Advertisement

ನಮ್ಮ ಸಂಪ್ರದಾಯಗಳು ಮುಖ್ಯ, ಆದರೆ ಕೋವಿಡ್ ಬಗ್ಗೆಯೂ ನಿಗಾ ಇರಲಿ: ಡಿಕೆಶಿ

07:32 PM Aug 22, 2020 | sudhir |

ರಾಮನಗರ : ರಾಜ್ಯದೆಲ್ಲೆಡೆ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಾಗ ಎಚ್ಚರದಿಂದ ಇರಬೇಕು, ಜೊತೆಗೆ ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಡಿ.ಕೆ. ಶಿವಕುಮಾರ್ ಅವರು ತಮ್ಮ ಹುಟ್ಟೂರು ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ತಂದೆ ಡಿ.ಕೆ. ಕೆಂಪೇಗೌಡರು ಮತ್ತು ಪೂರ್ವಜರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಈ ಮಾಧ್ಯಮದ ಜೊತೆ ಮಾತನಾಡಿದ ಅವರು ನಮ್ಮ ಕುಟುಂಬ ಮೊದಲಿನಿಂದಲೂ ನಡೆಸಿಕೊಂಡು ಬರುತಿದ್ದ ಸಂಪ್ರದಾಯ ಹಾಗಾಗಿ ಈ ಬಾರಿ ಗಣೇಶ ಹಬ್ಬದ ದಿನದಂದು ಪೂರ್ವಜರ ಸಮಾಧಿಗಳಿಗೆ ನಮನ ಸಲ್ಲಿಸಿದೆವು ಎಂದು ಹೇಳಿದ್ದಾರೆ. ಪೂಜೆಯಲ್ಲಿ ಶಿವಕುಮಾರ್ ಅವರ ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್ ಪೂಜೆಯಲ್ಲಿ ಪಾಲ್ಗೊಂಡರು.

ನಂತರ ಮಾತನಾಡಿದ ಡಿಕೆಶಿ ಫೋನ್ ಟ್ಯಾಪಿಂಗ್ ನಡೆದಿಲ್ಲ ಎಂಬ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ “ನನಗೆ ನನ್ನ ಫೋನ್ ಟ್ಯಾಪ್ ಆಗ್ತಿದೆ ಎಂದು ಅನುಮಾನವಿದೆ ಹಾಗಾಗಿ ದೂರು ಕೊಟ್ಟಿದ್ದೇನೆ, ಈ ಬಗ್ಗೆ ತನಿಖೆ ನಡೆಯಲಿ, ಆಮೇಲೆ ಮಾತಾಡ್ತೀನಿ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next