ಬೆಂಗಳೂರು: ಮತದಾರರ ಮಾಹಿತಿಕಳವು, 40 ಪರ್ಸೆಂಟ್ ಕಮಿ ಷನ್, ನಿರಂತರ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಮುಚ್ಚಿ ಹಾಕಲು ಬಿಜೆಪಿಯು ಮಂಗಳೂರು ಕುಕ್ಕರ್‌ಬ್ಲಾಸ್ಟ್ ಪ್ರಕರಣವನ್ನು ಬಳಸಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದು, ವಿವಾದಕ್ಕೀಡಾಗಿದೆ.
ಡಿ.ಕೆ. ಶಿವಕುಮಾರ್ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು, ಅವರು ಜನತೆಯ ಕ್ಷಮೆ ಕೋರ ಬೇಕು. ಉಗ್ರರ ಪರ ಅನು ಕಂಪದ ಇಂಥ ಹೇಳಿಕೆ ಪೊಲೀಸರ ಮನ ಸ್ಥೈರ್ಯ ಕುಗ್ಗಿಸುವಂಥದ್ದು. ಈ ಮೂಲಕ ರಾಷ್ಟ್ರೀಯ ಭದ್ರ ತೆಗೆ ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಟೀಕಿಸಿದ್ದಾರೆ.
ನಾನು ಪ್ರಕರಣವನ್ನು ಸಮರ್ಥಿಸಿಲ್ಲ ಹಾಗೂ ಕ್ಷಮೆ ಕೇಳುವಂಥದ್ದೇನೂ ಹೇಳಿಲ್ಲ ಎಂದಿರುವ ಡಿಕೆಶಿ, ಬಿಜೆಪಿ ಪ್ರತಿಯೊಂದರಲ್ಲೂ ರಾಜಕೀಯ ಲಾಭ ಪಡೆಯಲು ಹೇಗೆ ಹವಣಿಸುತ್ತಿದೆ ಎಂಬುದನ್ನು ಹೇಳಿರುವೆ ಎಂದಿದ್ದಾರೆ. ಈ ರೀತಿ ಸುತ್ತಿ ಬಳಸಿ ಹೇಳುವ ಬದಲು ಉಗ್ರ ಕೃತ್ಯ ಎಸಗುವವರನ್ನೆಲ್ಲ “ದೇ ಆರ್ ಮೈ ಬ್ರದರ್ಸ್’ ಎನ್ನಿ ಎಂದು ಸಚಿವ ಸುನಿಲ್‌ಕುಮಾರ್ ಟೀಕಿಸಿದ್ದಾರೆ.
ಡಿಕೆಶಿ ಹೇಳಿದ್ದೇನು?:
ಕುಕ್ಕರ್ ಬ್ಲಾಸ್ಟ್ ಪುಲ್ವಾಮಾ ದಾಳಿಯಾ? ಮತದಾರರ ಮಾಹಿತಿ ಕಳವು ಅಕ್ರಮ ವಿಷಯದಿಂದ ಜನರ ಗಮನ ಬೇರೆಡೆ ಸೆಳೆ ಯಲು ಬಿಜೆಪಿ ಸರಕಾರ ಇದನ್ನು ಬಳಸಿತು. ತನಿಖೆಗೂ ಮುನ್ನವೇ ಅಧಿಕಾರಿಗಳು ಇದು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ತನಿಖೆ ಏನಾಯಿತು? ಎಂದು ಡಿಕೆಶಿ ಪ್ರಶ್ನಿಸಿದರು.