Advertisement

ಉಡುಪಿ: ಮೆಹಂದಿಯಲ್ಲಿ ತಡರಾತ್ರಿವರೆಗೂ ಡಿಜೆ ಸೌಂಡ್‌ : ಪೊಲೀಸ್‌ ದಾಳಿ

10:49 PM Feb 27, 2023 | Team Udayavani |

ಉಡುಪಿ: ಕುಂಜಿಬೆಟ್ಟು ಪರಿಸರದಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಅವಧಿಗೂ ಮೀರಿ ಯಾವುದೇ ಪರವಾನಿಗೆ ಇಲ್ಲದೆ ಡಿಜೆ ಸೌಂಡ್‌ ಹಾಕಿದ್ದ ಮನೆಗೆ ದಾಳಿ ಮಾಡಿದ ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ಫೆ.26ರಂದು ಕುಂಜಿಬೆಟ್ಟು ಪರಿಸರದಲ್ಲಿ ತಡರಾತ್ರಿ 1.30ರ ಸುಮಾರಿಗೆ ಮೆಹಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿಜೆ ಸೌಂಡ್‌ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ರೌಂಡ್ಸ್‌ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ 76 ಬಡಗಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿ ಆರೋಪಿ ಶರತ್‌ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾಗಿ ಡಿಜೆ ಸೌಂಡ್‌ ಹಾಕಿಕೊಂಡು ರಾತ್ರಿ 2 ಗಂಟೆಯವರೆಗೆ ನೃತ್ಯ ಮಾಡುತ್ತಿದ್ದರು.

ಪೊಲೀಸರು 4 ಸೌಂಡ್‌ ಬಾಕ್ಸ್‌, ಡಿಜೆ ಪರಿಕರಗಳು, ಲೈಟಿಂಗ್‌ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next