Advertisement
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಆಗಮಿಸಿದ ಅವರು ಕಲ್ಲಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ಆಸ್ತಿ ಮಾರಬೇಡಿ: ಬೆಂಗಳೂರು-ಕನಕಪುರ ರಸ್ತೆ ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ. ಕ್ಷೇತ್ರದಲ್ಲಿ ಎಲ್ಲಾ ರೀತಿಯ ಬದಲಾವಣೆಯಾಗುತ್ತದೆ. ನೀವು ಯಾರೂ ನಿಮ್ಮ ಆಸ್ತಿಗಳನ್ನ ಮಾರಿಕೊಳ್ಳಬೇಡಿ. ಮುಂದೆ ಕ್ಷೇತ್ರದ ಜನರಿಗೆ ಉತ್ತಮ ಭವಿಷ್ಯವಿದೆ. ಮುಂದೆ ನಿಮ್ಮ ಆಸ್ತಿಗೆ ಒಳ್ಳೆಯ ಬೆಲೆ ಬರುತ್ತದೆ. ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆಗೆ ಹೆಚ್ಚು ಒತ್ತು ಸಿಗಲಿದೆ. ಕ್ಷೇತ್ರದ ಜನತೆಗೆ ಮುಂದೆ ಆರ್ಥಿಕ ಶಕ್ತಿ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ನನ್ನನ್ನು ಭೇಟಿ ಮಾಡಲು ಸಾಕಷ್ಟು ಜನ ಬರುತ್ತಿದ್ದೀರಿ. ಮುಂದೆ ರಾಮನಗರ ಮತ್ತು ಕನಕಪುರದಲ್ಲಿ ಕಚೇರಿ ತೆರೆಯುತ್ತೇನೆ. ವಾರದಲ್ಲಿ ಒಂದು ದಿನ ಜಿಲ್ಲೆಗೆ ಮೀಸಲಿಡುವ ಕೆಲಸ ಮಾಡುತ್ತೇನೆ. ಯಾರೂ ಬೆಂಗಳೂರಿಗೆ ಬಂದು ಕಾಯುವ ಪರಿಸ್ಥಿತಿ ತಂದುಕೊಳ್ಳಬೇಡಿ. ನನ್ನ ಗನ್ ಮ್ಯಾನ್ ಪಿಎ ಗಳು 50, 100ರೂ ದುಡ್ಡು ಕೊಟ್ಟರೆ ನಿಮ್ಮನ್ನು ಮುಂದಕ್ಕೆ ಕರೆಸುತ್ತಾರೆ, ಇಲ್ಲದಿದ್ದರೆ ನಿಮ್ಮನ್ನ ಹಿಂದೆ ಬಿಡುತ್ತಾರೆ. ಎಲ್ಲವೂ ನನಗೆ ಗೊತ್ತು ಎಂದರು.
ನಾವು ಗೆದ್ದಿದ್ದೇವೆಂದು ಇತರ ಪಕ್ಷಗಳ ಮೇಲೆ ದಬ್ಬಾಳಿಕೆ ಬೇಡ. ಜೆಡಿಎಸ್ ಹಾಗೂ ಬಿಜೆಪಿಯವರನ್ನು ಅಣಕಿಸುವುದು ಬೇಡ. ಎಲ್ಲರೂ ಶಾಂತಿಯಿಂದ ವರ್ತಿಸಬೇಕು. ಯಾರೂ ಜೂಜಾಟ ಸೇರಿ ಇತರ ವ್ಯಸನಕ್ಕೆ ಹೋಗಬೇಡಿ ಎಂದು ಕ್ಷೇತ್ರದ ಜನತೆಗೆ ಡಿಕೆ ಶಿವಕುಮಾರ್ ಕರೆ ನೀಡಿದರು.