Advertisement

ಫೆಡರರ್‌ 100ನೇ ಪ್ರಶಸ್ತಿ ವಿಳಂಬ ಸೆಮಿಫೈನಲ್‌ ಗೆದ್ದ ಜೊಕೋವಿಕ್‌

06:05 AM Nov 05, 2018 | |

ಪ್ಯಾರಿಸ್‌: ಸ್ವಿಸ್‌ ತಾರೆ ರೋಜರ್‌ ಫೆಡರರ್‌ ಅವರ 100ನೇ ಟೆನಿಸ್‌ ಪ್ರಶಸ್ತಿ ಸಂಭ್ರಮ ಮುಂದೂಡಲ್ಪಟ್ಟಿದೆ. ಶನಿವಾರ ರಾತ್ರಿ ನಡೆದ “ಪ್ಯಾರಿಸ್‌ ಮಾಸ್ಟರ್’ ಟೆನಿಸ್‌ನಲ್ಲಿ ನೊವಾಕ್‌ ಜೊಕೋವಿಕ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಫೆಡರರ್‌ ಸೋಲುವುದರೊಂದಿಗೆ ನಿರಾಸೆ ಅನುಭವಿಸಿದರು.

Advertisement

ತೀವ್ರ ಪೈಪೋಟಿಯಿಂದ ಕೂಡಿದ ಸೆಮಿ ಸಮರದಲ್ಲಿ ನೊವಾಕ್‌ ಜೊಕೋವಿಕ್‌ 7-6 (6), 5-7, 7-6 (3) ಅಂತರದಿಂದ ಗೆದ್ದು ನಿಟ್ಟಿಸಿರೆಳೆದರು. ಇದರೊಂದಿಗೆ ಜೊಕೋವಿಕ್‌ ಸತತ 22 ಪಂದ್ಯಗಳನ್ನು ಗೆದ್ದಂತಾಯಿತು. ಹಾಗೆಯೇ 5ನೇ ಪ್ಯಾರಿಸ್‌ ಮಾಸ್ಟರ್ ಟೆನಿಸ್‌ ಪ್ರಶಸ್ತಿಗೆ ಇನ್ನಷ್ಟು ಹತ್ತಿರವಾದರು. ಫೈನಲ್‌ ಕಾಳಗದಲ್ಲಿ ಅವರು ರಶ್ಯದ ಕರೆನ್‌ ಕಶನೋವ್‌ ಸವಾಲನ್ನು ಎದುರಿಸಲಿದ್ದಾರೆ. ಮೊದಲ ಸೆಮಿಫೈನಲ್‌ನಲ್ಲಿ ಕಶನೋವ್‌ 6-4, 6-1 ಅಂತರದಿಂದ ಡೊಮಿನಿಕ್‌ ಥೀಮ್‌ ಅವರನ್ನು ಹಿಮ್ಮೆಟ್ಟಿಸಿದರು.

“ಇದು ಈ ವರ್ಷ ನಾನು ಆಡಿದ ಅತ್ಯಂತ ರೋಮಾಂಚಕಾರಿ ಹಾಗೂ ತೀವ್ರ ಪೈಪೋಟಿಯ ಪಂದ್ಯಗಳಲ್ಲೊಂದು. ಈ ವರ್ಷದ ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ರಫೆಲ್‌ ನಡಾಲ್‌ ವಿರುದ್ಧದ ಮುಖಾಮುಖೀ ಕೂಡ ಇಷ್ಟೇ ಪೈಪೋಟಿಯಿಂದ ಕೂಡಿತ್ತು’ ಎಂಬುದಾಗಿ ಜೊಕೋವಿಕ್‌ ಹೇಳಿದರು.ಇದರೊಂದಿಗೆ 12 ವರ್ಷಗಳ ಟೆನಿಸ್‌ ಬಾಳ್ವೆಯಲ್ಲಿ ಫೆಡರರ್‌ ವಿರುದ್ಧ ಜೊಕೋವಿಕ್‌ ಮೊದಲ ಸಲ ಸತತ 4 ಪಂದ್ಯಗಳನ್ನು ಗೆದ್ದಂತಾಯಿತು. ಹಾಗೆಯೇ ಫೆಡರರ್‌ ಎದುರಿನ ಗೆಲುವಿನ ಸಂಖ್ಯೆಯನ್ನು 25ಕ್ಕೆ ಏರಿಸಿಕೊಂಡರು.

ಕಶನೋವ್‌ಗೆ ಸುಲಭ ಜಯ
ಮೊದಲ ಸೆಮಿಫೈನಲ್‌ನಲ್ಲಿ ರಶ್ಯದ 6 ಅಡಿ, 6 ಇಂಚೆತ್ತರದ, 22ರ ಹರೆಯದ ಲಂಬೂ ಟೆನಿಸಿಗ ಎದುರಾಳಿ ಡೊಮಿನಿಕ್‌ ಥೀಮ್‌ಗೆ “ಡಾಮಿನೇಟ್‌’ ನಡೆಸಲು ಎಲ್ಲೂ ಅವಕಾಶ ಕೊಡಲಿಲ್ಲ. ಈ ಪಂದ್ಯ ಏಕಪಕ್ಷೀಯವಾಗಿಯೇ ಸಾಗಿತು.

“ಇದು ನಾನಾಡಿದ ಅತ್ಯುತ್ತಮ ಪಂದ್ಯಗಳಲ್ಲೊಂದು. ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವಲ್ಲಿ ನಾನೀಗ ಯಶಸ್ವಿಯಾಗುತ್ತಿರುವುದು ಸಂತೋಷದ ಸಂಗತಿ’ ಎಂಬುದಾಗಿ ಮೊದಲ ಬಾರಿಗೆ “ಮಾಸ್ಟರ್ 1000′ ಕೂಟದ ಫೈನಲ್‌ ಪ್ರವೇಶಿಸಿದ ಕಶನೋವ್‌ ಹೇಳಿದರು. ಕಶನೋವ್‌ ಈಗಾಗಲೇ ಈ ವರ್ಷ 2 ಇಂಡೋರ್‌ ಟೆನಿಸ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next