Advertisement

ಉಪಚುನಾವಣೆ ಫಲಿತಾಂಶದ ಬಗ್ಗೆ ಅನುಮಾನ! ಕಾಂಗ್ರೆಸ್ ನಿಂದ ವಿಸ್ತೃತ ತನಿಖೆ :ಡಿಕೆಶಿ

11:38 AM Nov 12, 2020 | sudhir |

ಮಂಗಳೂರು : ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಫಲಿತಾಂಶದ ಬಗ್ಗೆ ನಮಗೆ ಅನುಮಾನ ಇದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅಸಮಾದಾನ ವ್ಯಕ್ತಪಡಿಸಿದ್ದಾರೆ.

Advertisement

ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಡಿಕೆಶಿ ಉಪಚುನಾವಣೆಯ ಫಲಿತಾಂಶದ ಬಗ್ಗೆ ನಮ್ಮ ಪಕ್ಷಕ್ಕೆ ಅನುಮಾನವಿದ್ದು, ಇವಿಎಂ ಮೆಷಿನ್ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಕಾಂಗ್ರೆಸ್ ವಿಸ್ತೃತ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

ಮತದಾರರು ಹೇಳುತ್ತಿದ್ದಾರೆ ನಾವು ಕಾಂಗ್ರೆಸ್ ಗೆ ಮತಚಲಾಯಿಸಿದ್ದೇವೆ ಎಂದು. ಹಾಗಾದರೆ ಈ ಮತಗಳು ಎಲ್ಲಿ ಹೋಯಿತು ಎಂಬಬಗ್ಗೆ ಚರ್ಚೆ ನಡೆಯುತ್ತಿದೆ. ಫಲಿತಾಂಶದ ಕುರಿತು ಸತ್ಯಾಂಶ ತಿಳಿಯಬೇಕಾಗಿದೆ ಎಂದು ಹೇಳಿದರು.

ಬುಧವಾರ ರಾತ್ರಿ ಕಣ್ಣೂರಿಗೆ ತೆರಳಿದ್ದ ಅವರು ಇಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಿ ನಗರದ ಖಾಸಗಿ ಹೊಟೇನಲ್ಲಿ ವಿಶ್ರಾಂತಿ ಪಡೆದರು.

ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಜವಾಹರಲಾಲ್ ವಿವಿ ಆವರಣದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ಅನಾವರಣ

Advertisement
Advertisement

Udayavani is now on Telegram. Click here to join our channel and stay updated with the latest news.

Next