Advertisement

ಪಕ್ಷದ ಪರವಾಗಿದ್ದವರ ಜತೆ ಹೈಕಮಾಂಡ್ ನಿಂತಿದೆ: CM ಪದವಿ ಬಗ್ಗೆ DK Shivakumar ಮಾತು

05:57 PM Apr 06, 2023 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳೂ ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಬಗ್ಗೆ ಕಾಂಗ್ರೆಸ್‌ ನಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ವರದಿಯನ್ನು ತಳ್ಳಿಹಾಕಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ನಾಯಕತ್ವವು ನಿಷ್ಠೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.

Advertisement

ಎನ್‌ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಮುಖ್ಯಮಂತ್ರಿಯಾಗುವ ಅವರ ಆಕಾಂಕ್ಷೆಗಳ ಬಗ್ಗೆ ಕೇಳಿದಾಗ ಉತ್ತರಿಸಿ, “ನಾನು ಪಕ್ಷದ ನಿಷ್ಠಾವಂತ ವ್ಯಕ್ತಿ, ಪಕ್ಷಕ್ಕೆ ಎಂದಿಗೂ ದ್ರೋಹ ಮಾಡಿಲ್ಲ. ಕರ್ನಾಟಕವನ್ನು ನಾವು ಗೆಲ್ಲುತ್ತೇವೆ ನಂತರ ನಿರ್ಧಾರವನ್ನು ಹೈಕಮಾಂಡ್‌ ಗೆ ಬಿಡುತ್ತೇವೆ. ಹೈಕಮಾಂಡ್ ಯಾವಾಗಲೂ ಪಕ್ಷದ ಪರವಾಗಿ ನಿಂತಿರುವ ಜನರ ಪರವಾಗಿ ನಿಂತಿದೆ. ನಾವು ಅವರನ್ನು ನಂಬುತ್ತೇವೆ. ನನಗೆ ನಮ್ಮ ನಾಯಕತ್ವದ ಮೇಲೆ ವಿಶ್ವಾಸವಿದೆ” ಎಂದರು.

ಇದನ್ನೂ ಓದಿ:ಸಿಯೋನಿಯಿಂದ ವಾಂಖೆಡೆವರೆಗೆ; ಯಾರಿದು ಮುಂಬೈ ಇಂಡಿಯನ್ಸ್ ಹೊಸ ಭರವಸೆ ಅರ್ಶದ್ ಖಾನ್?

ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗಿನ ಆಂತರಿಕ ಕಲಹ ಮತ್ತು ಪೈಪೋಟಿಯ ವರದಿಗಳನ್ನು ತಳ್ಳಿಹಾಕಿದ ಅವರು, “ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ, ಬಿಜೆಪಿಯವರು ಕಿಡಿಗೇಡಿತನ ಮಾಡುತ್ತಿದ್ದು, ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಮಾಧ್ಯಮದ ಒಂದು ವಿಭಾಗವು ಸುಳ್ಳು ವದಂತಿಗಳನ್ನು ಹರಡುತ್ತಿದೆ” ಎಂದು ಅವರು ಆರೋಪಿಸಿದರು. “ನಾವೆಲ್ಲರೂ ಒಟ್ಟಾಗಿದ್ದೇವೆ, ಬಿಜೆಪಿಯನ್ನು ಸೋಲಿಸಿ ಕರ್ನಾಟಕದ ಘನತೆಯನ್ನು ಮರುಸ್ಥಾಪಿಸುವುದು ನಮ್ಮ ಗುರಿಯಾಗಿದೆ” ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು. ಯಾವುದೇ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದ ಅವರು, ಜನಾದೇಶವಿಲ್ಲದೆ ಬಿಜೆಪಿ ಜತೆ ಕೈಜೋಡಿಸಿ ಜೆಡಿಎಸ್ ಎರಡು ಬಾರಿ ಜನರಿಗೆ ದ್ರೋಹ ಬಗೆದಿದೆ. ಕುಮಾರಸ್ವಾಮಿ ಅವರು ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು. ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next