ಬೆಂಗಳೂರು: ತಮ್ಮ ಬಯಕೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಇದ್ದ ಗಾಂಧಿಭವನ ರಸ್ತೆಯಲ್ಲಿರುವ ಕುಮಾರ ಕೃಪ ಪೂರ್ವದ ನಂ. 1 ಸರ್ಕಾರಿ ವಸತಿಗೃಹವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಿಟ್ಟಿಸಿಕೊಂಡಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ತಮ್ಮ ಅದೃಷ್ಟದ ಕುಮಾರ ಕೃಪ ಪೂರ್ವದ ನಂ. 1 ವಸತಿಗೃಹಕ್ಕೆ ಡಿ.ಕೆ.ಶಿವಕುಮಾರ್ ಬೇಡಿಕೆ ಇಟ್ಟಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟುಕೊಟ್ಟಿದ್ದಾರೆ. ಅಲ್ಲಿ ಇನ್ಮುಂದೆ ಉಪಮುಖ್ಯಮಂತ್ರಿ ವಾಸ ಮಾಡಲಿದ್ದಾರೆ.
ಉಳಿದಂತೆ ನೂತನ ಸಚಿವರಿಗೂ ವಸತಿಗೃಹಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿರುವ ಸರ್ಕಾರ, ಎಂ.ಬಿ. ಪಾಟೀಲ ಅವರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಸವಿದ್ದ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್‌ನ ನಂ.1 ಮತ್ತು ಕೆ.ಜೆ. ಜಾರ್ಜ್‌ಗೆ ನಂ. 2 ಮತ್ತು ಪ್ರಿಯಾಂಕ ಖರ್ಗೆ ಅವರಿಗೆ ನಂ. 4 ಸರ್ಕಾರಿ ವಸತಿಗೃಹಗಳು ಹಂಚಿಕೆಯಾಗಿವೆ. ಡಾ.ಜಿ.ಪರಮೇಶ್ವರ ಅವರಿಗೆ ಸದಾಶಿವನಗರದ 9ನೇ ಕ್ರಾಸ್‌ನಲ್ಲಿರುವ ನಂ. 94/ ಎ ವಸತಿಗೃಹ ಹಂಚಿಕೆಯಾಗಿದೆ.
ಇದನ್ನೂ ಓದಿ: ತಿಮಾವೇಶಿ ನೌಕೆ ಉದ್ಘಾಟಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್