೋರಾಟ ಮಾಡುತ್ತಿದ್ದೇನೆ ಆದರೆಇನ್ನೂ ಮುಗಿದಿಲ್ಲ ಮುಂದೆಯೂ ಹೋರಾಟಮಾಡುತ್ತೇನೆ ಪ್ರಸ್ತುತ ತಾಲೂಕಿನಲ್ಲಿ 231ಕೊರೊನಾ ಸೊಂಕಿತರಿದ್ದಾರೆ ಎರಡನೇಅಲೆಯಲ್ಲಿ ಈಗಾಗಲೇ ನಾಲ್ಕು ಜನಮೃತಪಟ್ಟಿದ್ದಾರೆ.
ಕೆಲವು ಕೊರೊನಾಸೋಂಕಿತರನ್ನು ರಾಮನಗರ ಮತ್ತುದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಸೊಂಕಿತರ ಬಳಿ ಮಾತನಾಡಿದ್ದೇನೆವೈದ್ಯಾಧಿಕಾರಿಗಳು ಮುತುವರ್ಜಿಯಿಂದ ಚಿಕಿತ್ಸೆನೀಡುತ್ತಿದ್ದಾರೆ ಎಂದಿದ್ದಾರೆ.ಉಳಿದಂತೆ ಆಕ್ಸಿಜನ್ ಸ್ಪೆಷಲಿಟೀಸ್ ಸೇರಿದಂತೆಕೆಲ ಸೌಲಭ್ಯಗಳ ಅಗತ್ಯತೆಯಿದೆ ಇರುವಂತಹಸಿಬ್ಬಂದಿಗಳು ಶಕ್ತಿಮೀರಿ ಅವರ ಕೆಲಸಮಾಡುತ್ತಿದ್ದಾರೆ ಗರ್ಭಿಣಿ ಬಾಣಂತಿಯರುಇರುವ ವಾರ್ಡ್ ಪಕ್ಕದಲ್ಲಿ ಕೊರೊನಾ ಸೋಂಕಿತರನ್ನು ಇರಿಸಲಾಗಿದೆ ಬಹಳ ಅಪಾಯಹಾಗಾಗಿ ಆದ್ಯತೆ ಮೇರೆಗೆ ಗರ್ಭಿಣಿ ಮತ್ತು ಬಾಣಂತಿಯರನ್ನು ರಾಮನಗರ ಮತ್ತು ಸಾಗರ ಆಸ್ಪತ್ರೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇನೆಎಂದರು.