Advertisement

ಎಬಿವಿಪಿಯವರಿಂದಲೇ ಗಲಾಟೆ: ಡಿಕೆಶಿ

09:49 PM Feb 12, 2022 | Team Udayavani |

ಬೆಳಗಾವಿ: ಹಿಜಾಬ್‌-ಕೇಸರಿ ಶಾಲು ವಿವಾದದಲ್ಲಿ ರಾಷ್ಟ್ರ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದು ಯಾರು? ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕುವ ಕಾಲ ಬರಲಿದೆ ಎಂದು ಯಾರೋ ಮಂತ್ರಿ ಹೇಳಿದ್ದರಲ್ಲ. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಬಿವಿಪಿಯಲ್ಲಿ ಇದ್ದವರು ಗಲಾಟೆ ಮಾಡಿದ್ದಾರೆ. ಎಬಿವಿಪಿ ಯಾರಿಗೆ ಸೇರಿದ್ದು, ಗಲಾಟೆ ಯಾರಿಂದ ಶುರುವಾಯಿತು ಎಂದು ಪ್ರಶ್ನಿಸಿದ ಡಿಕೆಶಿ, ಆಮೇಲೆ ಸಿಎಸ್‌ಎಫ್‌ ಅಂತ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಮನಸ್ಸನ್ನು ಕೆಡಿಸುವ ಕೆಲಸ ಮಾಡಬಾರದು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನಮ್ಮ ನಿಲುವನ್ನು ರಾಹುಲ್‌ ಗಾಂಧಿ ಯವರು ಹೇಳಿದ್ದಾರೆ. ಸಂವಿಧಾನವೇ ನಮ್ಮ ಧರ್ಮ. ಸಂವಿಧಾನ ಚೌಕಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು. ಮಕ್ಕಳನ್ನು ರಾಜಕಾರಣ ವಿಚಾರಕ್ಕೆ ಬಳಸಿಕೊಳ್ಳುವುದು ಬೇಡ ಎಂದರು. ದೇಶದ ಏಕತೆ, ಸಮಗ್ರತೆ, ಶಾಂತಿ ಬಹಳ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next