Advertisement
ಒಂದೆಡೆ ವಿವಿಧ ಸಂಘ-ಸಂಸ್ಥೆಗಳು, ಇಲಾಖೆಗಳು ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಣೆ ಮಾಡುತ್ತಿರುವುದರಿಂದಲೂ ಮೆಡಿಕಲ್ಸ್‌ಗಳ ಅವಲಂಬನೆ ಕಡಿಮೆಯಾಗಿದೆ. ಡಿಸ್ಟ್ರಿಬ್ಯೂಟರ್‌ಗಳು ಸಕಾಲಕ್ಕೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಒದಗಿಸುತ್ತಿದ್ದುದರಿಂದ ಗ್ರಾಹಕರು ಇವೆರಡೂ ಅಗತ್ಯ ಪರಿಕರಗಳಿಗಾಗಿ ಮೆಡಿಕಲ್‌ಗೆ ಬಂದು ವಾಪಸಾಗುವ ಪ್ರಮೇಯ ಕಡಿಮೆಯಾಗುತ್ತಿದೆ.
ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಬೇಕಾದ ಸ್ಯಾನಿಟೈಸರ್‌ನ್ನು ಅಲ್ಲಿಯೇ ಉತ್ಪಾದಿಸಲಾಗುತ್ತಿದೆ. ಜತೆಗೆ ಇತರ ಕೆಲವು ಖಾಸಗಿ ಸಂಸ್ಥೆಗಳು ಕೂಡ ಸ್ಯಾನಿಟೈಸರ್ ಉತ್ಪಾದಿಸುತ್ತಿವೆ. ಸ್ಯಾನಿಟೈಸರ್‌ಗೆ ತೀವ್ರ ಕೊರತೆಯುಂಟಾಗಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತ ಮೂರು ಸ್ಯಾನಿಟೈಶರ್ ಉತ್ಪಾದಕರಿಗೆ ತುರ್ತಾಗಿ ಅನುಮತಿ ನೀಡಿತ್ತು. ಬಟ್ಟೆ ಮಾಸ್ಕ್ ಬಳಕೆ ಹೆಚ್ಚಳ
ಗ್ರಾಮೀಣ ಸಹಿತ ಜಿಲ್ಲೆಯಲ್ಲಿ ಬಟ್ಟೆ ಮಾಸ್ಕ್ಗಳ ಬಳಕೆ ಹೆಚ್ಚಾಗುತ್ತಿದೆ. ಹೆಚ್ಚಿನ ಮೆಡಿಕಲ್‌ಗಳಲ್ಲಿ ಬಟ್ಟೆ ಮಾಸ್ಕ್ ಗಳು ಬೇಕಾದಷ್ಟು ಲಭ್ಯ ಇವೆ. ಸ್ಥಳೀಯವಾಗಿಯೂ ಇವುಗಳ ಉತ್ಪಾದನೆ ಹೆಚ್ಚಾಗಿರುವುದರಿಂದ ಕೊರತೆ ಕಡಿಮೆಯಾಗಿದೆ ಎನ್ನುತ್ತಾರೆ ಮೆಡಿಕಲ್‌ವೊಂದರ ಮಾಲಕರು.
Related Articles
ಕೊರತೆ ಇಲ್ಲ
ಮಾಸ್ಕ್, ಸ್ಯಾನಿಟೈಸರ್ ಮಾತ್ರವಲ್ಲದೆ ಯಾವುದೇ ಔಷಧಗಳ ಕೊರತೆ ಕೂಡ ಇಲ್ಲ. ಸ್ಯಾನಿಟೈಸರ್ ಉತ್ಪಾದಿಸುವ ಓರ್ವ ಉತ್ಪಾದಕರು ಜಿಲ್ಲೆಯಲ್ಲಿ ಸ್ಯಾನಿಟೈಸರ್‌ಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಮೈಸೂರಿಗೆ ಕಳುಹಿಸಿಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೇಂದ್ರ ಸರಕಾರ ನಿಗದಿಪಡಿಸಿದಂತೆ 100 ಎಂಎಲ್ ಸ್ಯಾನಿಟೈಸರ್‌ಗೆ 50 ರೂ. ಬೆಲೆಯಲ್ಲೇ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಇಲಾಖೆ ನಿಗಾ ವಹಿಸುತ್ತಿದೆ.
-ರಮಾಕಾಂತ್ ಕುಮ್ಟೆ, ಉಪ ಔಷಧ ನಿಯಂತ್ರಕರು, ದ.ಕ. ಜಿಲ್ಲೆ
Advertisement