Advertisement

ಖಾಲಿ ಪಾತ್ರೆಗಳು ಬಹಳ ಶಬ್ದ ಮಾಡುತ್ತವೆ : ಯೋಗೀಶ್ವರ್-ಯತ್ನಾಳ್ ಗೆ ಡಿಕೆಶಿ ಟಾಂಗ್

05:14 PM Jul 06, 2021 | Team Udayavani |

 ಉಡುಪಿ : ಡಿಸಿಎಂ ಸವದಿ ಪುತ್ರನ ಕಾರು ಅಪಘಾತದ ವಿಚಾರ ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಬೇಕು. ನಾನು ಪ್ರವಾಸದಲ್ಲಿ ಇರುವುದರಿಂದ ಎಲ್ಲ ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದು ಉಡುಪಿಯಲ್ಲಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇದೇ ವೇಳೆ ಮುರುಗೇಶ್ ನಿರಾಣಿಗೆ ಹೈಕಮಾಂಡ್ ಬುಲಾವ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು,  ಯಾರನ್ನು ಬೇಕಾದರೂ ಬಿಜೆಪಿ ಸಿಎಂ ಮಾಡಲಿ. ಇದನ್ನು ಪ್ರಶ್ನಿಸುವುದು ಕಾಂಗ್ರೆಸ್ ಕೆಲಸ ಅಲ್ಲ. ಕಾಂಗ್ರೆಸ್ ಬಳಿ ಸರಕಾರ ಮಾಡಲು ನಂಬರ್ ಇಲ್ಲ ಎಂದರು.

ಯಡಿಯೂರಪ್ಪನವರ ಬಗ್ಗೆ ಖಾಲಿ ಮಾತು ಯಾಕೆ ಮಾತನಾಡಲಿ. ಅವರ ಪಾರ್ಟಿಯಲ್ಲಿ ಏನೇನೋ ಜೋರಾಗಿ ಶಬ್ದ ಮಾಡುತ್ತಿರುತ್ತವೆ. ಎಮ್ಟಿ ವೆಸಲ್ಸ್ ಮೇಕ್ ಮೋರ್ ಸೌಂಡ್. ಖಾಲಿ ಪಾತ್ರೆಗಳು ಬಹಳ ಶಬ್ದ ಮಾಡುತ್ತವೆ. ಸಚಿವ ಯೋಗೀಶ್ವರ್, ಶಾಸಕ ಯತ್ನಾಳ್ ಗೆ ಖಾಲಿ ಪಾತ್ರೆಯೆಂದ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next