ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 19 ಮಂದಿಗೆ ಕೋವಿಡ್ ದೃಢಪಟ್ಟಿದೆ. 22 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 33,653 ಮಂದಿ ಸೋಂಕಿಗೊಳಗಾಗಿದ್ದು, ಈ ಪೈಕಿ 32,640 ಮಂದಿ ಗುಣಮುಖರಾಗಿದ್ದಾರೆ. 274 ಮಂದಿ ವಿವಿಧ ಆಸ್ಪತ್ರೆಗಳಲ್ಲಿದ್ದಾರೆ. ಈವರೆಗೆ 739 ಮಂದಿ ಮೃತಪಟ್ಟಿದ್ದಾರೆ.
ಇಂದು 42 ಕೇಂದ್ರದಲ್ಲಿ ಲಸಿಕೆ :
ದ.ಕ. ಜಿಲ್ಲೆಯ 42 ಕೇಂದ್ರಗಳಲ್ಲಿ ಬುಧವಾರ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. 3,748 ಮಂದಿ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆ ಯಲ್ಲಿ ಜ. 26ರಂದು ದ.ಕ., ಉಡುಪಿ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ನಡೆಯಲಿಲ್ಲ. ಎರಡನೇ ಹಂತದ ಲಸಿಕೆಗೆ ನೋಂದಣಿ ಅವಧಿಯನ್ನು ಜ. 25ರ ಬದಲು ಜ. 30ರ ವರೆಗೆ ವಿಸ್ತರಿಸಲಾಗಿದೆ.
ಉಡುಪಿ: 7 ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 7 ಜನರಿಗೆ ಕೋವಿಡ್ ಸೋಂಕು ತಗಲಿದೆ. ಇವರಲ್ಲಿ ಉಡುಪಿ, ಕಾರ್ಕಳದ ತಲಾ ಒಬ್ಬರು, ಕುಂದಾಪುರದ ಮೂವರು, ಹೊರ ಜಿಲ್ಲೆಯ ಇಬ್ಬರು ಇದ್ದಾರೆ. ಸೋಮವಾರ 7 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು. 40 ಸಕ್ರಿಯ ಪ್ರಕರಣಗಳಿವೆ.
ಬುಧವಾರ 30 ಕೇಂದ್ರಗಳಲ್ಲಿ ಸುಮಾರು 3 ಸಾವಿರ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಕಾಸರಗೋಡು ಜಿಲ್ಲೆ: 85 ಮಂದಿಗೆ ಸೋಂಕು
ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ 85 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 154 ಮಂದಿ ಗುಣಮುಖರಾಗಿದ್ದಾರೆ.