Advertisement
ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ. ಎಂಜಿನಿಯರಿಂಗ್ ಉಪ ವಿಭಾಗ ಬೆಳ್ತಂಗಡಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ, ಗ್ರಾ.ಪಂ. ಮೇಲಂತಬೆಟ್ಟು ಆಶ್ರಯದಲ್ಲಿ 16.57 ಲಕ್ಷ ರೂ. ಅನುದಾನದಿಂದ ಮುಂಡೂರು ಗ್ರಾಮದ ಕೋಟಿಕಟ್ಟೆ ಅಂಗನವಾಡಿ ಕಟ್ಟಡ ಉದ್ಘಾಟನೆ, ರಾಜ್ಯ ಸರಕಾರದ ಪ.ಜಾ.- ಪ.ಪಂ.ದ ರಸ್ತೆ ನಿರ್ಮಾಣದಡಿ 113 ಲಕ್ಷ ರೂ. ಅನುದಾನದದಿಂದ ಬದ್ಯಾರು-ಕೋಟಿಕಟ್ಟೆ 1.48 ಕಿ. ಮೀ. ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದರು.
ಮುಂಡೂರು ಗ್ರಾಮದ ಸಮಸ್ತ ಜನತೆ ಪರವಾಗಿ ಶಾಸಕರನ್ನು ಸಮ್ಮಾನಿಸಲಾಯಿತು. ಅಂಗನವಾಡಿ ನಡೆಸಲು 2006 ರಿಂದ 2018ರ ತನಕ ಉಚಿತವಾಗಿ ಕಟ್ಟಡವನ್ನು ಒದಗಿಸಿದ ಸ್ಥಳೀಯ ದಾನಿ ಗುರುವಪ್ಪ ಸಾಲಿಯಾನ್ ಕೇರಿಯಾರು ಅವರನ್ನು ಶಾಸಕರು ಸಮ್ಮಾನಿಸಿದರು. ಮೇಲಂತಬೆಟ್ಟು ಗ್ರಾ.ಪಂ.ನ ನಿವೇಶನ ರಹಿತ 3 ಕುಟುಂಬಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದರು. ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ನಳಿನಿ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ, ಅಳದಂಗಡಿ ಜಿ.ಪಂ. ಕ್ಷೇತ್ರದ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ, ಮುಂಡೂರು ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸುಮಾರು 9 ಲಕ್ಷ ರೂ. ಅನುದಾನ ಒದಗಿಸಿ ಕಾಮಗಾರಿ ನಡೆಸಲಾಗಿದ್ದು, ಮುಂದಕ್ಕೆ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
Related Articles
Advertisement
ಗುರುವಪ್ಪ ಸಾಲ್ಯಾನ್, ಅಶೋಕ ಕುಮಾರ್ ಕೊಡಕ್ಕಾಲು, ವಾಸು ಪೂಜಾರಿ ಕೊದ್ಕೋಳಿ, ಆನಂದ ಸಾಲ್ಯಾನ್ ಮುಂಡೂರು, ಜಯಾನಂದ ಬಂಗೇರ, ಚಾಮರಾಜ ಸೇಮಿತ, ಅರವಿಂದ ಭಟ್ ಎಂ., ಇಸುಬು ಬಡೆಕ್ಕಿಲ, ಅತ್ತುಸ್ ವೇಗಸ್ ಕಲ್ಯಾರಡ್ಕ, ರಮಾನಂದ ಸಾಲ್ಯಾನ್ ಮುಂಡೂರು, ಹರೀಶ್ ಕುದ್ಕೋಳಿ, ಆಶಾ ಕಾರ್ಯಕರ್ತೆ ಸುಶೀಲಾ ಶೆಟ್ಟಿ, ಸ್ಟೇನಿ ವೇಗಸ್, ಶ್ರೀಧರ ಅಂಚನ್, ವಸಂತ ಪೂಜಾರಿ ನಾನಿಲ್ತ್ಯಾರು, ಅಶೋಕ್ ಕುಮಾರ್ ಜೈನ್, ಹರಿಶ್ಚಂದ್ರ ಬಳ್ಳಿದಡ್ಡ ಸಹಕರಿಸಿದರು.
ರಾಜೀವ ಸಾಲ್ಯಾನ್ ಮುಂಡೂರು ಪ್ರಸ್ತಾವಿಸಿ, ಅಂಗನವಾಡಿ ಸಹಾಯಕಿ ಸುಧಾಮಣಿ ಹರಿಶ್ಚಂದ್ರ ವರದಿ ವಾಚಿಸಿದರು. ಪಿಡಿಒ ರಾಜಶೇಖರ್ ಶೆಟ್ಟಿ ಸ್ವಾಗತಿಸಿ, ಮೇಲ್ವಿಚಾರಕಿ ನಾಗವೇಣಿ ವಂದಿಸಿ, ಸುಧಾಮಣಿ ರಮಾನಂದ ನಿರೂಪಿಸಿದರು.
ಬಹುದಿನದ ಬೇಡಿಕೆ ಈಡೇರಿಸುವೆಮುಂಡೂರು ಗ್ರಾಮದ ಬಹುದಿನದ ಬೇಡಿಕೆ ಹಾಗೂ ದಿ| ಮಹೇಶ್‌ಕುಮಾರ್ ನಡಕ್ಕರ ಇವರ ಪ್ರಮುಖ ಬೇಡಿಕೆಯಾಗಿದ್ದ ಬದ್ಯಾರು – ಮುಂಡೂರು ದೇವಸ್ಥಾನದ ತನಕದ ರಸ್ತೆಯಲ್ಲಿ ಇದೀಗ ಕೋಟಿಕಟ್ಟೆ ವರೆಗಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದ ಕಾಮಗಾರಿಗೆ ಶೀಘ್ರದಲ್ಲೆ ಬಂದು ಶಿಲಾನ್ಯಾಸ ನಡೆಸಲಿದ್ದೇನೆ. ಈ ಮೂಲಕ ಈ ಭಾಗದ ಬಹುದಿನದ ಬೇಡಿಕೆಯನ್ನು ಚುನಾವಣೆಯ ಮೊದಲು ಈಡೇರಿಸುತ್ತೇನೆ ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು.