ಮಂಡ್ಯ: ಯಡ್ಡಿಯೂರಪ್ಪ ತಮ್ಮ ಕಣ್ಣೀರಿನ ಹಿಂದಿನ ವಿಚಾರದ ಬಗ್ಗೆ ಏನು ಅನ್ನುವುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮದ್ದೂರಿನ ಭಾರತೀನಗರದಲ್ಲಿ ನಡೆಯುತ್ತಿರುವ ಹಿರಿಯ ನಾಯಕ ಜಿ.ಮಾದೇಗೌಡರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡ್ಡಿಯೂರಪ್ಪ ರಾಜೀನಾಮೆ ಕೊಟ್ಟ ದಿನ ನಾನು ಕೇಳಿದ್ದು, ಅವರ ಕಣ್ಣೀರಿನ ಹಿನ್ನೆಲೆ ಹೇಳಬೇಕು ಅಂಥ ಕೇಳಿದ್ದೆ. ಆದರೆ ಇದುವರೆಗೂ ಬಹಿರಂಗಪಡಿಸಿಲ್ಲ ಎಂದರು.
ವರಿಷ್ಠರು ಮಂತ್ರಿಮಂಡಲ ಮಾಡಲು ಬಿಡಲಿಲ್ಲ. ನನಗೆ ಆಡಳಿತ ಮಾಡಲು ಬಿಡಲಿಲ್ಲ. ಅಂತ ಪಾಪ ಯಡ್ಡಿಯೂರಪ್ಪ ಹೇಳಿದ್ದರು. ಸ್ವಾಮಿಜಿಗಳು ನೋವನ್ನು ವ್ಯಕ್ತಪಡಿಸಿದ್ದನ್ನು ನಾವು ನೋಡಿದ್ದೇನೆ. ಅದು ಅವರ ಸ್ವಾತಂತ್ರ‍್ಯ ಅವರ ಅಭಿಪ್ರಾಯಕ್ಕೆ ನಾವು ಅಡ್ಡಿ ಬರಲ್ಲ. ಆದರೆ ಯಡ್ಡಿಯೂರಪ್ಪ ಅವರ ನೋವು ಮತ್ತು ಅವರ ಕಣ್ಣೀರಿನ ಹಿನ್ನೆಲೆ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕು ಅಂತ ಒತ್ತಾಯ ಮಾಡುತ್ತೇನೆ ಎಂದರು.
ನೂತನ ಸಿಎಂ ಬಸವರಾಜು ಬೊಮ್ಮಾಯಿ ಅವರಿಗೆ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅವರು ಈ ರಾಜ್ಯದ ಗೌರವವನ್ನು ಕಾಪಾಡುವ ಮೂಲಕ ಉತ್ತಮವಾದ ಆಡಳಿತ ಕೊಡಲಿ ಎಂದು ಶುಭ ಕೋರಿದರು.
ಇಷ್ಟು ದಿನ ಕೇಂದ್ರದಿAದ ಬಹಳ ವಂಚಿತರಾಗಿದ್ದೇವೆ. ಯಾರು ಕೂಡ ಧ್ವನಿ ಎತ್ತಲಿಲ್ಲ. ಯಾವ ಸಂಸತ್ ಸದಸ್ಯರು ಮಾತನಾಡಿಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಾದ ಅನೇಕ ಯೋಜನೆ ಬಂದಿಲ್ಲ. ಮೇಕೇದಾಟು ಅಣೆಕಟ್ಟು ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಬಸವರಾಜು ಬೊಮ್ಮಯಿ ಅವರು ಸಂಸತ್ ಸದಸ್ಯರನ್ನು ಮುಂದೆ ನಿಲ್ಲಿಸಿ ರಾಜ್ಯದ ಹೀತ ಕಾಪಾಡಬೇಕು. ರಾಜದಲ್ಲಿದ್ದಂತಹ ಕಳಂಕವನ್ನು ನಿವಾರಣೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್‌ನಿAದ ಬಿಟ್ಟು ಹೋದ ಶಾಸಕರಿಗೆ ಸಚಿವ ಸ್ಥಾನ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ಸರ್ಕಾರದಲ್ಲಿ ಯರ‍್ಯಾರೋ ಏನೇನೋ ಹೇಳಿಕೆ ಕೊಡುತ್ತಿದ್ದರು. ಪಕ್ಷದಲ್ಲಿ ಶಿಸ್ತು ಕಾಣುತ್ತಿರಲಿಲ್ಲ. ಈಗ ನೋಡೋಣ ಏನಾಗುತ್ತೆ ಅಂತ ಎಂದರು.